ಕೊಪ್ಪಳ: ಮದುವೆ ಹಾಗೂ ಸಣ್ಣಪುಟ್ಟ ಶುಭ ಕಾರ್ಯಕ್ರಮಗಳಿಗೆ ಅನುಕೂಲವಾಗಲಿ ಎಂದು ದಿ.ನಟ ಪುನೀತ್ ರಾಜ್‍ಕುಮಾರ್ ಹೆಸರಲ್ಲಿ ಅಭಿಮಾನಿಯೊಬ್ಬರು ಉಚಿತವಾಗಿ ಸಿಂಟೆಕ್ಸ್ ನೀಡಲು ಮುಂದಾಗಿದ್ದಾರೆ.
Advertisement
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ನಿವಾಸಿ ಚನ್ನಬಸವ ರೆಡ್ಡಿ ಮುಸಾಲಿ ಇವರು ಅಪ್ಪು ಅಪ್ಪಟ ಅಭಿಮಾನಿಯಾಗಿದ್ದಾರೆ. ಅಪ್ಪು ಹೆಸರಲ್ಲಿ ಉಚಿತ ಸಿಂಟೆಕ್ಸ್ ನೀಡಲು ಮುಂದಾಗಿದ್ದಾರೆ. ಅಪ್ಪು ಹೆಸರಲ್ಲಿ ಎನಾದ್ರೂ ಒಂದು ಒಳ್ಳೆ ಕೆಲಸ ಮಾಡ್ಬೆಕು ಅಂತಾ ತುಂಬಾ ದಿನದಿಂದ ಆಲೋಚನೆಯಲ್ಲಿ ಚನ್ನಬಸವ ತೊಡಗಿದ್ದರಂತೆ. ಕಳೆದ ಮೂರು ದಿನದ ಹಿಂದಷ್ಟೇ ಶುಭ ಕಾರ್ಯಕ್ರಮಗಳಿಗೆ ಉಚಿತ ಸಿಂಟೆಕ್ಸ್ ನೀಡುವ ಆಲೋಚನೆ ಬಂದಿದೆಯಂತೆ ಆಲೋಚನೆ ಬಂದಿದ್ದೆ ತಡ ಕೂಡಲೇ ಎರಡು ಸಿಂಟೆಕ್ಸ್ ಅನ್ನು ತಗೆದುಕೊಂಡು ಬಂದಿದ್ದಾರೆ.
Advertisement
Advertisement
ಎರಡು ಸಾವಿರ ಲೀಟರ್ ಸಾಮರ್ಥ್ಯದ ಒಂದು ಸಿಂಟೆಕ್ಸ್ ಹಾಗೂ ಒಂದು ಸಾವಿರ ಲೀಟರ್ ನೀರಿನ ಸಾಮಥ್ರ್ಯದ ಇನ್ನೊಂದು ಸಿಂಟೆಕ್ಸ್ ತಗೆದುಕೊಂಡು ಬಂದಿದ್ದಾರೆ. ಅಪ್ಪು ಫ್ರೀ ಸಿಂಟೆಕ್ಸ್ ಎಂದು ನಾಮಕರಣ ಮಾಡಿದ್ದು, ಶುಭ ಸಮಾರಂಭಗಳಿಗೆ ಸಿಂಟೆಕ್ಸ್ ಬೇಕಾದಲ್ಲಿ ಸಂಪರ್ಕಿಸಿ ಎಂದು ಮೊಬೈಲ್ ನಂಬರ್ ಹಾಗೂ ಲಭ್ಯವಿರುವ ಸ್ಥಳದ ಮಾಹಿತಿಯನ್ನು ಸಿಂಟೆಕ್ಸ್ ಮೇಲೆ ಬರೆಯಿಸಿದ್ದಾರೆ. ಇದನ್ನೂ ಓದಿ: ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈಗೆ ಇ.ಡಿ ಸಮನ್ಸ್
Advertisement
ಯುವಕನ ಈ ಕಾರ್ಯಕ್ಕೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ನಮಗೆ ಹೆಮ್ಮೆ ಅನ್ನಿಸುತ್ತದೆ. ನಮ್ಮೂರ ಯುವಕರು ಅಪ್ಪು ಪ್ರೇರಣೆಯಿಂದಾಗಿ ಇಂತಹ ಒಳ್ಳೆ ಕೆಲಸ ಮಾಡಲು ಮುಂದಾಗುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇಂತಹ ವಿಭಿನ್ನ ಕಾರ್ಯಕ್ಕೆ ಮುಂದಾಗಬೇಕು. ಅಪ್ಪು ನಮ್ಮಂತಹ ಬಡ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದರೆ. ನಾವು ಅಪ್ಪು ಹೆಸರಲ್ಲಿ ಎಷ್ಟು ಸಹಾಯ ಮಾಡಿದರು ಕಡಿಮೆನೇ ಇದೀಗ ನಮ್ಮೂರ ಒಬ್ಬ ಯುವಕ ಉಚಿತ ಸಿಂಟೆಕ್ಸ್ ನೀಡುವುದರ ಮೂಲಕ ಮಾದರಿಯಾಗಿದ್ದಕ್ಕೆ ಖುಷಿಯಾಗುತ್ತಿದೆ ಗ್ರಾಮಸ್ಥರು ಹೇಳಿದ್ದಾರೆ. ಇದನ್ನೂ ಓದಿ: 40 ಸಾವಿರ ವರ್ಷಗಳಿಂದ ಭಾರತೀಯರ ಡಿಎನ್‌ಎ ಒಂದೇ ಆಗಿದೆ: ಆರ್‌ಎಸ್‌ಎಸ್ ಮುಖ್ಯಸ್ಥ
ಗ್ರಾಮದಲ್ಲಿ ನೆಡೆಯುವ ಸರ್ಕಾರಿ ಹಾಗೂ ಖಾಸಗಿಯ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಕುಡಿಯುವ ನೀರು ತುಂಬಿಸಲು ಬಾಡಿಗೆ ಕೊಟ್ಟು ಸಿಂಟೆಕ್ಸ್ ತರಬೇಕಾದ ಪರಿಸ್ಥಿತಿ ಇತ್ತು. ಇದೀಗ ಯುವಕನ ಈ ಅಪ್ಪು ಫ್ರೀ ಸಿಂಟೆಕ್ಸ್‌ನಿಂದ ಎಲ್ಲೊ ಒಂದು ಕಡೆ ಒಂದು ಸಣ್ಣ ಜವಾಬ್ದಾರಿ ಕಡಿಮೆ ಆದಂತಾಗಿದೆ. ಯುವಕನ ಕೆಲಸ ಚಿಕ್ಕದ್ದಾದರೂ ಸಹಾಯ ಮಾಡುವವರಿಗೆ ಮಾದರಿಯಾಗಿದೆ ಅಂದರೆ ತಪ್ಪಾಗಲಾರದು. ಇದನ್ನೂ ಓದಿ: ಹಿಂದುತ್ವದಲ್ಲಿ ನಂಬಿಕೆ ಇದ್ದವರು ಭಾರತೀಯರ DNA ಒಂದೇ ಎಂದು ಭಾವಿಸುತ್ತಾರೆ: ರಾಹುಲ್