ಪುನೀತ್ ರಾಜ್ ಕುಮಾರ್ (Puneeth Rajkumar) ಕನಸಿನ ಗಂಧದ ಗುಡಿ (Gandhad Gudi) ಚಿತ್ರ ಬಿಡುಗಡೆಯ ಹೊತ್ತಲ್ಲಿ ಅಪ್ಪು ಬಳಸುತ್ತಿದ್ದ ಅವರ ಅಧಿಕೃತ ಟ್ವಿಟ್ಟರ್ (Twitter) ಖಾತೆ ಮತ್ತೆ ಆಕ್ಟೀವ್ ಆಗಿದೆ. ವರ್ಷದಿಂದ ಈ ಖಾತೆಯನ್ನೂ ಯಾರೂ, ಯಾವುದೇ ಕಾರಣಕ್ಕೂ ಬಳಸುತ್ತಿರಲಿಲ್ಲ. ವರ್ಷದ ನಂತರ, ಅದರಲ್ಲೂ ಅವರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಬಿಡುಗಡೆ ಆಗುತ್ತಿರುವ ಸಂದರ್ಭದಲ್ಲಿ ಅದು ಮತ್ತೆ ಆಕ್ಟೀವ್ ಆಗಿದೆ.
Advertisement
ಇದೇ ತಿಂಗಳು ಅಪ್ಪು (Appu) ಇದೇ ಖಾತೆಯಲ್ಲಿ ಗಂಧದ ಗುಡಿ ಬಗ್ಗೆ ಟ್ವಿಟ್ ಮಾಡಿದ್ದರು. ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದರು. ಆನಂತರ ಅಪ್ಪು ನಿಧನರಾದರು. ವರ್ಷದ ನಂತರ ಆ ಖಾತೆಯಲ್ಲಿ ಗಂಧದ ಗುಡಿ ಬಗ್ಗೆಯೇ ಅಪ್ ಡೇಟ್ ಬಂದಿದ್ದು, ‘ನಿಮ್ಮನ್ನೆಲ್ಲ ನೋಡುವ ಕಾತರದಲ್ಲಿ’ ಎಂದು ಬರೆಯಲಾಗಿದೆ. ಅಪ್ಪು ಮತ್ತೆ ಹುಟ್ಟಿ ಬಂದರು ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ಟ್ವಿಟ್ ನೋಡಿ ಭಾವುಕರಾಗಿದ್ದಾರೆ.
Advertisement
ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ…
Looking forward to see you all in the theaters ❤️
– Team PRK#GandhadaGudi @Ashwini_PRK #Amoghavarsha @PRK_Productions @PRKAudio @AJANEESHB #Mudskipper @pratheek_dbf @KRG_Studios @KRG_Connects #GGMovie #PowerInU pic.twitter.com/9gEwyGCzIT
— Puneeth Rajkumar (@PuneethRajkumar) October 27, 2022
Advertisement
ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.
Advertisement
ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ.