ಕರುನಾಡ ರತ್ನ ಪುನೀತ್ ರಾಜ್‌ಕುಮಾರ್ ಅಗಲಿ ಸುಮಾರು 8 ತಿಂಗಳು ಕಳೆದಿದೆ. ಆದರೆ ಅಭಿಮಾನಿಗಳು ಮಾತ್ರ ಎಂದಿಗೂ ಅವರನ್ನು ಮರೆತಿಲ್ಲ. ಅವರ ಹೆಸರಿನಲ್ಲಿ ದಿನಕ್ಕೊಂದು ಸಾಮಾಜಿಕ ಕಾರ್ಯಗಳು ನಡೆಯುತ್ತದೆ. ಪುನೀತ್ ನೆನಪಿಗಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಳಗೆರೆ ಗ್ರಾಮದಲ್ಲಿ ಅತ್ಯಾಕರ್ಷಕವಾದ ಪುನೀತ್ ಸ್ಮಾರಕ ನಿರ್ಮಾಣ ಮಾಡಿದ್ದಾರೆ.
ಪುನೀತ್ ಮೇಲಿರುವ ಪ್ರೀತಿಗಾಗಿ ಅವರ ನೆನಪಿನಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಇದೀಗ ಅಭಿಮಾನಿಗಳು ಅವರ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಳಗೆರೆ ಗ್ರಾಮದಲ್ಲಿ ಅಭಿಮಾನಿಗಳು ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಸ್ಮಾರಕ ನಿರ್ಮಿಸಿದ್ದಾರೆ. ಅಗಲಿದ ಅಪ್ಪುವಿನ ನೆನಪಿಗೆ ಗ್ರಾಮಸ್ಥರು ಸ್ಮಾರಕ ನಿರ್ಮಾಣ ಮಾಡಿದ್ದು, ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ:ಕಿರುತೆರೆಗೆ ಮರಳಿದ ಎವರ್‌ಗ್ರೀನ್ ನಟಿ ಸುಧಾರಾಣಿ
ಅಪ್ಪುಗಾಗಿ ವಿಭಿನ್ನ ಸ್ಮಾರಕವನ್ನು ಪುನೀತ್ ಅಭಿಮಾನಿಗಳು ನಿರ್ಮಿಸಿದ್ದು, ಜೊತೆಗೆ ಕಾರಂಜಿಯನ್ನು ಸಹ ನಿರ್ಮಾಣ ಮಾಡಿದ್ದಾರೆ. ಗ್ರಾಮದವರೆಲ್ಲರೂ ಸೇರಿ ಈ ಅದ್ಭುತ ಕಾರ್ಯವನ್ನು ಮಾಡಿದ್ದು, ಗ್ರಾಮದ ಹಿರಿಯರಿಂದಲೇ ಸ್ಮಾರಕ ಉದ್ಘಾಟನೆ ಮಾಡಿಸಲಾಗಿದೆ. ಸಮಾರಂಭದಲ್ಲಿ ಅಭಿಮಾನಿಗಳು ಪುನೀತ್ ನೆನೆದು ಅವರ ಅದ್ಭುತ ಕೆಲಸಗಳನ್ನು ಗುಣಗಾನ ಮಾಡಿದ್ದು, ಪುನೀತ್ ಮರೆಯಲಾಗದ ಮಾಣಿಕ್ಯ ಎಂದು ಗ್ರಾಮಸ್ಥರು ಕೊಂಡಾಡಿದ್ದಾರೆ.
Live Tv