ಯುವರಾಜ್ ಕುಮಾರ್ (Yuvraj Kumar) ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿರುವ ಯುವ (Yuva) ಚಿತ್ರದ ಮತ್ತೊಂದು ಹಾಡು ಇಂದು ಬಿಡುಗಡೆ ಆಗಿದೆ. ‘ಅಪ್ಪುಗೆ’ (Appuge) ಹೆಸರಿನಲ್ಲಿ ಮೂಡಿ ಬಂದಿರುವ ಈ ಹಾಡಿನ ಲಿರಿಕಲ್ ವಿಡಿಯೋವನ್ನು ಪುನೀತ್ ರಾಜ್ ಕುಮಾರ್ ಪುತ್ರಿ ವಂದಿತಾ ಇಂದು ಬಿಡುಗಡೆ ಮಾಡಿದರು.
ಅಪ್ಪುಗೆ ಮೇಲೆ ಚಿತ್ರಿತವಾದ ವಿಶೇಷ ಹಾಡು ಇದಾಗಿದ್ದು, ಸಂತೋಶ್ ಆನಂದ್ ರಾಮ್ (Santhosh Anand Ram) ನಿರ್ದೇಶನದಲ್ಲಿ, ಹೊಂಬಾಳೆ ಫಿಲಂಸ್ ನಲ್ಲಿ ಬ್ಯಾನರ್ ಅಡಿ ವಿಜಯ್ ಕಿರಗಂದೂರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಹಾಡು ಬಿಡುಗಡೆ ಆಗಿದೆ.
ಲಿರಿಕಲ್ ವಿಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಯುವರಾಜ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಅಪ್ಪು ಮಗಳು ವಂದಿತಾ (Vandita) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ತಂದೆ ಮಗನ ಬಾಂಧ್ಯವದ ಹಾಡು ಇದಾಗಿದ್ದು, ಯುವ ಸಿನಿಮಾದ ಬಹುಮುಖ್ಯ ಘಟ್ಟದಲ್ಲಿ ಹಾಡು ಇರಲಿದೆ. ಈ ಹಾಡನ್ನು ಬಿಡುಗಡೆ ಮಾಡಿದ ವಂದಿತಾಗೆ ಚಿತ್ರತಂಡದಿಂದ ಅಪ್ಪು ಫೋಟೋ ಉಡುಗೊರೆಯಾಗಿ ನೀಡಲಾಯಿತು. ಅಪ್ಪನ ಫೋಟೋ ನೋಡಿ ವಂದಿತಾ ಭಾವುಕರಾದರು.
ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿತ್ತು, ವಿಜಯ್ ಪ್ರಕಾಶ್ ಗೀತೆಗೆ ಧ್ವನಿಯಾಗಿದ್ದಾರೆ. ಈ ಹಾಡಿನ ಸಾಹಿತ್ಯ ಸಂತೋಷ್ ಆನಂದ್ ರಾವ್ ಅವರ ಬರವಣಿಗೆಯಲ್ಲಿ ಮೂಡಿ ಬಂದಿದೆ.