– ದೇವರು ಪುನೀತ್ ಅವರನ್ನ ಬೇಗ ಕರೆದುಕೊಂಡು ಬಿಟ್ಟ
ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ದೇಶಾದ್ಯಂತ ಜನ ಕಂಬನಿ ಮಿಡಿದಿದ್ದಾರೆ. ಅಂತೆಯೇ ಪುನೀತ್ ಜೊತೆ ಒಡನಾಟ ಹೊಂದಿದ್ದ ನಟ ಲೂಸ್ ಮಾದ ಯೋಗಿ ಇಂದು ಕಂಬನಿ ಮಿಡಿಯುತ್ತಲೇ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯೋಗಿ, ಪುನೀತ್ ರಾಜ್‍ಕುಮಾರ್ ನನಗೆ ಇನ್ನೊಬ್ಬ ಅಣ್ಣ ಇದ್ದಂತೆ ಇದ್ದರು. ಅವರ ಜೊತೆ ಸಾಕಷ್ಟು ಒಡನಾಟ ಕೂಡ ಇತ್ತು. ಅವರ ಜೊತೆ ಚಿತ್ರೀಕರಣದ ವೇಳೆ 200 ಕ್ಕೂ ಹೆಚ್ಚು ದಿನ ಕಾಲ ಕಳೆದಿದ್ದೆ ಎಂದು ಭಾವುಕರಾದರು. ಇದನ್ನೂ ಓದಿ: ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಕೊನೆಗೂ ಅವಕಾಶ
ಮುಂದಿನ ದಿನಗಳಲ್ಲಿ ನನ್ನ ಬ್ಯಾನರ್ ನಲ್ಲೇ ಒಟ್ಟಿಗೆ ಚಿತ್ರ ಮಾಡೋಣ ಅಂತ ಹೇಳಿದ್ದರು. ಆದರೆ ವಿಧಿ ಅದನ್ನ ಕೈಗೂಡುವುದಕ್ಕೆ ಬಿಡಲಿಲ್ಲ. ಭೂಮಿ ಮೇಲೆ ಸಾಕಷ್ಟು ಕೆಟ್ಟ ನನ್ನ ಮಕ್ಕಳಿಗೆ ಇನ್ನೂ ಸಾವು ಬಂದಿಲ್ಲ. ಆದರೆ ಇಂತಹ ವ್ಯಕ್ತಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಅವರ ಕುಟುಂಬ, ಅಭಿಮಾನಿಗಳಿಗೆ ನೋವು ತಡೆದುಕೊಳ್ಳೊ ಶಕ್ತಿಯನ್ನ ದೇವರು ಕೊಡಲಿ ಎಂದು ಹೇಳಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ
ಇದೇ ವೇಳೆ ಪುನೀತ್ ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿಕೊಂಡರು. ಅಭಿಮಾನಿಗಳು ದುಡುಕಿ ಕೆಟ್ಟ ನಿರ್ಧಾರಗಳನ್ನ ಕೈಗೊಳ್ಳಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಪುನೀತ್ ನೆನೆದು ನಟಿ ರಾಧಿಕಾ ಕುಮಾರಸ್ವಾಮಿ ಕಣ್ಣೀರು
ಈ ಹಿಂದೆ ನಟ ಸೃಜನ್ ಲೋಕೇಶ್ ಕೂಡ ಆಕ್ರೋಶ ಹೊರಹಾಕಿದ್ದರು. ಎಂಥೆಂತಹ ಕೆಟ್ಟ ಮನಸ್ಸಿರುವ ಕಳ್ಳರು, ಕೊಲೆಗಾರರು ಎಲ್ಲರೂ ಬದುಕಿರುತ್ತಾರೆ. ಆದರೆ ಸಾವಿರಾರು ಜನರಿಗೆ ಸಹಾಯ ಮಾಡುತ್ತಿದ್ದಂತಹ ವ್ಯಕ್ತಿ, 46 ವರ್ಷ ದಷ್ಟಪುಷ್ಟವಾಗಿದ್ದಂತಹ ಉತ್ತಮ ಲೈಫ್ ಸ್ಟೈಲ್ ಇದ್ದಂತಹ ವ್ಯಕ್ತಿ ಹೋಗುತ್ತಾರೆ ಎಂದರೆ ಇದಕ್ಕೆ ಅರ್ಥನೇ ಇಲ್ಲ. ಇದು ಆಗಬಾರದಿತ್ತು. ಇದು ಅನ್ಯಾಯ. ದೇವರು ಮಾಡಿರುವ ಅನ್ಯಾಯ ಎಂದು ಭಾವುಕರಾಗಿದ್ದರು.