ಮುಂಬೈ: ಪುಣೆಯಲ್ಲಿ ಐಷಾರಾಮಿ ಕಾರು ಪೋರ್ಶೆ (Porsche Car Accident) ಚಲಾಯಿಸಿ ಇಬ್ಬರು ಟೆಕ್ಕಿಗಳನ್ನು ಬಲಿ ಪಡೆದ 17 ವರ್ಷದ ಬಾಲಕನ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್‌ವಾಲ್ ಅವರನ್ನು ಬಂಧಿಸಿದ್ದ ಪೊಲೀಸರು ಇಂದು ನ್ಯಾಯಲಯದ ಮುಂದೆ ಹಾಜರುಪಡಿಸಿ ಎರಡು ದಿನಗಳ ಕಸ್ಟಡಿಗೆ (Police Custody) ಪಡೆದಿದ್ದಾರೆ.
ಘಟನೆಗೆ ಅಪ್ರಾಪ್ತ ಬಾಲಕನಿಗೆ ಐಷಾರಾಮಿ ಕಾರ್ ನೀಡಿದ್ದು, ಬಾಲಕನ ತಂದೆಯ ನಿರ್ಲಕ್ಷವೂ ಕಾರಣವಾಗಿದ್ದು, ತನಿಖೆ ನಡೆಸಲು ಕಸ್ಟಡಿಗೆ ಬೇಕು ಎಂದು ಪೊಲೀಸರು ಮನವಿ ಮಾಡಿದರು. ವಾದ ಆಲಿಸಿದ ಕೋರ್ಟ್ ಎರಡು ದಿನಗಳ ಕಾಲ ವಿಶಾಲ್ ಅಗರ್‌ವಾಲ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ಗೃಹ ಸಚಿವಾಲಯದ ಕಚೇರಿಗೆ ಬಾಂಬ್ ಬೆದರಿಕೆ
Advertisement
Advertisement
ಈ ನಡುವೆ ಬೆಂಗಳೂರಿನಲ್ಲಿ ಖರೀದಿಸಿದ್ದ ಕಾರಿಗೆ ಶಾಶ್ವತ ನೋಂದಣಿ ಮಾಡಿಸಿರಲಿಲ್ಲ. 1,758 ರೂ. ಶುಲ್ಕ ಬಾಕಿ ಉಳಿಸಿಕೊಂಡು ನಿರ್ಲಕ್ಷ್ಯ ತೋರಿದ್ದ ಹಿನ್ನೆಲೆ ಕಾರಿನ ನೋಂದಣಿಯನ್ನು ಶಾಶ್ವತವಾಗಿ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ದೇಶದಾದ್ಯಂತ ಈ ಪ್ರಕರಣದ ಬಗ್ಗೆ ವಿರೋಧ ವ್ಯಕ್ತವಾದ ಬಳಿಕ ಎಚ್ಚೆತ್ತಿರುವ ಅಧಿಕಾರಿಗಳು ಆರೋಪಿ ಬಾಲಕನಿಗೆ 17 ವರ್ಷ ತುಂಬಿದ್ದು ಆತನಿಗೆ 25 ವರ್ಷ ತುಂಬವವರೆಗೆ ಡ್ರೈವಿಂಗ್ ಲೈಸೆನ್ಸ್ ನೀಡಲಾಗುವುದಿಲ್ಲ ಎಂದು ಪುಣೆ ಆರ್‌ಟಿಓ ತಿಳಿಸಿದೆ. ಇದನ್ನೂ ಓದಿ: ಪುತ್ರನಿಗೆ 2.5 ಕೋಟಿ ಮೌಲ್ಯದ ಕಾರು ಗಿಫ್ಟ್; 1,758 ರೂ. ಕೊಟ್ಟು ನೋಂದಣಿಯನ್ನೇ ಮಾಡಿಸಿಲ್ಲ ಪುಣೆಯ ಬಿಲ್ಡರ್
Advertisement
Advertisement
ತನಿಖೆ ಸದ್ಯ ಮುಂದುವರಿದಿದ್ದು, ಅಪ್ರಾಪ್ತ ಮದ್ಯಪಾನ ಮಾಡಲು ಹೋಗಿದ್ದ ಬಾರ್‌ನಿಂದ 48,000 ರೂ ಹಣದ ಬಿಲ್ ಅನ್ನು ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆ – ಒಂದೇ ಕುಟುಂಬದ ನಾಲ್ವರು ದುರ್ಮರಣ