ಬೆಂಗಳೂರು: ಸ್ಯಾಂಡಲ್ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಮಧ್ಯೆ ಚಿತ್ರೀಕರಣದ ವೇಳೆ ಪುನೀತ್ ಜೊತೆ ವಿದೇಶಿ ಹುಡುಗಿರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
Advertisement
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಿದ್ದ ಬಹದ್ದೂರ್, ಭರ್ಜರಿ ಹಾಗೂ ನಟ ಶ್ರೀ ಮುರಳಿ ಅಭಿನಯಿಸಿದ್ದ ಭರಾಟೆ ಸಿನಿಮಾವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ, ನಿರ್ದೇಶಕ ಚೇತನ್ ಕುಮಾರ್ ಜೇಮ್ಸ್ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪುನೀತ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ: ತನ್ನದೇ ಹೊಸ ಸಾಮಾಜಿಕ ಮಾಧ್ಯಮ ‘TRUTH Social’ ಆರಂಭಿಸಿದ ಟ್ರಂಪ್
Advertisement
Advertisement
Advertisement
ಜೇಮ್ಸ್ ವೊಂದು ಆ್ಯಕ್ಷನ್ ಕಮರ್ಷಿಯಲ್ ಸಿನಿಮಾವಾಗಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಸದ್ಯ ಚಿತ್ರೀಕರಣದ ನಡುವೆ ಪುನೀತ್ ಜೊತೆ ಇಬ್ಬರು ವಿದೇಶಿ ಹುಡುಗಿಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಫೋಟೋದಲ್ಲಿ ಇಬ್ಬರು ಹುಡುಗಿರು ಗ್ರೇ ಕಲರ್ ಶಾರ್ಟ್ ಟಾಪ್, ಬ್ಲಾಕ್ ಕಲರ್ ಪ್ಯಾಂಟ್ ಹಾಗೂ ಬ್ಲಾಕ್ ಕಲರ್ ಜಾಕೆಟ್ ತೊಟ್ಟು, ಕೈಯಲ್ಲಿ ಗನ್ ಹಿಡಿದುಕೊಂಡು ಪುನೀತ್ ಅಕ್ಕಪಕ್ಕ ನಿಂತು ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ದೇವಭೂಮಿ ಉತ್ತರಾಖಂಡ್ನಲ್ಲಿ ಮೇಘಸ್ಫೋಟ – 12 ಮಂದಿ ಸಾವು, 20 ಮಂದಿ ನಾಪತ್ತೆ
ಈ ಫೋಟೋ ನೋಡುತ್ತಿದ್ದರೆ, ಬಹುಶಃ ಇದು ಫೈಟಿಂಗ್ ಅಥವಾ ಹಾಡಿನ ಚಿತ್ರೀಕರಣದ ವೇಳೆ ಸೆರೆಹಿಡಿದಿರುವಂತೆ ಕಾಣಿಸುತ್ತದೆ. ಒಟ್ಟಾರೆ ಈ ಫೋಟೋ ನೋಡಿ ಅಭಿಮಾನಿಗಳು ಥ್ರೀಲ್ ಆಗಿದ್ದು, ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಧಾರಾಕಾರ ಮಳೆ – 400ಕ್ಕೂ ಹೆಚ್ಚು ಮನೆಗಳಿಗೆ ನೀರು
ಈ ಸಿನಿಮಾದಲ್ಲಿ ಪುನೀತ್ಗೆ ಜೋಡಿಯಾಗಿ ಕಾಲಿವುಡ್ ನಟಿ ಪ್ರಿಯಾ ಆನಂದ್ ಅಭಿನಯಿಸುತ್ತಿದ್ದು, ಚೇತನ್ ಕುಮಾರ್ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ನಾಲ್ಕನೇ ಸಿನಿಮಾವಾಗಿದೆ. ಚಿತ್ರಕ್ಕೆ ಎ. ಹರ್ಷ ನೃತ್ಯ ನಿರ್ದೇಶಿಸಲಿದ್ದು, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿಗಳನ್ನು ನಿರ್ದೇಶಿಸಲಿದ್ದಾರೆ ಹಾಗೂ ನಿರ್ಮಾಪಕ ಕಿಶೋರ್ ಪತಿಕೊಂಡ ಬಂಡವಾಳ ಹೂಡಿದ್ದಾರೆ.