ʻಆಕಾಶ್ʼ ಚಿತ್ರಕ್ಕೆ 17 ವರ್ಷ : ಈ ಸಿನಿಮಾದ ಹಿಂದಿದೆ ಇಂಟ್ರಸ್ಟಿಂಗ್ ಸ್ಟೋರಿ

Public TV
3 Min Read
akash film

ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥೆ ತಂದು ಸ್ಯಾಂಡಲ್‌ವುಡ್‌ನಲ್ಲಿ ಪವರ್‌ಫುಲ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟ ಪುನೀತ್ ರಾಜ್‌ಕುಮಾರ್. ತಮ್ಮ ಪ್ರತಿ ಸಿನಿಮಾದಲ್ಲೂ ಸಾಮಾಜಿಕ ಸಂದೇಶದ ಜತೆಗೆ ನವಿರಾದ ಪ್ರೇಮಕಥೆಯನ್ನೂ ತೆರೆಯ ಮೇಲೆ ಅಚ್ಚುಕಟ್ಟಾಗಿ ನಟಿಸುವುದರಲ್ಲಿ ಅಪ್ಪು ಯಾವಾಗೂ ಮುಂದು. ಅಂತಹ ಸಿನಿಮಾ ಸಾಲಿನಲ್ಲಿ ಸಿಗುವ ಚಿತ್ರಗಳಲ್ಲಿ `ಆಕಾಶ್’ ಕೂಡ ಒಂದು.

akash film

ನಟ ಪುನೀತ್ ಮಲ್ಟಿ ಟ್ಯಾಲೆಂಟೆಡ್ ಆ್ಯಕ್ಟರ್. ಹಾಡೋಕು ಸೈ ಡ್ಯಾನ್ಸ್ ಮಾಡುವುದಕ್ಕೂ ಜೈ. ತಮ್ಮ ಪ್ರತಿ ಚಿತ್ರದಲ್ಲಿ ಮನರಂಜನೆ ಫ್ಯಾಕ್ಟರ್ ಅನ್ನು ತಲೆಯಲ್ಲಿ ಇಟ್ಟುಕೊಂಡು ಪ್ರೇಕ್ಷಕ ಪ್ರಭುಗಳಿಗೆ ಯಾವ ತರಹದ ಸಿನಿಮಾ ಕೊಟ್ಟರೆ ಇಷ್ಟ ಆಗುತ್ತದೆ ಅನ್ನುವುದನ್ನು ಅರ್ಥ ಮಾಡಿಕೊಂಡು ಆ ಜನರೇಷನ್‌ಗೆ ತಕ್ಕಂತೆ ಸಿನಿಮಾ ಮಾಡಿದ್ದಾರೆ. `ಆಕಾಶ್’ ಸಿನಿಮಾ ಏ.27ಕ್ಕೆ ತೆರೆಕಂಡು 17 ವರ್ಷಗಳಾಗಿವೆ. ಅಸಲಿಗೆ ಆಕಾಶ್ ಸಿನಿಮಾ ಹೇಗೆ ಶುರುವಾಯ್ತು. ಇಲ್ಲಿದೆ ತೆರೆಹಿಂದಿನ ಸ್ಟೋರಿ.

ramya

2004ರಲ್ಲಿ ಪುನೀತ್ ರಾಜ್‌ಕುಮಾರ್ ಕೆರಿಯರ್‌ನ ಪೀಕ್ ಟೈಮ್. ನಟಿಸಿದ ನಾಲ್ಕು ಸಿನಿಮಾಗಳಾದ ಅಪ್ಪು, ಅಭಿ, ವೀರ ಕನ್ನಡಿಗ, ಮೌರ್ಯ ಅಷ್ಟೂ ಚಿತ್ರಗಳು ಸೂಪರ್ ಹಿಟ್ ಆದ ಕಾಲವದು. `ಆಕಾಶ್’ ಚಿತ್ರ ಹುಟ್ಟೋಕೆ ಕಾರಣನೇ ಪುನೀತ್. ಆಗ ಅಪ್ಪು ಚಿತ್ರದಲ್ಲಿ ಅಸೋಸಿಯೇಟ್ ಆಗಿ ಮಹೇಶ್ ಬಾಬು ಕೆಲಸ ಮಾಡುತ್ತಿದ್ದರು. ಅವರನ್ನು ಕರೆದು ಒಂದು ಕಥೆಯ ಲೈನ್ ಹೇಳಿ, ಜನಾರ್ಧನ್ ಮಹರ್ಷಿ ಅವರು ಹೇಳಿದ ಕಥೆ ಇದು ತುಂಬಾ ಇಷ್ಟವಾಗಿದೆ ಅಂದಿದ್ದರು. ಈ ಬಗ್ಗೆ ನೀವು ಯೋಚಿಸಿ ಜತೆಗೆ ಈ ಚಿತ್ರವನ್ನು ನೀವೇ ಡೈರೆಕ್ಟ್ ಮಾಡಿ ಅಂತಾ ಪುನೀತ್ ಸರ್ಪೋಟ್ ಮಾಡಿದ್ರರಂತೆ.

mahesh babu puneeth

ನಂತರದ ದಿನದಲ್ಲಿ ಮಹೇಶ್ ಬಾಬು ಅವರು ರಾಜ್‌ಕುಮಾರ್, ವರದಣ್ಣ ಮತ್ತು ರಾಘಣ್ಣ ಅವರಿಗೆ ಕಥೆ ನರೇಟ್ ಮಾಡಿದಾಗ ಅಣ್ಣಾವ್ರು ಕಥೆ ಎಳೆ ಇಷ್ಟಪಟ್ಟು ಒಳ್ಳೆಯ ಡೈಲಾಗ್ ಬರೆಸಿ ಅಂತಾ ಹೇಳಿದ್ದರಂತೆ. ಈ ಚಿತ್ರವು ಕಲ್ಮಶ ಇಲ್ಲದ ಮಧ್ಯಮ ಹುಡುಗನ ಕಥೆಯಾಗಿದರಿಂದ `ಆಕಾಶ್’ ಎಂಬ ಟೈಟಲ್ ಸೂಟ್ ಆಗತ್ತೆ ಅಂತಾ ನಟ ಶಿವರಾಜ್‌ಕುಮಾರ್ ಸಲಹೆ ನೀಡುತ್ತಾರೆ. ಅಲ್ಲಿಗೆ ಆಕಾಶ್ ಅಂತಲೇ ಟೈಟಲ್ ಫಿಕ್ಸ್ ಮಾಡಲಾಗುತ್ತದೆ.

akash film 1

`ಆಕಾಶ್’ ಸಿನಿಮಾ ಕಲ್ಮಶಗಳೇ ಇಲ್ಲದ ಎಲ್ಲರಿಗೂ ಒಳಿತನ್ನೇ ಬಯಸುವ ಮಧ್ಯಮ ವರ್ಗದ ಆಕಾಶನ ಕಥೆಯಾಗಿತ್ತು. ಜತೆಗೆ ಚೆಂದದ ಲವ್ ಸ್ಟೋರಿಯನ್ನೂ ಕೂಡ ಹೆಣೆಯಲಾಗಿತ್ತು. ಕಥೆ, ಹೀರೋ ಎಲ್ಲಾ ಸಿದ್ಧವಾದ ಮೇಲೆ ನಾಯಕಿಯ ಹುಡುಕಾಟದಲ್ಲಿತ್ತು ಚಿತ್ರತಂಡ. ಆಕಾಶ್‌ಗೆ ನಾಯಕಿಯಾಗಿ ರಮ್ಯಾ ಅವರನ್ನು ಫೈನಲ್ ಮಾಡುವ ಮೊದಲೇ ರಕ್ಷಿತಾನೇ ನಾಯಕಿ ಅಂತಾ ಹೇಳಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ರಮ್ಯಾ ಕ್ಯಾರೆಕ್ಟರ್ ಗ್ಲಾಮರಸ್ ರೋಲ್ ಆಗಿರೋ ಕಾರಣ ರಕ್ಷಿತಾ ಈ ಪಾತ್ರಕ್ಕೆ ಸೂಟ್ ಆಗಲ್ಲ ಅನಿಸಿ ರಮ್ಯಾನೇ ಸರಿ ಎಂದು ಕ್ಯಾಸ್ಟಿಂಗ್ ಮಾಡಲಾಯಿತು. ಇದನ್ನೂ ಓದಿ: ಅಂದು ವಿಷ್ಣು ಹೆಸರಿನಲ್ಲಿ ‘ಉಪ್ಪಿನಕಾಯಿ’ ಇಂದು ‘ಮೆಡಿಕಲ್ ಸ್ಟೋರ್’

ramya 1 1

ಇನ್ನು `ಆಕಾಶ್’ ಚಿತ್ರವನ್ನು ನಾಲ್ಕೇ ತಿಂಗಳಲ್ಲಿ ಶೂಟ್ ಮಾಡಲಾಗಿತ್ತು. ನವೆಂಬರ್‌ನಲ್ಲಿ ಚಿತ್ರದ ಮುಹೂರ್ತ ನೆರವೇರಿದರೆ, 2004ರಲ್ಲಿ ಡಿಸೆಂಬರ್ 6ರಿಂದ ಭರದಿಂದ ಶೂಟಿಂಗ್ ಆರಂಭವಾಗಿತ್ತು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ಪುನೀತ್, ರಮ್ಯಾ ಜತೆ ಅವಿನಾಶ್, ಆಶೀಷ್ ವಿದ್ಯಾರ್ಥಿ, ಪವಿತ್ರಾ ಲೋಕೇಶ್, ಕಿಶೋರ್, ಟೆನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ ಸಾಥ್ ನೀಡಿದ್ದರು. ಕರ್ನಾಟಕದ ಹಲವೆಡೆ ಸೇರಿದಂತೆ ಕಾಶ್ಮೀರ ಮತ್ತು ಫಾರಿನ್‌ನಲ್ಲಿ ಸಾಂಗ್‌ಗಳ ಶೂಟಿಂಗ್ ಮಾಡಲಾಯಿತು. ಏಪ್ರಿಲ್ 29, 2005ಕ್ಕೆ ಚಿತ್ರ ರಿಲೀಸ್ ಆಗಿ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತು. ಬರೋಬ್ಬರಿ 200 ದಿನ ಓಡಿತ್ತು. ಆಕಾಶ್ ಕಥೆಗೆ ಪುನೀತ್ ಮತ್ತು ರಮ್ಯಾ ಜೋಡಿಯ ಮೋಡಿಗೆ ಫ್ಯಾನ್ಸ್ ಫಿದಾ ಆಗಿದ್ರು. ಈ ಸಿನಿಮಾ ಮಿಡಲ್ ಕ್ಲಾಸ್ ಜನರಿಗೆ ತುಂಬಾ ಇಷ್ಟ ಆಗಿತ್ತು. ಇದೇ ಈ ಚಿತ್ರದ ಸ್ಪೆಷಾಲಿಟಿ, ಸಿನಿಮಾರಂಗದಲ್ಲಿ ಗಟ್ಟಿ ಕಥೆಯಾಗಿ ನಿಂತು ಹಿಸ್ಟರಿ ಕ್ರಿಯೇಟ್ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *