ನವದೆಹಲಿ: ಪಹಲ್ಗಾಮ್‌ನಲ್ಲಿ ದಾಳಿ (Pahalgam Terror Attack) ನಡೆಸಿದ ಉಗ್ರರು ಹಿಂದೆಯೇ ಬಂದು ನೆಲೆಸಿದ್ದರು ಎನ್ನುವುದಕ್ಕೆ ಪುಣೆ ಕುಟುಂಬವೊಂದರ (Pune Family) ರೀಲ್ಸ್‌ನಲ್ಲಿ ಸಾಕ್ಷಿ ಸಿಕ್ಕಿದೆ.
ಪಹಲ್ಗಾಮ್‌ನಿಂದ ಏಳೂವರೆ ಕಿ.ಮೀ. ದೂರದ ಬೇತಾಬ್ ವ್ಯಾಲಿಯಲ್ಲಿ ಮಧ್ಯಾಹ್ನ 2:30ಕ್ಕೆ ಇಬ್ಬರು ಉಗ್ರರು ನಡೆದಾಡಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಪುಣೆ ವ್ಯಕ್ತಿ ಸಲ್ಲಿಸಿರುವ ವಿಡಿಯೋವನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಈಗ ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಉಗ್ರರ ದಾಳಿ ಹಿಂದೆ ಪಾಕ್, ಐಎಸ್‌ಐ ನಂಟು – ಪಾಕ್ ಪ್ಯಾರಾ ಕಮಾಂಡೋ ಆಗಿದ್ದ ಹಾಶೀಮ್ ಮೂಸಾ!
ಪುಣೆಯ ಸಾಮಾಜಿಕ ಕಾರ್ಯಕರ್ತ ಶ್ರೀಜಿತ್ ರಮೇಶನ್ ಅವರು ಮಾತನಾಡಿ, ಏಪ್ರಿಲ್ 18ರಂದು ನಾವು ಪಹಲ್ಗಾಮ್‌ಗೆ ತೆರಳಿದ್ದೆವು. `ಮಿನಿ ಸ್ವಿಟ್ಜರ್‌ಲ್ಯಾಂಡ್’ ಬೈಸರನ್ ಬಳಿಕ ಪಹಲ್ಗಾಮ್‌ನಿಂದ ಏಳೂವರೆ ಕಿ.ಮೀ. ದೂರದ ಬೇತಾಬ್ ವ್ಯಾಲಿಗೆ ಹೋಗಿದ್ದೆವು. ಅಲ್ಲಿ ನನ್ನ 6 ವರ್ಷದ ಮಗಳು ರೀಲ್ಸ್ ಮಾಡುತ್ತಿದ್ದನ್ನು ನಾನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದೆ. ಪ್ರವಾಸ ಮುಗಿಸಿ ವಾಪಸ್ ಮನೆಗೆ ಬಂದಾ ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ತಿಳಿಯಿತು. ನಾಲ್ವರು ಉಗ್ರರ ಫೋಟೋ ಬಿಡುಗಡೆ ಮಾಡಿದ್ದನ್ನು ನೋಡಿದೆವು. ಆ ಫೋಟೋದಲ್ಲಿದ್ದ ಇಬ್ಬರ ಮುಖವನ್ನು ನೋಡಿದಂತೆ ಇದೆ. ನಮ್ಮ ರೀಲ್ಸ್‌ನಲ್ಲಿ ಹಿಂದುಗಡೆ ನಡೆದುಕೊಂಡು ಹೋಗುತ್ತಿದ್ದ ವಿಡಿಯೋಗೆ ಹೋಲಿಕೆ ಮಾಡಿದಾಗ ಸಾಮ್ಯತೆ ಕಂಡು ಬಂತು. ಹಾಗಾಗಿ ದೆಹಲಿ ಎನ್‌ಐಎಗೆ ವಿಡಿಯೋ ಕಳುಹಿಸಿಕೊಟ್ಟಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಉಗ್ರರು ಗುಂಡು ಹಾರಿಸುವ ಹೊತ್ತಲ್ಲಿ 3 ಬಾರಿ ‘ಅಲ್ಲಾಹು ಅಕ್ಬರ್’ ಅಂತ ಕೂಗಿದ ಜಿಪ್‌ಲೈನ್ ಆಪರೇಟರ್
VIDEO | Here’s what a resident of Pune, Srijit Rameshan, said as he captured the terrorists of the Pahalgam attack two days before the attack.
“The attack happened on April 22, but we were in the valley on April 18. We were shooting reels there, and two of the suspects passed… pic.twitter.com/ihMoCXgdp4
— Press Trust of India (@PTI_News) April 29, 2025