ಪುನೀತ್ ನಿಧನಕ್ಕೆ ಕಂಬನಿ ಮಿಡಿದ ಭಾರತೀಯ ಸಿನಿತಾರೆಯರು

Public TV
7 Min Read
PUNEET RAJKUMAR

ಬೆಂಗಳೂರು: ಸ್ಯಾಂಡಲ್‍ವುಡ್ ನಟ ದೊಡ್ಮನೆ ಹುಡುಗ ನಟ ಪುನೀತ್ ರಾಜ್‍ಕುಮಾರ್ ಅಗಲಿಕೆ ಸ್ಯಾಂಡಲ್‍ವುಡ್ ಸಿನಿಮಾರಂಗವಷ್ಟೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ.

FotoJet 2 22

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡು ಇಡೀ ಚಂದನವನ ಸ್ತಬ್ದವಾಗಿದೆ. ಇದು ಕೇವಲ ಕನ್ನಡ ಚಿತ್ರಕ್ಕೆ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಎಂದು ಪರಭಾಷಾ ಸ್ಟಾರ್‌ಗಳು ಟ್ವೀಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಯಸ್ಸಲ್ಲಿ 10 ವರ್ಷ ಅಪ್ಪುಗೆ ಕೊಟ್ಟು ನನ್ನ ಆ ರೀತಿ ಮಾಡಿದ್ರೆ ಚೆನ್ನಾಗಿರ್ತಿತ್ತು: ಸೋಮಶೇಖರ್ ರೆಡ್ಡಿ ಕಣ್ಣೀರು

kamal hassan web 1

ಡಾ. ರಾಜ್‍ಕುಮಾರ್ ಕುಟುಂಬದೊಂದಿಗೆ ಅಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿರುವ ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಪುನೀತ್ ಇಷ್ಟು ಬೇಗ ಹೋಗಿದ್ದು, ಆಘಾತಕಾರಿ, ಅರಗಿಸಿಕೊಳ್ಳಲು ಆಗದಂತಹ ಮತ್ತು ಹೃದಯ ವಿದ್ರಾವಕ ಸುದ್ದಿಯಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕುಟುಂಬಕ್ಕೆ ನನ್ನ ಸಂತಾಪ. ಒಟ್ಟಾರೆಯಾಗಿ ಕನ್ನಡ/ಭಾರತೀಯ ಚಲನಚಿತ್ರ ಬಂಧುಗಳಿಗೆ ಇದು ಒಂದು ದೊಡ್ಡ ನಷ್ಟ. ಈ ದುಃಖವನ್ನು ಭರಿಸುವ ಶಕ್ತಿ ಎಲ್ಲರಿಗೂ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಪುನೀತ್‍ಗೆ ಬಹಳ ಅಚ್ಚುಮೆಚ್ಚಿನ ಗೆಳೆಯರಾಗಿದ್ದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಳ್ಳುವುದರ ಜೊತೆಗೆ, ಸಂಪೂರ್ಣವಾಗಿ ಶಾಕ್ ಆಗಿದೆ. ಪದಗಳಲ್ಲಿ ನಷ್ಟವನ್ನು ಹೇಳಲಾಗುವುದಿಲ್ಲ. ನನ್ನ ಬಹುಕಾಲದ ಗೆಳೆಯ ಪುನೀತ್ ಇನ್ನಿಲ್ಲ. ನಾವು ಪರಸ್ಪರ ಗೌರವ ಮತ್ತು ಪ್ರೀತಿ ಹೊಂದಿದ್ದೇವೆ. ಈಗಲೂ ನಂಬಲು ಆಗುತ್ತಿಲ್ಲ. ಅವರ ವಿನಮ್ರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ಹಲವಾರು ಸಮಾರಂಭಗಳಲ್ಲಿ ಪುನೀತ್ ಅವರ ಡ್ಯಾನ್ಸ್ ಎಂದರೆ ನನಗೆ ಬಹಳ ಇಷ್ಟ ಎಂದು ಅಲ್ಲು ಅರ್ಜುನ್ ಹೇಳಿದ್ದರು. ಇದನ್ನೂ ಓದಿ: ಚೆನ್ನೈನಲ್ಲಿ ಹುಟ್ಟಿ ಕನ್ನಡನಾಡಲ್ಲಿ ಬೆಳೆದ ಪವರ್ ಸ್ಟಾರ್ ಲೈಫ್ ಜರ್ನಿ ಇಲ್ಲಿದೆ

ಟಾಲಿವುಡ್ ನಟ ಜ್ಯೂನಿಯರ್ ಎನ್‍ಟಿಆರ್ ಪುನೀತ್ ಫೋಟೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಳ್ಳುವುದರ ಜೊತೆಗೆ, ಎದೆ ಗುಂದಿದೆ. ನೀವು ಇಷ್ಟು ಬೇಗ ಹೋಗಿದ್ದೀರಾ ಎಂದು ನಂಬಲು ಆಗುತ್ತಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಪುನೀತ್ ಹಾಗೂ ಎನ್‍ಟಿಆರ್ ಅತ್ಯುತ್ತಮ ಗೆಳೆಯರಾಗಿದ್ದು, ಪುನೀತ್ ಅಭಿನಯದ ಚಕ್ರವ್ಯೂಹ ಸಿನಿಮಾದಲ್ಲಿ ಅಪ್ಪುವಿಗಾಗಿ ಗೆಳೆಯ, ಗೆಳೆಯ ಹಾಡನ್ನು ಹಾಡಿದ್ದರು.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರು, ಪುನೀತ್ ರಾಜ್‍ಕುಮಾರ್ ಅವರ ನಿಧನದ ಸುದ್ದಿಯಿಂದ ಆಘಾತ ಮತ್ತು ತೀವ್ರ ದುಃಖವಾಗಿದೆ. ನಾನು ಭೇಟಿಯಾದ ಮತ್ತು ಸಂವಹನ ನಡೆಸಿದ ಅತ್ಯಂತ ವಿಶಾಲ ಹೃದಯದ ವ್ಯಕ್ತಿಗಳಲ್ಲಿ ಪುನೀತ್ ಒಬ್ಬರು. ಅವರ ಕುಟುಂಬ ಮತ್ತು ಪ್ರೀತಿ ಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

ಮತ್ತೊಂದೆಡೆ ಕಾಲಿವುಡ್ ನಟ ಕಮಲ್ ಹಾಸನ್ ಅವರು ನನ್ನ ಪ್ರೀತಿಯ ಕಿರಿಯ ಸಹೋದರ ಪುನೀತ್ ರಾಜ್‍ಕುಮಾರ್ ಅವರ ನಿಧನ ಅತ್ಯಂತ ಅನಿರೀಕ್ಷಿತವಾಗಿತ್ತು. ನಾವು ಪರಸ್ಪರ ಪ್ರೀತಿ ಹೊಂದಿದ್ದೇವೆ. ಅವರ ಕುಟುಂಬಕ್ಕೆ ಮತ್ತು ಕರ್ನಾಟಕದಲ್ಲಿರುವ ಅವರ ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪಗಳು ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾಲಿವುಡ್ ನಟ ಸೂರ್ಯ ಅವರು, ಈ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಆತ್ಮೀಯ ಪುನೀತ್ ರಾಜ್‍ಕುಮಾರ್ ಅವರು, ನನ್ನ ಸಹೋದರ ಮತ್ತು ಸಹ ಪ್ರಯಾಣಿಕ. ನಿಮ್ಮ ಪ್ರೀತಿಯ ಸ್ನೇಹ ಮತ್ತು ಸಹೋದರತ್ವವನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ನಾನು ಈಗಲೂ ಶಾಕ್‍ನಲ್ಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ನಟ ಧನುಷ್ ಅವರು, ನನ್ನ ಸ್ನೇಹಿತ ಪುನೀತ್ ನನ್ನ ಹೃದಯ ಹೊಡೆದು ಹೋಯಿತು. ನನ್ನ ಸ್ನೇಹಿತ ಶಾಂತಿಯಿಂದ ವಿಶ್ರಾಂತಿ ಪಡೆಯಿರಿ. ನೀವು ಉತ್ತಮ ಸ್ಥಳದಲ್ಲಿರುವಿರಿ ಎಂದು ಭಾವಿಸುತ್ತೇನೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಸಹೋದರ ಪುನೀತ್ ಈ ವಿಚಾರವನ್ನು ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪುನೀತ್ ಜೊತೆ ಯುವರತ್ನ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ನಟಿ ಸಯೀಶಾ ಅವರು, ಪುನೀತ್ ಅವರು ನನ್ನ ಸ್ನೇಹಿತ, ನನ್ನ ಕುಟುಂಬ, ರತ್ನ. ನನಗೆ ಆಗುತ್ತಿರುವ ದುಃಖವನ್ನು ವಿವರಿಸಲು ನನ್ನಲ್ಲಿ ಪದಗಳಲ್ಲ. ಇದು ತುಂಬಲಾರದ ನಷ್ಟ. ಅವರ ಪತ್ನಿ ಅಶ್ವಿನಿ ಅಕ್ಕ ಮತ್ತು ಅವರ ಪುತ್ರಿಯರಿಗೆ ನನ್ನ ಆಳವಾದ ಸಂತಾಪಗಳು. ಅವರ ಕುಟುಂಬ, ಅವರ ಲಕ್ಷಾಂತರ ಅಭಿಮಾನಿಗಳು ಮತ್ತು ಸ್ನೇಹಿತರೊಂದಿಗೆ ನನ್ನ ಹೃದಯವು ಒಂದಾಗಿದೆ. ಪುನೀತ್ ಅವರೇ ನಿಮ್ಮೊಂದಿಗೆ ಸ್ಕ್ರೀನ್ ಶೇರ್ ಮಾಡಿದ ಗೌರವ ನನಗಿದೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಯುವರತ್ನ ಪುನೀತ್ ಅಭಿನಯಿಸಿದ ಕೊನೆಯ ಚಿತ್ರವಾಗಿದೆ.

 

View this post on Instagram

 

A post shared by Sayyeshaa (@sayyeshaa)

ಪವರ್ ಸಿನಿಮಾದಲ್ಲಿ ಪುನೀತ್ ಜೊತೆ ಅಭಿನಯಿಸಿದ್ದ ನಟಿ ತ್ರಿಷಾ ಅವರು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದನ್ನು ಹೇಳಲು ನಿರಾಕರಿಸುತ್ತೇನೆ ಎಂದು ಬರೆದುಕೊಳ್ಳುವುದರ ಜೊತೆಗೆ ಹೊಡೆದು ಹೋಗಿರುವ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ಪವರ್ ಸಿನಿಮಾದ ನಂತರ ತ್ರಿಷಾ ಪುನೀತ್ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಲು ಸಹಿಹಾಕಿದ್ದರು.

trisha

ಪುನೀತ್ ಜೊತೆ ಮಿಲನ ಹಾಗೂ ಪೃಥ್ವಿ ಎರಡು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ನಟಿ ಪಾರ್ವತಿ ಮೆನನ್ ಅವರು, ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪುನೀತ್ ಫೋಟೋ ಶೇರ್ ಮಾಡಿಕೊಳ್ಳುವುದರ ಜೊತೆಗೆ ಇದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದಷ್ಟು ನೋವುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಬಿಂದಾಸ್ ಸಿನಿಮಾದಲ್ಲಿ ಪುನೀತ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ ನಟಿ ಹನ್ಸಿಕಾ ಮೊಟ್ವಾನಿ ಅವರು ಕೂಡ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದು ಹೃದಯ ವಿದ್ರಾವಕ. ಇದು ನಿಜವಾಗದಿರಲಿ ಎಂದು ನಾನು ಭಾವಿಸುತ್ತೇನೆ. ಪುನೀತ್ ರಾಜ್ ಕುಮಾರ್ ಅವರು ಇನ್ನೂ ಯುವಕರಾಗಿದ್ದಾರೆ ಎಂದು ಪುನೀತ್ ಫೋಟೋ ಶೇರ್ ಮಾಡಿಕೊಳ್ಳುವುದರ ಜೊತೆಗೆ ಬರೆದುಕೊಂಡಿದ್ದಾರೆ.

puneeth 1

Share This Article
Leave a Comment

Leave a Reply

Your email address will not be published. Required fields are marked *