ಮುಂಬೈ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆಳದ ಕಮರಿಗೆ ಬಿದ್ದ ಮಹಿಳೆಯನ್ನು ರಕ್ಷಿಸಿರುವ ಘಟನೆ ಮಹಾರಾಷ್ಟ್ರದ (Maharashtra) ಸತಾರಾದಲ್ಲಿ ನಡೆದಿದೆ.
ಪುಣೆಯಿಂದ (Pune) ಸ್ನೇಹಿತರ ಜೊತೆ ಸತಾರಾ ಜಿಲ್ಲೆಯ ಬೋರ್ನ್ ಘಾಟ್‌ಗೆ ಬಂದಿದ್ದ ಮಹಿಳೆ ಥೋಸ್ಘರ್ ಜಲಪಾತದ ಬಳಿ 100 ಅಡಿ ಆಳದ ಕಮರಿಗೆ ಬಿದ್ದಿದ್ದಾಳೆ. ಇದನ್ನೂ ಓದಿ: PSI ಪರಶುರಾಮ್ ಸಾವು ಪ್ರಕರಣ: ಸರ್ಕಾರ ತನಿಖೆಗೆ ವಹಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ತಂಡ ಎಂಟ್ರಿ
ಗೃಹರಕ್ಷಕ ದಳ ಮತ್ತು ಸಹ ಪರ್ವತಾರೋಹಿಗಳು ಮಹಿಳೆಯನ್ನು ಸುರಕ್ಷಿತವಾಗಿ ಕಮರಿನಿಂದ ಹೊರಕ್ಕೆ ಕರೆತಂದರು. ಆಕೆಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ರಾಯಗಡ ಬಳಿಯ ಕುಂಭೆ ಜಲಪಾತದಲ್ಲಿ 26 ವಯಸ್ಸಿನ ವ್ಯಕ್ತಿಯೊಬ್ಬರು ರೀಲ್ಸ್ ಮಾಡಲು ಹೋಗಿ ಕಮರಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಇದನ್ನೂ ಓದಿ: Madhya Pradesh: ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳ ದುರ್ಮರಣ
ಆನ್ವಿ ಕಾಮ್ದಾರ್ ಜು.16 ರಂದು ಜಲಪಾತ ವೀಕ್ಷಣೆಗೆ ಏಳು ಸ್ನೇಹಿತರೊಂದಿಗೆ ಪ್ರವಾಸವನ್ನು ಕೈಗೊಂಡಿದ್ದರು. ಸ್ನೇಹಿತರು ವೀಡಿಯೊವನ್ನು ಚಿತ್ರೀಕರಿಸುತ್ತಿದ್ದಾಗ ಆನ್ವಿ ಆಳವಾದ ಕಂದಕಕ್ಕೆ ಜಾರಿ ಬಿದ್ದು ಮೃತಪಟ್ಟಿದ್ದರು.