ತಿರುಪತಿ ದೇವಸ್ಥಾನಕ್ಕೆ ಹೋಗುವಾಗ ಕಾರಿನ ಮೇಲಿದ್ದ ಫೋಟೋ ಮತ್ತು ನಾಡಧ್ವಜವನ್ನು ತೆರವುಗೊಳಿಸಿದ್ದಕ್ಕೆ ಆಂಧ್ರ ರಕ್ಷಣಾ ಸಿಬ್ಬಂದಿ ವರ್ತನೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಹೋರಾಟ ಮಾಡಿತು.
Advertisement
ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವಾಗ ಕಾರಿನ ಮೇಲಿದ್ದ ಫೋಟೋ ಮತ್ತು ನಾಡಧ್ವಜವನ್ನು ತೆರೆವು ಮಾಡಿದ್ದ ಟಿಟಿಡಿ ಸಿಬ್ಬಂದಿ ಕ್ರಮ ವಿರೋಧಿಸಿ ಕರವೇ ಗಜಸೇನೆ ಹೋರಾಟ ಮಾಡಿದ್ದಾರೆ. ತಿರುಪತಿಯ ಅಮಾನವೀಯ ಘಟನೆಯನ್ನು ವಿರೋಧಿಸಿ ಟಿಟಿಡಿ ದೇವಸ್ಥಾನದ ಬೆಂಗಳೂರು ಮಲ್ಲೇಶ್ವರ ಆವರಣದಲ್ಲಿ ಕರವೇ ಗಜಸೇನೆ ಉಗ್ರ ಹೋರಾಟ ಮಾಡಲಾಗಿದೆ.
Advertisement
Advertisement
ಈ ವೇಳೆ ಟಿಟಿಡಿ ಆಂಧ್ರಪ್ರದೇಶದ ಸಿಬ್ಬಂದಿಗಳಿಂದ ನಟ ಪುನೀತ್ ಅವರ ಭಾವಚಿತ್ರ ಇರುವ ಗಾಡಿಯನ್ನು ತಿರುಮಲ ಬೆಟ್ಟ ಹತ್ತಲು ಬಿಡದೇ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಟಿಟಿಡಿ ದೇವಸ್ಥಾನದ ಒಳಗಡೆ ಪುನೀತ್ ಫೋಟೋ ಇಟ್ಟು ಕರವೇ ಗಜಸೇನೆ ಪೂಜೆ ಮಾಡಿದ್ದಾರೆ. ಇದೇ ವೇಳೆ ಕರ್ನಾಟಕದ ಗಜಸೇನೆ ಮತ್ತು ಪುನೀತ್ ಅಭಿಮಾನಿಗಳು ತಿರುಮಲದ ಟಿಟಿಡಿ ಭದ್ರತಾ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನು ಓದಿ:ತಿರುಪತಿಯಲ್ಲಿ ಅಪ್ಪು ಪೋಸ್ಟರ್ ತೆರವು: ನಟ ಶಿವಣ್ಣ ಬೇಸರ
Advertisement
ಅಪ್ಪು ಪೋಸ್ಟರ್ ಜತೆಗೆ ಕನ್ನಡ ಧ್ವಜಕ್ಕೂ ಅವಮಾನಿಸಿದ್ದಕ್ಕೆ ತಿರುಪತಿಯ ರಕ್ಷಣಾ ಸಿಬ್ಬಂದಿ ಈ ಕೂಡಲೇ ಕ್ಷಮೆ ಕೋರಬೇಕು. ಅಪ್ಪು ವಿಚಾರ ಕನ್ನಡಿಗರಿಗೆ ನೋವು ತಂದಿದೆ. ಈ ಅನ್ಯಾಯವನ್ನು ಆಂಧ್ರ ಸರ್ಕಾರ ಸರಿಪಡಿಸಬೇಕು ಇಲ್ಲವಾದಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಕರವೇ ಗಜಸೇನೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟಕ್ಕೆ ಪುನೀತ್ ಅಭಿಮಾನಿಗಳು ಸಾಥ್ ನೀಡಿದ್ದಾರೆ.