ಕಾರವಾರ: ಪುನೀತ್ ನಟನೆಯ ಗಂಧದಗುಡಿ (Gandhad Gudi) ಸಿನಿಮಾವನ್ನು ರಿಲೀಸ್ ಮಾಡುವಂತೆ ಒತ್ತಾಯಿಸಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಉತ್ತರ ಕನ್ನಡ (UttarKannada) ಜಿಲ್ಲೆಯ ಶಿರಸಿಯ (Sirsi) ನಟರಾಜ ಚಿತ್ರಮಂದಿರದಲ್ಲಿ ನಡೆದಿದೆ.
Advertisement
ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗದಲ್ಲಿ ಪುನೀತ್ (Puneeth Raj Kumar) ಅವರ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ಅಪ್ಪು ಅವರ ಕೊನೆಯ ಸಿನಿಮಾ ಕೂಡ ಇದಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ (Bengaluru) ರಿಲೀಸ್ ಮಾಡಿದಂತೆ ತಮ್ಮೂರಿನಲ್ಲೂ ಅದೇ ದಿನ ಬಿಡುಗಡೆಮಾಡಬೇಕು ಎಂದು ಅಪ್ಪು ಅಭಿಮಾನಿಗಳು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಚಿತ್ರಮಂದಿರದ ಮಾಲೀಕರು ಸಹ ಅಭಿಮಾನಿಗಳ ಬೇಡಿಕೆಗೆ ಮಣಿದು, ನಾಳೆ ಶಿರಸಿಯ ನಟರಾಜ (Nataraj Theater) ಚಿತ್ರಮಂದಿರದಲ್ಲಿ ಗಂಧದಗುಡಿ ಸಿನಿಮಾ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: JDS ಅಧಿಕಾರಕ್ಕೆ ಬಂದ್ರೆ ಉಚಿತ ಶಿಕ್ಷಣ, ಉದ್ಯೋಗ, ಕುಟುಂಬಕ್ಕೊಂದು ಮನೆ- HDK ಆಶ್ವಾಸನೆ
Advertisement
Advertisement
ಇಡೀ ಕರುನಾಡೇ ಕಾಯುತ್ತಿರೋ ಅಪ್ಪು ಕನಸಿನ ಕೊನೆಯ ಚಿತ್ರ ಗಂಧದಗುಡಿ ನಾಳೆ ತೆರೆಗೆ ಬರುತ್ತಿದೆ. ಇನ್ನೂ ಈ ಸಿನಿಮಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು, ಗಂಧದಗುಡಿ ಅಪ್ಪಾಜಿ, ಶಿವಣ್ಣ ಮಾಡಿದ್ದು, ಅದರಲ್ಲಿ ಕಥೆ ಇತ್ತು, ಆದರೇ ಈ ಚಿತ್ರದಲ್ಲಿ ಜರ್ನಿನೇ ಸಿನಿಮಾ. ಚಿತ್ರದಲ್ಲಿ ಅಪ್ಪು ಅಪ್ಪು ಆಗಿಯೇ ಇದ್ದರು. ನನಗೆ ತುಂಬ ಹೆಮ್ಮೆ ಅನ್ನಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ ವೃದ್ಧನ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ