ಉಡುಪಿ: ನಾವು ದೇಶಕ್ಕಾಗಿ ಏನಾದ್ರು ಮಾಡಬೇಕು. ಆದ್ರೆ ನಮ್ಮಿಂದ ಏನೂ ಮಾಡುವುದಕ್ಕೆ ಆಗುತ್ತಿಲ್ಲವಲ್ಲ ಎಂಬ ಕೊರಗು ಕಾಡುತ್ತಿದೆ ಎಂದು ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನಗೈದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಗ್ರರ ದಾಳಿ ಸಹಿಸಲು ಅಸಾಧ್ಯವಾದುದು. ನಮ್ಮ ಯೋಧರನ್ನು ಕಳೆದುಕೊಂಡ ದಿನ ನಮಗೆಲ್ಲಾ ಕತ್ತಲೆ ದಿನ. ನಮಗೋಸ್ಕರ ಗಡಿಭಾಗದಲ್ಲಿ ಯೋಧರು ಕಷ್ಟಪಡ್ತಾರೆ. ಯೋಧರ ಬಗ್ಗೆ ನಾನು ಏನು ಮಾತಾಡಿದ್ರೂ ಅದು ಕಮ್ಮಿಯಾಗ್ತದೆ. ಮಂಡ್ಯ ಮೂಲದ ನಮ್ಮ ಹೆಮ್ಮೆಯ ಯೋಧನನ್ನು ಕಳೆದುಕೊಂಡಿದ್ದೇವೆ. ಒಂದು ಕಡೆಯಿಂದ ನಮಗೆ ದುಖವಾಗ್ತಿದೆ. ನಮಗೇನೂ ಮಾಡೋಕೆ ಆಗ್ತಿಲ್ಲ ಎನ್ನುವ ನೋವೂ ಆಗ್ತಿದೆ ಎಂದರು.
Advertisement
Advertisement
ಸರ್ಕಾರ ಈ ಹೊತ್ತಲ್ಲಿ ಏನ್ಮಾಡ್ತಿದೆ ಎನ್ನುವುದು ಮುಖ್ಯವಲ್ಲ. ನಾವು, ನಮ್ಮ ಕುಟುಂಬ ಈ ದೇಶಕ್ಕೆ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಎಲ್ಲರೂ ಸೇರಿ ಈ ದೇಶಕ್ಕಾಗಿ ಏನಾದರೂ ಮಾಡೋಣ ಎಂದು ಪುನೀತ್ ಕರೆ ನೀಡಿದರು. ಇದೇ ಸಂದರ್ಭ ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ದರ್ಶನ ಮಾಡಿದ ಪವರ್ ಸ್ಟಾರ್, ಹುತಾತ್ಮ ಯೋಧರ ಆತ್ಮ ಶಾಂತಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದರು.
Advertisement
ಅಪ್ಪಾಜಿ ಜೊತೆ ಹಲವು ಬಾರಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದೆ. ಆ ದಿನಗಳು ಯಾವತ್ತಿಗೂ ಮರೆಯೋಕೆ ಆಗಲ್ಲ. ‘ನಟಸಾರ್ವಭೌಮ’ ಚಿತ್ರ ಗೆಲ್ಲಿಸಿದ್ದಕ್ಕೆ ಕನ್ನಡ ಪ್ರೇಕ್ಷಕರಿಗೆ ಇದೇ ಸಂದರ್ಭದಲ್ಲಿ ಪುನೀತ್ ರಾಜ್‍ಕುಮಾರ್ ಧನ್ಯವಾದ ಸಲ್ಲಿಸಿದರು.
Advertisement
https://www.youtube.com/watch?v=rEZkAveI8KU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv