Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಿಲನಾ ನಾಗರಾಜ್ ನಟನೆಯ ‘ಓ’ ಸಿನಿಮಾಗಾಗಿ ಹಾಡಿದ ಪುನೀತ್ ರಾಜ್ ಕುಮಾರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಮಿಲನಾ ನಾಗರಾಜ್ ನಟನೆಯ ‘ಓ’ ಸಿನಿಮಾಗಾಗಿ ಹಾಡಿದ ಪುನೀತ್ ರಾಜ್ ಕುಮಾರ್

Cinema

ಮಿಲನಾ ನಾಗರಾಜ್ ನಟನೆಯ ‘ಓ’ ಸಿನಿಮಾಗಾಗಿ ಹಾಡಿದ ಪುನೀತ್ ರಾಜ್ ಕುಮಾರ್

Public TV
Last updated: October 6, 2022 11:56 am
Public TV
Share
3 Min Read
FotoJet 27
SHARE

ಲವ್ ಮಾಕ್ಟೇಲ್  ಚಿತದ ನಂತರ ಮಿಲನಾ ನಾಗರಾಜ್ (Milana Nagaraj) ಹಾಗೂ ಅಮೃತಾ ಅಯ್ಯಂಗಾರ್ (Amrita Iyengar) ಒಟ್ಟಿಗೇ ನಟಿಸಿರುವ ವಿಭಿನ್ನ ಪ್ರೇಮಕಥಾಹಂದರ ಇರುವ ವಾಮಾಚಾರ ಹಾಗೂ ಹಾರರ್ ಹಿನ್ನೆಲೆಯಲ್ಲಿ ಮೂಡಿಬಂದಿರುವ  ಚಿತ್ರ ಓ (O). ಮಹೇಶ್ ಸಿ.ಅಮ್ಮಲ್ಲಿದೊಡ್ಡಿ (Mahesh Ammallidoddy) ಅವರ ಚಿತ್ರಕಥೆ ಹಾಗೂ ನಿರ್ದೇಶನವಿರುವ ಈ ಚಿತ್ರದ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮ ವಿಜಯದಶಮಿಯ ಶುಭ ಸಂದರ್ಭದಲ್ಲಿ ನೆರವೇರಿತು. ಕಿರಣ್ ತಲಕಾಡು ಅವರು ಕಥೆ ಬರೆದು ಏಕಾಕ್ಷರ ಫಿಲಂಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

FotoJet 3 10

ಕೋವಿಡ್‌ಗೂ ಮುನ್ನವೇ ಪ್ರಾರಂಭವಾಗಿದ್ದ ಈ ಚಿತ್ರ ಎಲ್ಲಾ ಅಡೆತಡೆಗಳನ್ನು ದಾಟಿ ಈಗ ಬಿಡುಗಡೆಯ ಹಂತ ತಲುಪಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್ ಈವರೆಗೆ ನಾನೇನು ಹಾರರ್ ಸಿನಿಮಾಗಳನ್ನು ನೋಡಿದ್ದೇನೋ, ಅದೆಲ್ಲಕ್ಕಿಂತ ವಿಭಿನ್ನವಾಗಿರಬೇಕು ಎಂದು ಮಾಡಿದ ಚಿತ್ರ. ಒಂದು ಕುಟುಂಬದಲ್ಲಿ ಅಕ್ಕತಂಗಿಯ ಮೇಲೆ ನಡೆಯುವ ಕಥೆಯಿದು. ಓ ಎಂಬ ಪದಕ್ಕೆ ಅರ್ಥವನ್ನು ಚಿತ್ರದಲ್ಲಿ ಹೇಳಿದ್ದೇವೆ. ಅಲ್ಲದೆ ವಾಮಾಚಾರ ಮಾಡುವುದು ತಪ್ಪು ಅಂತಲೇ ತೋರಿಸಿದ್ದೇವೆ. ಈಗಾಗಲೇ ಚಿತ್ರದ ಫಸ್ಟ್ ಕಾಪಿ ಬಂದಿದ್ದು, ನ.೧೧ಕ್ಕೆ  ಬಿಡುಗಡೆಯಾಗುತ್ತಿದೆ. ನನ್ನ ಜೊತೆ ಕೆಲಸ ಮಾಡಿರುವ ರಿತೇಶ್, ಚೇತನ್ ಮೂಲಕ ನಿರ್ಮಾಪಕ ಕಿರಣ್ ಅವರು ಪರಿಚಯವಾದರು ಎಂದು ವಿವರಿಸಿದರು. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

FotoJet 2 18

ನಿರ್ಮಾಪಕ ಕಿರಣ್ ತಲಕಾಡು ಮಾತನಾಡುತ್ತ ನನಗೆ ಚಿಕ್ಕವನಿದ್ದಾಗಲೇ ನನಗೆ ಏಕಾಕ್ಷರ ಶೀರ್ಷಿಕೆಯಿಟ್ಟುಕೊಂಡು ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಸೆನ್ಸಾರ್ ಮಂಡಳಿಯವರು ಸಿನಿಮಾ ನೋಡಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಪ್ರಶಂಸಿಸಿದರು. ನಮ್ಮ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಒಂದು ಹಾಡನ್ನು ಹಾಡಿದ್ದಾರೆ. ಆ ಹಾಡಿನ ಬಿಡುಗಡೆಯನ್ನು ದೊಡ್ಡ ಇವೆಂಟ್ ಮೂಲಕ ಮಾಡಬೇಕೆಂಬ ಯೋಚನೆಯಿದೆ. ಆಡಿಯೋ ಬಿಡುಗಡೆಗೆ ನಾನು ಬರುತ್ತೇನೆ ಎಂದೂ ಪುನೀತ್ ಅವರು ಹೇಳಿದ್ದರು.ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಚಿತ್ರವನ್ನು ಜನರಿಗೆ ಹೇಗೆಲ್ಲಾ ತಲುಪಿಸಬೇಕೆಂದು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಹೇಳಿದರು.

FotoJet 1 22

ನಾಯಕಿ ಮಿಲನಾ ನಾಗರಾಜ್ ಮಾತನಾಡಿ ಹಬ್ಬದ ಶುಭ ದಿನದಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದೆ. ಲಾಕ್‌ಡೌನ್‌ಗೂ ಮುನ್ನವೇ ಈ ಸಿನಿಮಾ ಪ್ರಾರಂಭವಾಗಿತ್ತು. ಬೇರೆಯದೇ ರೀತಿಯ ಅನುಭವ ಕೊಡುವಂಥ ಚಿತ್ರವಿದು. ಈ ಥರದ ಚಿತ್ರಗಳನ್ನು ಮಾಡುವಾಗ ತುಂಬಾ ಸಹನೆ ಇರಬೇಕು, ಅದು ಈ ನಿರ್ದೇಶಕರಲ್ಲಿತ್ತು. ಅಮೃತ ನನ್ನ ಸಹೋದರಿ ಪಾತ್ರ ಮಾಡಿದ್ದಾರೆ. ಸಿದ್ದು ಕೂಡ ಒಂದೊಳ್ಳೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಬ್ಲಾಕ್ ಮ್ಯಾಜಿಕ್, ಹಾರರ್ ಹೀಗೆ ತುಂಬಾ ವಿಷಯಗಳಿವೆ. ಇದನ್ನು ನಾರ್ಮಲ್ ಸಿನಿಮಾ ರೀತಿ ಶೂಟ್ ಮಾಡಲು ಸಾಧ್ಯವಿಲ್ಲ, ಬೇರೆಥರದ ಶಾಟ್ ಇಡಬೇಕು ಎಂದು ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು. ನಂತರ ಅಮೃತ ಅಯ್ಯಂಗಾರ್ ಮಾತನಾಡಿ ಚಿತ್ರದಲ್ಲಿ ಹಾರರ್ ಎಫೆಕ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನ್ನದು  ಎಲ್ಲ ಥರದ ಎಮೋಷನ್ ಕ್ಯಾರಿ ಮಾಡುವಂಥ ಪಾತ್ರ. ಜನರಿಗೆ ಹೆದರಿಸೋದು ತುಂಬಾ ಕಷ್ಟದ ಕೆಲಸ, ಕೆಲವು ಸೀನ್‌ಗಲ್ಲಿ ಆಕ್ಟ್  ಮಾಡುವಾಗ ತುಂಬಾ ಭಯವಾಗಿತ್ತು. ಆಲಾಪ್ ನನ್ನ ತಮ್ಮನ ಪಾತ್ರ ಮಾಡಿದ್ದಾನೆ. ಅವನ ಜೊತೆಗೇ ನನಗೆ ಹೆಚ್ಚು ಸೀನ್‌ಗಳಿವೆ ಎಂದರು. ನಾಯಕ ಸಿದ್ದು ಮೂಲಿಮನಿ ಮಾತನಾಡಿ ನಾನು ಅಭಿನಯಿಸಿದ ಮೊದಲ ಚಿತ್ರವಿದು. ಆಗ ನಾನು ಬೇರೊಂದು ಸಿನಿಮಾಗೆ ಆಡಿಷನ್ ಕೊಟ್ಟಿದ್ದೆ, ಸ್ನೇಹಿತ ಮಹೇಶ್ ನಾನೊಂದು ಸಿನಿಮಾ ಮಾಡುತ್ತಿದ್ದೇನೆ. ಅದರಲ್ಲಿ ನೀನೇ ಹೀರೋ ಅಂದಿದ್ದರು. ಹೇಳಿದ ಹಾಗೇ ಕರೆದು ಹೀರೋ ಮಾಡಿದ್ದಾರೆ ಎಂದು ಹೇಳಿಕೊಂಡರು.

FotoJet 4 3

ನಾಯಕಿಯರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯನಟಿ ಸಂಗೀತಾ ಮಾತನಾಡಿ ನಿರ್ಮಾಪಕ ಕಿರಣ್ ನನಗೆ ಫ್ಯಾಮಿಲಿ ಫ್ರೆಂಡ್. ಅವರಿಗೆ ಸಿನಿಮಾ ಬಗ್ಗೆ ತುಂಬಾ ಆಸಕ್ತಿಯಿದೆ. ಇನ್ನೂ ಒಳ್ಳೊಳ್ಳೇ ಚಿತ್ರಗಳನ್ನು ಮಾಡುವಂತಾಗಲಿ, ನಾನೀ ಚಿತ್ರದಲ್ಲಿ ಮಾ.ಆಲಾಪ್, ಅಮೃತಾ ಹಾಗೂ ಮಿಲನಾರ ತಾಯಿಯಾಗಿ ನಟಿಸಿದ್ದೇನೆ ಎಂದು ಹೇಳಿದರು. ಚಿತ್ರಕ್ಕೆ ಛಾಯಾಗ್ರಾಹಕರಾಗಿ ದಿಲೀಪ್ ಚಕ್ರವರ್ತಿ ಕೆಲಸ ಮಾಡಿದ್ದಾರೆ. ಕಿರಣ್ ರವೀಂದ್ರನಾಥ್ ಅವರ ಸಂಗೀತ ಸತೀಶ್ ಬಾಬು ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಉಗ್ರಂ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

TAGGED:Amrita IyengarMahesh AmmallidoddyMilana NagarajOPuneeth Rajkumarteasertrailerಅಮೃತಾ ಅಯ್ಯಂಗಾರ್ಓಂಟೀಸರ್ಪುನೀತ್ ರಾಜ್ ಕುಮಾರ್ಮಹೇಶ್ ಅಮ್ಮಲ್ಲಿದೊಡ್ಡಿಮಿಲನಾ ನಾಗರಾಜ್
Share This Article
Facebook Whatsapp Whatsapp Telegram

Cinema news

Pavithra Gowda 1
ಪವಿತ್ರಗೌಡಗೆ ಮನೆ ಊಟ ನಿರಾಕರಿಸಿದ್ದು ಒಳ್ಳೆಯದು – ಅಲೋಕ್ ಕುಮಾರ್
Cinema Districts Karnataka Latest Sandalwood Shivamogga States Top Stories
CM Siddaramaiah congratulates Gilli Nata on winning Kannada Bigg Boss
ಬಿಗ್‌ಬಾಸ್‌ ಗೆದ್ದ ಗಿಲ್ಲಿಯನ್ನು ಅಭಿನಂದಿಸಿದ ಸಿಎಂ
Bengaluru City Cinema Districts Karnataka Latest Top Stories TV Shows
Payal Changappa
ʻಅಮೃತ ಅಂಜನ್‌ʼ ಸಿನಿಮಾದ ಫೀಲಿಂಗ್‌ ಸಾಂಗ್‌ ರಿಲೀಸ್‌
Cinema Latest Sandalwood
Life Ellind Ellige
`ಲೈಫ್ ಎಲ್ಲಿಂದ ಎಲ್ಲಿಗೆ’ ಅಂತ ಹಾಡಿದ ಟೀಮ್
Cinema Latest Sandalwood Top Stories

You Might Also Like

Rajeshwari Gayakwad
Cricket

ಕನ್ನಡತಿ ರಾಜೇಶ್ವರಿ ಮ್ಯಾಜಿಕ್‌, 45 ರನ್‌ಗಳ ಜಯ – ಕೊನೆಯಲ್ಲಿದ್ದ ಗುಜರಾತ್‌ 2ನೇ ಸ್ಥಾನಕ್ಕೆ ಜಂಪ್‌

Public TV
By Public TV
50 minutes ago
Leopard
Chamarajanagar

ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತನ ಕೊಂದಿದ್ದ ಚಿರತೆ ಸೆರೆ – ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಣೆ

Public TV
By Public TV
58 minutes ago
let recruitment case nia court sentences key accused to 10 years ri
Crime

ಉಗ್ರ ಸಂಘಟನೆಗೆ ಯುವಕರ ನೇಮಕಾತಿ ಪ್ರಕರಣ – ಶಿರಸಿಯ ವ್ಯಕ್ತಿಗೆ 10 ವರ್ಷ ಕಠಿಣ ಶಿಕ್ಷೆ

Public TV
By Public TV
1 hour ago
trump putin zelensky
Latest

ಯುಎಇಯಲ್ಲಿ ಉಕ್ರೇನ್‌, ರಷ್ಯಾ, ಅಮೆರಿಕದ ಮಧ್ಯೆ ಮೊದಲ ತ್ರಿಪಕ್ಷಿಯ ಸಭೆ – ಯುದ್ಧ ಅಂತ್ಯವಾಗುತ್ತಾ?

Public TV
By Public TV
2 hours ago
Nyamathi Moral Policing
Crime

ದಾವಣಗೆರೆ | ಸ್ನೇಹಿತೆಯೊಂದಿಗಿದ್ದ ಯುವಕನ ವಿಡಿಯೋ ಮಾಡಿ ಸುಲಿಗೆ – ಇಬ್ಬರು ಅರೆಸ್ಟ್‌

Public TV
By Public TV
2 hours ago
The Panchayat gave the site to the Ritti family who handed over the Treasure to the government
Districts

ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ರಿತ್ತಿ ಕುಟುಂಬಕ್ಕೆ ಪಂಚಾಯತ್‌ನಿಂದ ಸೈಟ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?