ಕಿರುತೆರೆಗೆ ಮರಳಿದ ಎವರ್‌ಗ್ರೀನ್ ನಟಿ ಸುಧಾರಾಣಿ

`ಆನಂದ್’ ಚಿತ್ರದ ಮೂಲಕ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ನಟಿ ಸುಧಾರಾಣಿ ಈಗ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಅದ್ಬುತ ನಟನೆಯಿಂದ ಇವರು ದಶಕಗಳಿಂದ ಪ್ರೇಕ್ಷಕರ ಪ್ರೀತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈಗ ಕಿರುತೆರೆಯಲ್ಲೂ ಮನಗೆಲ್ಲಲು ರೆಡಿಯಾಗಿದ್ದಾರೆ.
ಡಾ.ಸುಧಾರಾಣಿ ಅವರು ಖಾಸಗಿ ವಾಹಿನಿಯ ಧಾರಾವಾಹಿವೊಂದರಲ್ಲಿ ಮುಖ್ಯ ಪೋಷಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೊರಗಿನ ಪ್ರಪಂಚವನ್ನು ಮರೆತು ತನ್ನ ಕುಟುಂಬವೇ ಒಂದು ಪ್ರಪಂಚ ಎಂದು ಬದುಕುತ್ತಿರುವ ಒಂದು ಹೆಣ್ಣು ತಾಯಿಯಾಗಿ, ಸೊಸೆಯಾಗಿ ಮನೆ ಹೀಗೆ ನಿಭಾಯಿಸಿಕೊಂಡು ಹೋಗುತ್ತಾಳೆ ಎಂಬ ಕಥೆಯಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ. ಈ ಮೂಲಕ ಕಿರುತೆರೆಯತ್ತ ಬಂದಿರುವ ಸುಧಾರಾಣಿ ಈಗ ಬೋಲ್ಡ್ ಆಗಿ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಇದನ್ನೂ ಓದಿ: ದುಬಾರಿ ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ
View this post on Instagram
ಪಿಂಕ್ ಮತ್ತು ಆರೆಂಜ್ ಕಲರ್ ಡ್ರೆಸ್‌ನಲ್ಲಿ ಸುಧಾರಾಣಿ ಮತ್ತಷ್ಟು ಗ್ಲ್ಯಾಮರಸ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಮಾಡಿದ್ದಾರೆ. ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಂಡಿರುವ ಸುಧಾರಾಣಿಯ ಅವತಾರಕ್ಕೆ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. ಸದ್ಯ ಈ ವಿಡಿಯೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Live Tv