ಬೆಂಗಳೂರು: ಸ್ಯಾಂಡಲ್ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ ಒಂದು ತಿಂಗಳು ಕಳೆದಿದೆ.
ದೊಡ್ಮನೆ ಪ್ರೀತಿಯ ಕುಡಿ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಕರುನಾಡಿನ ಜನತೆ ಇನ್ನೂ ದುಃಖದಲ್ಲಿದ್ದಾರೆ. ಅದಾಗಲೇ ಅಪ್ಪು ಅಗಲಿ ಇಂದಿಗೆ ಒಂದು ಮಾಸ ಕಳೆದಿದೆ. ಈ ನಡುವೆ ಮಾಡಬೇಕಿರುವ ಪುನೀತ್ ತಿಂಗಳ ಕಾರ್ಯವನ್ನು ದೊಡ್ಮನೆ ಕುಟುಂಬಸ್ಥರು ನೆರವೇರಿಸಲಿದ್ದಾರೆ. ಇದನ್ನೂ ಓದಿ: ಕೋಟ್ಯಂತರ ದುಡ್ಡು, ಕಾರು ಇದ್ರೂ ಅಪ್ಪುಗೆ 5 ನಿಮಿಷ ಸಿಗಲಿಲ್ಲ: ರಾಘಣ್ಣ
Advertisement
Advertisement
ಸದಾಶಿವನಗರ ಅಪ್ಪು ನಿವಾಸದಲ್ಲಿ ತಿಂಗಳ ಪೂಜೆ ನಡೆಯಲಿದ್ದು, ಹಾಗೆಯೇ ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಮತ್ತೊಂದೆಡೆ ಅಭಿಮಾನಿಗಳು ಸಹ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕ ರತ್ನ ಅಪ್ಪು ಅಗಲಿ ನಾಳೆಗೆ 1 ತಿಂಗಳು- ಸಮಾಧಿಗೆ ಕುಟುಂಬಸ್ಥರಿಂದ ಪೂಜೆ
Advertisement
Advertisement
ಕಳೆದ ಅಕ್ಟೋಬರ್ 29 ರಂದು ನಟ ಪುನೀತ್ ರಾಜ್ಕುಮಾರ್ ಅವರು ಹೃದಯ ಸ್ತಂಭನದಿಂದ ನಿಧನರಾದರು. ಅಪ್ಪುವನ್ನ ಕಳೆದುಕೊಂಡ ಈ ದಿನವನ್ನು ಇಡೀ ಕರುನಾಡು ಕರಾಳ ದಿನವನ್ನಾಗಿ ಮಾಡಿಕೊಂಡು ಶಪಿಸುತ್ತಿದೆ.