ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಸಮಾಧಿಗೆ, ಕುಂಟುಂಬ 11 ದಿನಗಳ ಕಾರ್ಯವನ್ನು ಮಾಡಿದೆ. ವೃದ್ಧೆ ಸುಮಿತ್ರ ಬಾಯಿ ಅವರು ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಮಾಡಿಕೊಂಡು ಬಂದಿದ್ದಾರೆ.
Advertisement
ತುಮಕೂರು ಜಿಲ್ಲೆ ಗುಬ್ಬಿಯಿಂದ ಮಂಡಕ್ಕಿ ಹಾರ ತಯಾರಿಸಿಕೊಂಡು ವೃದ್ದೆ ಸುಮಿತ್ರ ಬಾಯಿ ಅಪ್ಪು ಸಮಾಧಿಯ ಬಳಿ ಬಂದಿದ್ದಾರೆ. ಡಾ. ರಾಜ್ ಕುಮಾರ್ ನಿಧನದ ದಿನದಿಂದ ಡಾ. ರಾಜ್ ಪುತಳಿಗೆ ಕಡ್ಲೆ ಪುರಿ ಹಾರ ಮಾಡಿಕೊಂಡು ಬರುತ್ತಿದ್ದರು. ಪುನೀತ್ ಮನೆಗೆ ಹೋದಾಗ ಎರಡು ಮೂರು ಬಾರಿ ರೆಷ್ಮೇ ಸ್ಯಾರಿಯನ್ನು ಪುನೀತ್ ಅವರ ಪತ್ನಿ ಉಡುಗರೆಯಾಗಿ ಸುಮಿತ್ರ ಬಾಯಿ ಕೊಟ್ಟಿದ್ದಾರೆ ಎಂದು ಹೇಳುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ
Advertisement
Advertisement
ಪಾರ್ವತಮ್ಮ, ಅಂಬರೀಶ್ ಅವರಿಗೆ ಮಂಡಕ್ಕಿ ಹಾರ ಹಾಕುತ್ತಿದ್ದೆ. ಇದ್ದಕ್ಕಿದ್ದ ಹಾಗೇ ಇವರು ಹೋಗಿ ಬಿಟ್ಟರು. ಆಗ ರಾತ್ರೆಯೆಲ್ಲ ಕುಳಿತು ಹಾರವನ್ನು ಪೊಣಿಸಿ ಚಿಕ್ಕ ಹಾರವನ್ನು ತಂದು ಕಾಕಿದ್ದೆ. ಹಾಲು ತುಪ್ಪವಾದ ನಂತರ ಕುಣಿಗಲ್‍ಗೆ ಹೋಗಿ ಬತಾಸ್ ತಂದು ಹಾರವನ್ನು ಕೇವಲ ಮೂರು ದಿನದಲ್ಲಿ ಪೊಣಿಸಿದ್ದೆವೆ. ಇದನ್ನು ಮೂರು ದಿನಗಳಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ನಾನು ಸೊಸೆಯಂದಿರು ಕುಳಿತು ಪೊಣಿಸಿ ಹಾರವನ್ನು ತಯಾರಿಸಿದ್ದೆವೆ. ನಾನು ಅಪ್ಪು ಅವರ ಮನೆಗೆ ಹೋಗಿ ಬರುತ್ತಿದ್ದೆನು. ಅವರ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಇಲ್ಲಿಗೆ ಬಂದೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.