ಉಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಟೈಟಲ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇಂದು ನಡೆದ ಸಿನಿಮಾ ಮುಹೂರ್ತ ಸಮಾರಂಭಕ್ಕೆ ನಿರ್ಮಾಪಕರಿಗೆ, ಹಿತೈಷಿಗಳಿಗೆ ಮತ್ತು ಸ್ವತಃ ತಾವು ಕೂಡ ತಮ್ಮ ಚಿತ್ರದ ಟೈಟಲ್ ಅನ್ನು ಹಣೆ ಮೇಲೆ ಹಾಕಿಕೊಂಡು ಬಂದಿದ್ದರು ಉಪೇಂದ್ರ. ಸಿನಿಮಾದ ಟೈಟಲ್ ಅದೊಂದು ಧಾರ್ಮಿಕ ಚಿಹ್ನೆಯಂತೆಯೂ ಭಾಸವಾಗುವುದರಿಂದ ವಿಪರೀತ ಕುತೂಹಲ ಕೂಡ ಮುಡಿಸಿತ್ತು. ಈಗ ಆ ಟೈಟಲ್ ಬಗ್ಗೆ ಮತ್ತೊಂದು ಸುದ್ದಿ ಸರಿದಾಡುತ್ತಿದೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು
Advertisement
ತಮ್ಮ ಸಿನಿಮಾದ ಟೈಟಲ್ ಬಗ್ಗೆ ಉಪೇಂದ್ರ ಅವರು ನಿರ್ದಿಷ್ಟ ಅರ್ಥವನ್ನು ಹೇಳದೇ ಇದ್ದರೂ, ಸಿನಿಮಾ ನೋಡುಗರು ಮಾತ್ರ ಅದನ್ನು ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಿದ್ದಾರೆ. ಒಬ್ಬರು ಯು ಮತ್ತು ಐ ಅಂದರೆ, ಇನ್ನೂ ಕೆಲವರು ದೇವರ ನಾಮ ಎಂದೂ ಹೇಳುತ್ತಾರೆ. ಇನ್ನೂ ಕೆಲವರು ಕುದುರೆ ಲಾಳ ಎಂದೂ ಬಣ್ಣಿಸುತ್ತಿದ್ದಾರೆ. ಈ ಟೈಟಲ್ ಅನ್ನು ಪುನೀತ್ ರಾಜ್ ಕುಮಾರ್ ಬಾಲ್ಯದಲ್ಲಿರುವಾಗಲೇ ರಿವಿಲ್ ಮಾಡಿದ್ದರು ಎನ್ನುವುದು ಅಪ್ಪು ಬಾಲ್ಯದ ಫೋಟೋ ನೆನಪಿಸುತ್ತಿದೆ ಮತ್ತು ಅದು ವೈರಲ್ ಆಗುತ್ತಿದೆ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ
Advertisement
Advertisement
ಎರಡ್ಮೂರು ವರ್ಷ ಇರುವಾಗ ಪುನೀತ್ ರಾಜ್ ಕುಮಾರ್ ಅವರು ತಮ್ಮ ಹಣೆಯ ಮೇಲೆ ನಾಮವನ್ನು ಹಾಕಿಕೊಂಡಿದ್ದಾರೆ. ಆ ಫೋಟೋಗೂ ಮತ್ತು ಇವತ್ತು ಉಪೇಂದ್ರ ಕಾಣಿಸಿಕೊಂಡ ರೀತಿಗೂ ಹೋಲಿಕೆ ಆಗುವುದರಿಂದ ನಿಮಗಿಂತ ಮೊದಲೇ ಅಪ್ಪು ನಿಮ್ಮ ಸಿನಿಮಾದ ಟೈಟಲ್ ರಿವಿಲ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೇ ಫೋಟೋವನ್ನು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಕೂಡ ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಅಪ್ಪು ನಮ್ಮೊಂದಿಗೆ ನೀವು ಯಾವಾಗಲೂ ಇರುತ್ತೀರಿ ಎಂದು ಬರೆದುಕೊಂಡಿದ್ದಾರೆ.