ದಾವಣಗೆರೆ: ನಟ ಪುನೀತ್ ರಾಜ್‍ಕುಮಾರ್ ಅವರ ಆದರ್ಶದಿಂದ ಪ್ರೇರಣೆಯಾದ ಕುಟುಂಬವೊಂದು ವೃದ್ಧೆಯೊಬ್ಬರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆರು ಜನರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ತಾಲೂಕಿನ ಗುಡಾಳು ಗ್ರಾಮದ ವೃದ್ಧೆ ಇಂದ್ರಮ್ಮ ಗುಮ್ಮನೂರು ರಸ್ತೆ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದರು. ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜನವರಿ 23ರಂದು ಉಡುಪಿಯ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
Advertisement
Advertisement
ಇಂದ್ರಮ್ಮ ಅವರನ್ನು ರಕ್ಷಿಸಲು ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಲ್ಲದೆ ಗಂಭೀರವಾಗಿ ಮಿದುಳು ನಿಷ್ಕ್ರಿಯಗೊಂಡಿತ್ತು. ಇದರಿಂದ ಇಂದ್ರಮ್ಮ ಪತಿ ಎಚ್.ಎನ್.ನಂಜುಡಪ್ಪ ಅವರು ಪತ್ನಿಯ ಅಂಗಾಗಗಳನ್ನು ದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಯ್ದೆ ಹಾಗೂ ನಿಯಮಗಳ ಅನುಸಾರ ವೃದ್ಧೆಯ ಅಂಗಾಂಗಗಳನ್ನು ದಾನ ಮಾಡಲಾಗಿದೆ.
Advertisement
Advertisement
ಇಂದ್ರಮ್ಮ ಅವರ ಅಂಗಾಂಗಗಳು ಹಲವರ ಬದುಕಿಗೆ ಬೆಳಕು ನೀಡಿದೆ. ಮಹಿಳೆಯ ಹೃದಯ, ಹೃದಯದ ಕವಾಟಗಳು, ಯಕೃತ್ತು, ಮೂತ್ರಪಿಂಡಗಳು, ಕಾರ್ನಿಯಾ ಹಾಗೂ ಕಣ್ಣುಗುಡ್ಡೆಗಳನ್ನು ತೀರಾ ಅಗತ್ಯವಿದ್ದ 6 ರೋಗಿಗಳಿಗೆ ದಾನವಾಗಿ ನೀಡಲಾಗಿದೆ. ಇದನ್ನೂ ಓದಿ: ಕೊರೊನಾ ನಿಯಂತ್ರಣದಲ್ಲಿ ಸರ್ಕಾರದಿಂದ ಅತ್ಯುತ್ತಮ ಸಾಧನೆ: ಗೆಹ್ಲೋಟ್
ಮಣಿಪಾಲ್‍ನ ಕಸ್ತೂರ ಬಾ ಆಸ್ಪತ್ರೆಯಲ್ಲಿ ನೋಂದಾಯಿತ ರೋಗಿಗಳಿಗೆ ಎರಡು ಕಾರ್ನಿಯಾ ಹಾಗೂ ಒಂದು ಮೂತ್ರಪಿಂಡವನ್ನು ಬಳಸಿಕೊಂಡಿದ್ದು, ಮತ್ತೊಂದು ಮೂತ್ರಪಿಂಡವನ್ನು ಯೆನೆಪೆÇಯ ಆಸ್ಪತ್ರೆಗೆ, ಹೃದಯ ಒಂದು ಮಂಗಳೂರಿನ ಎಂಜಿಎಂ ಆಸ್ಪತ್ರೆಯ ಹಾಗೂ ಹೃದಯದ ಕವಾಟವನ್ನು ಚೆನ್ನೈನ ರೋಗಿಗಳಿಗೆ ಕಳುಹಿಸಿಕೊಡಲಾಯಿತು. ಅಂಗಾಂಗಗಳನ್ನು ಗ್ರೀನ್ ಕಾರಿಡಾರ್ ಮೂಲಕ ಮಣಿಪಾಲದಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ಕಳುಹಿಸಲಾಯಿತು. ಇದನ್ನೂ ಓದಿ: ನಾನು ಯಾರ ಸಂಪರ್ಕದಲ್ಲೂ ಇಲ್ಲ, ಬಿಜೆಪಿ ಸಂಪರ್ಕದಲ್ಲಿದ್ದೇನೆ: ಎಂಟಿಬಿ ನಾಗರಾಜ್