ಬೆಂಗಳೂರು: ನಮ್ಮ ವಯಸ್ಸಲ್ಲಿ ದೇವರು 10 ವರ್ಷ ಅವರಿಗೆ ಕೊಟ್ಟು ನಮ್ಮನ್ನು ಆ ರೀತಿ ಮಾಡಿದ್ರೆ ಚೆನ್ನಾಗಿರುತ್ತಿತ್ತು ಅನ್ನೋ ಭಾವನೆ ಬರುತ್ತಿದೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಕಂಬನಿ ಮಿಡಿದಿದ್ದಾರೆ.
Advertisement
ಕಂಠೀರವ ಸ್ಟೇಡಿಯಂನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 46 ವರ್ಷ ವಯಸ್ಸಲ್ಲೇ ಈ ರೀತಿ ಆಯ್ತು. ನಾನು ಕೆಎಂಎಫ್ ಚೇರ್ ಮನ್ ಇದ್ದಾಗ ಎಲ್ಲಾ ಜಾಹೀರಾತುಗಳಿಗೂ ಪುನೀತ್ ರಾಜ್ ಕುಮಾರ್ ಬರುತ್ತಿದ್ದರು. ಹೀಗೆ ಬಂದು ಹೋಗುವಾಗ ಹಣ ತಗೋ ಪುನೀತ್ ಅಂದ್ರೆ ಇಲ್ಲ ಅಣ್ಣ, ನಂದಿನಿ ನಮ್ಮ ಕರ್ನಾಟಕ ರೈತರದ್ದಾಗಿದೆ. ಹೀಗಾಗಿ ಅವರಿಂದ ಹಣ ಪಡೆದುಕೊಳ್ಳಬೇಡ ಸುಮ್ನೆ ಬರಬೇಕು ಎಂದು ಅಪ್ಪಾಜಿ ಹೇಳಿದ್ದಾರೆ ಎಂದು ಹೇಳುತ್ತಾ ಒಂದು ರೂಪಾಯಿನೂ ತೆಗೆದುಕೊಳ್ಳದೇ ಹೋಗುತ್ತಿದ್ದ ದೇವತಾ ಮನಷ್ಯ ಎಂದು ಗದ್ಗದಿತರಾದರು. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ
Advertisement
Advertisement
ಸಹೋದರನಂತೆ ಇದ್ದ ಪುನೀತ್ ಅವರು ಬಳ್ಳಾರಿಗೆ ಹಲವು ಬಾರಿ ಬಂದಿದ್ದಾರೆ. ರಾಜ್ ಕುಮಾರ್ ಪಾರ್ಕ್ ಉದ್ಘಾಟನೆಗೆ ಬಂದಿದ್ದರು. ನಾನು ಮುನ್ಸಿಪಾಲಿಟಿ ಮೇಯರ್ ಇದ್ದಾಗ ರಾಜ್ ಕುಮಾರ್ ರಸ್ತೆ ಎಂದು ಒಂದು ರಸ್ತೆಗೆ ಹೆಸರಿಟ್ಟಿದ್ದೆ. ಅದಕ್ಕೂ ಅಪ್ಪು ಬಂದಿದ್ದರು. ಹೀಗೆ ಪ್ರತಿಯೊಂದು ಕಾರ್ಯಕ್ರಮಕ್ಕೆ ಬಂದಾಗಲೆಲ್ಲ ಅಣ್ಣಾ.. ಅಣ್ಣಾ ಅಂತಲೇ ಮಾತಾಡಿಸುತ್ತಿದ್ದರು ಎಂದು ಹೇಳುತ್ತಾ ಕಣ್ಣೀರು ಹಾಕಿದರು. ಇದನ್ನೂ ಓದಿ: ಶಿವಣ್ಣ ಆಲ್ ದಿ ಬೆಸ್ಟ್, ಎಲ್ಲರಿಗೂ ದೇವರು ಒಳ್ಳೆದು ಮಾಡ್ಲಿ – ಪುನೀತ್ ಕೊನೆ ಮಾತು
Advertisement
ನಂದಿನಿ ಹಾಲಿನ ಎಲ್ಲಾ ಕಾರ್ಯಕ್ರಮಕ್ಕೂ ಪುನೀತ್ ಬರುತ್ತಿದ್ದರು. ಪ್ರೀತಿಯಿಂದ ಅಣ್ಣಾ ಎಂದು ಕರೆಯುತ್ತಿದ್ದರು. ದೇವರು ಅವರಿಗೆ ಒಳ್ಳೆಯ ಸಂಸ್ಕೃತಿ ಕೊಟ್ಟಿದ್ದಾರೆ. ತುಂಬಾ ಸಿಂಪ್ಲಿಸಿಟಿ ವ್ಯಕ್ತಿತ್ವ. ದೇವರು ಇಷ್ಟು ಚಿಕ್ಕ ವಯಸ್ಸಲ್ಲಿ ಕರೆದುಕೊಂಡಿದ್ದಾರೆ ಅಂದ್ರೆ ನಂಬೋಕೆ ಆಗ್ತಿಲ್ಲ. ನಮ್ಮ ವಯಸ್ಸಲ್ಲಿ ದೇವರು 10 ವರ್ಷ ಅವರಿಗೆ ಕೊಟ್ಟು ನಮ್ಮನ್ನು ಆ ರೀತಿ ಮಾಡಿದ್ರೆ ಚೆನ್ನಾಗಿರುತ್ತಿತ್ತು ಅನ್ನೋ ಭಾವನೆ ಬರುತ್ತಿದೆ. ನೋಡಿ ತಡೆದುಕೊಳ್ಳಲು ಆಗದಂತಹ ಪರಿಸ್ಥಿತಿ. ಹೀಗಾಗಿ ನಾನು ಸಹೋದರ ಜನಾರ್ದನ ರೆಡ್ಡಿ ಬಂದಿದ್ದೇವೆ ಎಂದರು. ಇದನ್ನೂ ಓದಿ: ತಂದೆಯಂತೆ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗ್ಬಾರ್ದು ಅನ್ನೋ ವ್ಯಕ್ತಿತ್ವ ಅಪ್ಪುದು: ವಿ. ಮನೋಹರ್
ಯಾವುದೇ ಜಾಹಿರಾತು ಮಾಡಿದ್ರೂ 1 ರೂ. ತೆಗೆದುಕೊಳ್ಳುತ್ತಿರಲಿಲ್ಲ. ಅಪ್ಪ ಹೇಳಿದ್ರು ಅಂತ ಅವರು ಹಣ ತೆಗೆದುಕೊಳ್ಳುತ್ತಿರಲಿಲ್ಲ. ಈ ಕಾಲದಲ್ಲಿ ಯಾವ ಮಕ್ಕಳು ಅಪ್ಪನ ಮಾತು ಕೇಳುತ್ತಾರೆ. ಅಂತದ್ರಲ್ಲಿ ಇವರು ಅಪ್ಪನ ಮಾತನ್ನು ನಡೆಸಿಕೊಂಡು ಬಂದ್ರು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರಗದ ಅಪ್ಪು ಅಭಿಮಾನಿಗಳ ಸಾಗರ – ನೂಕುನುಗ್ಗಲು, ಬ್ಯಾರಿಕೇಡ್ ತಳ್ಳಿ ಆಕ್ರಂದನ
ಕಳೆದ ಬಾರಿ ದುರ್ಗಮ್ಮ ಗುಡಿಯತ್ತ ಸಾಂಗ್ ಮಾಡಿದ್ದರು. ದುರ್ಗಮ್ಮ ಗುಡಿ ಬಹಳ ಫೇಮಸ್. ಅಲ್ಲಿ ನಮಗೆ ತುಂಬಾ ಜನ ಅಭಿಮಾನಿಗಳಿದ್ದಾರೆ ಎಂದು ಅಪ್ಪ-ಅಮ್ಮ ಹೇಳುತ್ತಿದ್ದರಂತೆ. ಹೀಗಾಗಿ ಅಲ್ಲಿಗೆ ಬಂದಿದ್ದಾಗ ಭೇಟಿಯಾಗಿದ್ದೆ. ಅದೇ ನಮ್ಮಿಬ್ಬರ ಕೊನೆಯ ಭೇಟಿಯಾಗಿದೆ. ಸದ್ಯ ಏನೂ ಹೇಳೋಕು ಆಗ್ತಿಲ್ಲ ಎಂದು ರೆಡ್ಡಿ ಅತ್ತು ಬಿಟ್ಟರು.