ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ನಟನೆಯ `ಜೇಮ್ಸ್’ ಸಿನಿಮಾ ರಿಲೀಸ್ ಆಗಿ ೨೫ನೇ ದಿನದತ್ತ ಮುನ್ನುಗ್ಗುತ್ತಿದೆ. ಪುನೀತ್ ಅವರ ಕೊನೆಯ `ಜೇಮ್ಸ್’ ಚಿತ್ರವನ್ನ ಹಬ್ಬದ ರೀತಿಯಲ್ಲಿ ಅಭಿಮಾನಿಗಳು ಸೆಲೆಬ್ರೇಟ್ ಮಾಡಿದ್ದಾಯ್ತು. ಈಗ ಅಪ್ಪು ಕನಸಿನ ಪ್ರಾಜೆಕ್ಟ್ `ಗಂಧದ ಗುಡಿ’ ತೆರೆಗೆ ಅಬ್ಬರಿಸಲು ಸಿದ್ದವಾಗ್ತಿದೆ.

ಈ ಚಿತ್ರ ನೈಜವಾಗಿ ಮೂಡಿ ಬರಬೇಕು ಎಂದು ಮೇಕಪ್ ಹಚ್ಚದೇ ಪುನೀತ್ ನಟಿಸಿರೋ ಸಿನಿಮಾವಿದು. `ಗಂಧದ ಗುಡಿ’ ಟೈಟಲ್ ಹೊತ್ತು ಕರ್ನಾಟಕದ ಮೂಲೆ ಮೂಲೆಯಲ್ಲೂ ಶೂಟ್ ಮಾಡಿ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಸಿದ್ದಪಡಿಸಿ ಹಸಿರಿನ ಕಥೆಯನ್ನು ಹೇಳೋಕೆ ಹೊರಟಿದ್ದಾರೆ ನಿರ್ದೇಶಕ ಅಮೋಘ ವರ್ಷ. ಈ ಡಾಕ್ಯುಮೆಂಟರಿ ಮಾದರಿಯ ಈ ಸಿನಿಮಾ ಪಿಆರ್‌ಕೆ ಪ್ರೋಡಕ್ಷನ್ ಮೂಲಕ ಅಪ್ಪು ಕನಸಿನ ಚಿತ್ರವಾಗಿ ತೆರೆಗೆ ಬರಲಿದೆ.ಇದನ್ನು ಓದಿ:ತೆಲುಗಿನ ನಟ ನಿತಿನ್ ಜೊತೆ ಭರಾಟೆ ಬೆಡಗಿ ಶ್ರೀಲೀಲಾ ರೊಮ್ಯಾನ್ಸ್
ತಮ್ಮ ನೆಚ್ಚಿನ ಕಲಾವಿದ ನಟಿಸಿರೋ ಈ ಚಿತ್ರವನ್ನು ನೋಡೋದಕ್ಕೆ ಅಪ್ಪು ಫ್ಯಾನ್ಸ್ ಸಿದ್ಧರಾಗಿದ್ದಾರೆ. `ಜೇಮ್ಸ್’ ಸೂಪರ್ ಸಕ್ಸಸ್ ನಂತರ `ಗಂಧದ ಗುಡಿ’ ಮೂವಿ, ಭಿನ್ನ ಕಾನ್ಸೆಪ್ಟ್ ಆಗಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. `ಜೇಮ್ಸ್’ ಚಿತ್ರ ನೋಡಿ ಕಣ್ತುಂಬಿಕೊAಡಿದ್ದ ಅಪ್ಪು ಅಭಿಮಾನಿಗಳು ಈಗ ಅಪ್ಪು ಕನಸಿನ ಸಿನಿಮಾ ನೋಡಲು ಕಾಂಟ್ ವೈಟ್ ಅನ್ನುತ್ತಿದ್ದಾರೆ.



