ಅಪ್ಪು ಸ್ನೇಹಜೀವಿ ಆಗಿದ್ದರು, ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯ ಅನೇಕ ಸ್ಟಾರ್ ಕಲಾವಿದರ ಜೊತೆ ಒಂದೊಳ್ಳೆ ಬಾಂಧವ್ಯವಿತ್ತು. ಇನ್ನೂ ತೆಲುಗು ಸ್ಟಾರ್ ತಾರಕ್ ಜೊತೆ ಹೆಚ್ಚಿನ ಆಪ್ತತೆ ಇತ್ತು. `ಚಕ್ರವ್ಯೂಹ’ ಸಿನಿಮಾದಲ್ಲಿ ಅಪ್ಪುಗಾಗಿ ಗೆಳೆಯ ಗೆಳೆಯ ಹಾಡಿಗೆ ಜ್ಯೂ.ಎನ್ಟಿಆರ್(Jr.Ntr) ಧ್ವನಿ ನೀಡಿದ್ದರು. ಇನ್ನೂ ತಾರಕ್ ಮನದಲ್ಲಿ ಮಾತ್ರವಲ್ಲ, ನಟನ ಮನೆಯಲ್ಲೂ ಪುನೀತ್ (Puneeth Rajkumar)ಫೋಟೋ ರಾರಾಜಿಸುತ್ತಿದೆ. ಈ ಕುರಿತ ಫೋಟೋ ಕೂಡ ಸಖತ್ ವೈರಲ್ ಆಗುತ್ತಿದೆ.
ಪುನೀತ್ ಒಬ್ಬರು ಅಜಾತಶತ್ರು, ಪ್ರತಿಯೊಬ್ಬರ ಜೊತೆಗೂ ಒಂದೊಳ್ಳೆಯ ಬಾಂಧವ್ಯವನ್ನ ಹೊಂದಿದ್ದರು. ಟಾಲಿವುಡ್ ನಟ ತಾರಕ್ ಮತ್ತು ಅಪ್ಪು ಸಾಕಷ್ಟು ವರ್ಷಗಳಿಂದ ಸ್ನೇಹಿತರು. ಇನ್ನೂ ತಾರಕ್ ಮನದಲ್ಲಿ ಮಾತ್ರವಲ್ಲ, ತಮ್ಮ ಮನೆಯಲ್ಲಿಯೂ ಪುನೀತ್ ರಾಜ್ಕುಮಾರ್ ಅವರ ಫೋಟೋವನ್ನು ಇಟ್ಟುಕೊಂಡಿದ್ದಾರೆ. ಈ ಫೋಟೋ ಸಹಿತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತಾರಕ್ ಪ್ರೀತಿ ಕಂಡು, ಅಪ್ಪು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಜೂ. ಎನ್ಟಿಆರ್ ಅವರ ತಾತ ಸೀನಿಯರ್ ಎನ್ಟಿಆರ್ ಅವರ ಅಳೆತ್ತರದ ಫೋಟೋ ಪಕ್ಕದಲ್ಲಿ ಅಪ್ಪು ಫೋಟೋವನ್ನು ಕೂಡ ಹಾಕಲಾಗಿದೆ. ಸದ್ಯ ಅಪ್ಪು ಅಭಿಮಾನಿಗಳು ಇದನ್ನು ಕಂಡು ಗೆಳೆತನ ಅಂದ್ರೆ ಇದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ವಿರಹ ಮುಂದುವರೆಯಲಿ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ
ನವೆಂಬರ್ 1ರಂದು ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ(Karnataka Ratna Award) ಮಾಡಲಾಗುವುದು. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ವಿಧಾನಸೌಧದಲ್ಲಿ ಈ ಸಮಾರಂಭ ನಡೆಯಲಿದೆ. ಕನ್ನಡ ರಾಜ್ಯೋತ್ಸವದ ದಿನವೇ ಅಪ್ಪುಗೆ ಈ ಗೌರವ ಸಲ್ಲಿಕೆ ಆಗುತ್ತಿದೆ. ಈ ಸಮಾರಂಭಕ್ಕೆ ಸಾಕ್ಷಿಯಾಗಲು ನಟ ಜೂನಿಯರ್ ಎನ್ಟಿಆರ್ ಹಾಗೂ ರಜನಿಕಾಂತ್ ಅವರು ಆಗಮಿಸುವುದು ಖಚಿತ ಆಗಿದೆ. ಕರ್ನಾಟಕ ಸರ್ಕಾರದಿಂದ ಅವರಿಗೆ ಆಹ್ವಾನ ನೀಡಲಾಗಿದೆ. ಆಹ್ವಾನ ಸ್ವೀಕರಿಸಿರುವ ಅವರು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರುತ್ತಿದ್ದಾರೆ.