ಪುಲ್ವಾಮಾ(ಜಮ್ಮು-ಕಾಶ್ಮೀರ): ಪುಲ್ವಾಮಾದಲ್ಲಿ ಉಗ್ರ ನಡೆಸಿದ ದಾಳಿಯ ಬಗ್ಗೆ ಮೊದಲೇ ಮುನ್ಸೂಚನೆ ಸಿಕ್ಕಿತ್ತು. ಗುಪ್ತಚರ ಇಲಾಖೆ ನೀಡಿದ್ದ ಆ ಅರ್ಜೆಂಟ್ ಮ್ಯಾಟರ್ ಕಡೆಗಣಿಸಿದ್ದಕ್ಕೆ 40 ಯೋಧರು ಬಲಿ ಆದ್ರಾ ಅನ್ನೋ ಪ್ರಶ್ನೆಯೊಂದು ಇದೀಗ ಎಲ್ಲರ ಮನದಲ್ಲಿ ಕಾಡುತ್ತಿದೆ.
ಹೌದು. ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆಯೋ 6 ದಿನ ಮೊದಲೇ ತುರ್ತು ಲೆಟರೊಂದು ಹೋಗಿತ್ತು. ಈ ತುರ್ತು ಸಂದೇಶದ ಸಿಗ್ನಲ್ ಜಮ್ಮು ಕಾಶ್ಮೀರದ ಎಲ್ಲಾ ಭದ್ರತಾ ಪಡೆಗಳಿಗೆ ಹೋಗಿತ್ತು. ಇದನ್ನು ಪರಿಗಣಿಸಿ ಮೊದಲೇ ಎಚ್ಚೆತ್ತುಕೊಂಡಿದಿದ್ದರೆ ಈ ಭಯಾನಕ ದಾಳಿಯನ್ನು ತಪ್ಪಿಸಬಹುದಾಗಿತ್ತು. ಸಿಆರ್ ಪಿಎಫ್ ಗೆ ಬರೆದಿದ್ದ ಈ ಗೌಪ್ಯ ಮತ್ತು ತುರ್ತು ಸಂದೇಶ ಇದಿಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇದನ್ನೂ ಓದಿ: ಕಾರು ಬಾಂಬ್ ಸೇನೆಗೆ ಹೊಸ ತಲೆನೋವಾಗಿದ್ದು ಹೇಗೆ? ಏನಿದು ವಿಬಿಐಇಡಿ?
Advertisement
Advertisement
ಗುಪ್ತಚರ ಇಲಾಖೆ ಈ ಬಗ್ಗೆ ಮಾಹಿತಿ ನೀಡಿತ್ತಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ರೆ, ಹೌದು ಅಂತಿದೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಪತ್ರ. ಐಇಡಿ ಸ್ಫೋಟಕ ಬಳಕೆಯ ಕುರಿತು 6 ದಿನಗಳ ಹಿಂದೆಯೇ ಇಂಟಲಿಜೆನ್ಸ್ ಬ್ಯೂರೋಗೆ ಮಾಹಿತಿ ಇತ್ತು. ಈ ಬಗ್ಗೆ ಕಾಶ್ಮೀರದ ಎಲ್ಲಾ ಭಾಗಗಳಿಗೆ ಅರ್ಜೆಂಟ್ ಮ್ಯಾಟರ್ ಅಂತ ಪತ್ರಗಳನ್ನು ಕೂಡಾ ರವಾನಿಸಲಾಗಿತ್ತು ಎನ್ನಲಾಗ್ತಿದೆ. ಆ ಪತ್ರದ ಪ್ರತಿ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಪಾಕ್ ಗಡಿ ಬಳಿಯೇ ವಾಯುಪಡೆ ಶಕ್ತಿ ಪ್ರದರ್ಶನ – ಎಚ್ಚರಿಕೆ ಸಂದೇಶ ರವಾನಿಸಿದ ಭಾರತ – ವಿಡಿಯೋ ನೋಡಿ
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv