– ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಅಭಿನಂದನೆ
– ಸರ್ಕಾರದ ಕೆಲಸಕ್ಕೆ ಪುನೀತ್ ಹಣ ಪಡೆದಿಲ್ಲ
– ನಾನು ಅಸೆಂಬ್ಲಿಯಲ್ಲಿ ಮಾತನಾಡುತ್ತೇನೆ
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರಂತೆ ಅಜಾತಶತ್ರು ಮನೋಭಾವ ಹಾಗೂ ಸರಳತೆ ಬೆಳೆಸಿಕೊಳ್ಳುವಂತೆ ಕಲಾವಿದರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದರು.
ಅಪ್ಪುವಿನ ಅಂತ್ಯಸಂಸ್ಕಾರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಜನ ಸಾಗರ ನಾವು ನೋಡಿದ್ದೇವೆ. ಜನನ ಉಚಿತ ಮರಣ ಖಚಿತ. ಹುಟ್ಟು-ಸಾವಿನ ಮಧ್ಯೆ ನಾವು ಏನು ಮಾಡಿದ್ದೇವೆ ಅನ್ನೋದು ಮುಖ್ಯ. ಪುನೀತ್ ಅವರು ಪವರ್ ಸ್ಟಾರ್ ಆಗಿದ್ದಾರೆ. ಅವರು ಅಜಾತ ಶತ್ರು. ಭಗವಂತ ಕೊನೆ ವಿದಾಯಕ್ಕೆ ಅವಕಾಶ ಕೊಟ್ಟ ಎಂದರು. ಇದನ್ನೂ ಓದಿ: ಅಪ್ಪು ಸಾವಿನ ಬೆನ್ನಲ್ಲೇ ಎಚ್ಚೆತ್ತ ಕೇರಳ ಸರ್ಕಾರ
ರಾಜ್ಯದ ಜನ ಬಂದು ಗೌರವ ಸಲ್ಲಿಸಿದ್ದಾರೆ. ಗೌರವ ಪೂರ್ವಕವಾಗಿ ಕಳಿಸಿಕೊಟ್ಟಿದ್ದಾರೆ. ನಾನು ವಿರೋಧ ಪಕ್ಷದವನು ಆದರೂ ಕೂಡ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ ಎಂದು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ
ಪುನೀತ್ ನಿಧನದ ವಿಚಾರವನ್ನು ವಿನಯ್ ಕಾಲ್ ಮಾಡಿ ಹೇಳಿದ್ದರು. ನನಗೆ ನಂಬಲು ಆಗಲಿಲ್ಲ, ಈಗಲೂ ಆಗುತ್ತಿಲ್ಲ. ಕಲಾವಿದನ ಬದುಕು ಮಾತ್ರವಲ್ಲ, ಸೋಷಿಯಲ್ ಕಮಿಟ್ಮೆಂಟ್ ಇತ್ತು. ಸರ್ಕಾರ ಯಾವುದೇ ಕೆಲಸಕ್ಕೆ ಕರೆದರೂ ನಿರಾಕರಿಸುತ್ತಿರಲಿಲ್ಲ. ನಾನು ಲೈಟ್ ವಿಚಾರದಲ್ಲಿ ಕರೆದಿದ್ದೆ. ಸರ್ಕಾರದ ಕೆಲಸಕ್ಕೆ ಹಣ ಪಡೆದಿಲ್ಲ. ಅವರ ಅತ್ತಿಗೆ ಎಲೆಕ್ಷನ್ ಗೆ ನಿಂತಾಗ ಅವರ ಮೇಲೆ ಒತ್ತಡವಿತ್ತು. ಆದರೂ ನಾನು ಅಪ್ಪನ ಹಾದಿಯಲ್ಲಿ ಸಾಗುತ್ತೇನೆ ಎಂದರು ಅಂತ ಪುನೀತ್ ನೆನಪನ್ನು ಮೆಲುಕು ಹಾಕಿಕೊಂಡರು. ಇದನ್ನೂ ಓದಿ: ಬೆಳೆದಿದ್ದು, ಬದುಕಿದ್ದು, ವಿದಾಯ ಹೇಳಿದ್ದೂ ಶ್ರೀಮಂತನಾಗಿ: ಕಿಚ್ಚ
ತಂದೆ ರಾಜ್ ಕುಮಾರ್ ಮೇಲೆ ಅವರಿಗೆ ಬಹಳ ಗೌರವ. ಅಭಿಮಾನಿ ಅವರ ಮನೆ ಬಳಿಗೆ ಬಂದಾಗ ಎಲ್ಲರನ್ನೂ ಮಾತನಾಡಿಸುತ್ತಿದ್ದರು. ಈ ಮೂಲ ನಾನು ಬೇರೆ ಕಲಾವಿದರನ್ನು ಕೇಳಿಕೊಳ್ಳುತ್ತೇನೆ. ಪುನಿತ್ ಅವರಂತೆ ಅಜಾತಶತ್ರು ಮನೋಭಾವ ಸರಳತೆ ಬೆಳೆಸಿಕೊಳ್ಳಲಿ. ಅವರ ಪತ್ನಿ ಪುನೀತ್ ನಡೆಸಿದ ಸಂಸ್ಥೆಗಳನ್ನು ಮುನ್ನಡೆಸಬಹುದು. ನಾನು ಅಸೆಂಬ್ಲಿಯಲ್ಲಿ ಮಾತನಾಡುತ್ತೇನೆ. ನಮ್ಮ ಸಲಹೆಗಳನ್ನು ಹೇಳ್ತೇವೆ ಎಂದು ಡಿಕೆಶಿ ತಿಳಿಸಿದರು.