ಇಂದು ವಿಶ್ವದಾದ್ಯಂತ ಪುನೀತ್ ರಾಜ್‍ಕುಮಾರ್ ನಟನೆಯ ಕೊನೆಯ ಸಿನಿಮಾ ʼಜೇಮ್ಸ್ʼ ಬಿಡುಗಡೆಯಾಗಿದೆ. ಮಧ್ಯೆ ರಾತ್ರಿಯಿಂದಲೇ ಹಲವು ಕಡೆ ಮೊದಲ ಶೋ ಆಗಿದ್ದು, ಅಭಿಮಾನಿಗಳು ಸಡಗರದಿಂದಲೇ ಚಿತ್ರವನ್ನು ಬರಮಾಡಿಕೊಂಡಿದ್ದಾರೆ. ತೆರೆಯ ಮೇಲೆ ಅಪ್ಪು ಎಂಟ್ರಿ ಕೊಡುತ್ತಿದ್ದಂತೆಯೇ ಭಾವುಕರಾಗಿ ಕಣ್ಣೀರಿಟ್ಟ ಘಟನೆಗಳೇ ಹೆಚ್ಚು ನಡೆದಿವೆ.
ʼಜೇಮ್ಸ್ʼ ಸಿನಿಮಾವನ್ನು ಮನರಂಜನೆಯಾಗಿ ತಗೆದುಕೊಳ್ಳದೇ ಭಾವನಾತ್ಮಕವಾಗಿ ಅಪ್ಪು ಅಭಿಮಾನಿಗಳು ಸ್ವೀಕರಿಸಿದ್ದಾರೆ. ಹಾಗಾಗಿ ಸಾಕಷ್ಟು ಅಭಿಮಾನಿಗಳು ಅಳುತ್ತಲೇ ಸಿನಿಮಾ ವೀಕ್ಷಿಸಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಕಾಯ್ದಿರಿಸಿದ್ದ ಖುರ್ಚಿಗಳ ಮೇಲೆ ಕೂರದೆ, ಇಡೀ ಸಿನಿಮಾವನ್ನು ಎದ್ದು ನಿಂತುಕೊಂಡೆ ಗೌರವದೊಂದಿಗೆ ಸಿನಿಮಾ ನೋಡಿದ ಪ್ರಸಂಗಗಳು ಕೂಡ ಜರುಗಿವೆ. ಇದನ್ನೂ ಓದಿ: ರವಿವರ್ಮಾ ಸ್ಟಂಟ್‌ಗೆ ಪವರ್ ಸ್ಟಾರ್ ಫಿದಾ: ಫೋನ್ ಮಾಡಿ ಪುನೀತ್ ಹೇಳಿದ್ದೇನು?
ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಅಪ್ಪು ತೆರೆಯ ಮೇಲೆ ಬರುತ್ತಿದ್ದಂತೆಯೇ ಕೇಕ್ ಕತ್ತರಿಸಿ, ಆನಂತರ ಸಿನಿಮಾ ವೀಕ್ಷಿಸಿದ್ದಾರೆ. ಕುಣಿದು ಸಂಭ್ರಮಿಸಿದ್ದಾರೆ.
ಬಹುತೇಕ ಎಲ್ಲ ಚಿತ್ರಮಂದಿರಗಳ ಮುಂದೆಯೂ ಜನ ಸಾಗರವೇ ಹರಿದು ಬಂದಿದೆ. ಪುನೀತ್ ಕಟೌಟಿಗೆ ಹಾಲಿನ ಅಭಿಷೇಕ, ಬಹೃತ್ ಹೂವಿನ ಹಾರ ಹಾಗೂ ಸಿಹಿ ಹಂಚಿ ʼಜೇಮ್ಸ್ʼ ಚಿತ್ರವನ್ನು ಬರಮಾಡಿಕೊಂಡಿದ್ದಾರೆ ಅಭಿಮಾನಿಗಳು.
ಬೆಂಗಳೂರಿನಲ್ಲೂ ಹಲವು ಕಡೆ ಮಧ್ಯೆ ರಾತ್ರಿಯಿಂದಲೇ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗಿತ್ತು. ಸೆಲೆಬ್ರಿಟಿಗಖು ಕೂಡ ಇದೇ ಸಂದರ್ಭದಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?