ಇಸ್ಲಾಮಾಬಾದ್: ಪುಲ್ವಾಮಾ ದಾಳಿ ಬಳಿಕ ಭಾರತದ ಟೆಕ್ಕಿಗಳು ರೊಚ್ಚಿಗೆದ್ದು ಪಾಕ್ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಲು ಆರಂಭಿಸಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿ ಕಂಡು ಕೇಳರಿಯದ ಸೈಬರ್ ದಾಳಿ ಆಗುತ್ತಿದ್ದು, ಸರ್ಕಾರಿ ಸೇರಿದಂತೆ 50ಕ್ಕೂ ಹೆಚ್ಚು ವೆಬ್‍ಸೈಟ್‍ಗಳನ್ನು ಭಾರತೀಯ ಹ್ಯಾಕರ್ಸ್ ಹ್ಯಾಕ್ ಮಾಡಿದ್ದಾರೆ.
Advertisement
ಭಾರತ ಮೂಲದ ಟೀಂ ಐ ಕ್ರೀವ್ ಸದಸ್ಯರು ಪಾಕಿಸ್ತಾನದ ವೆಬ್‍ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದೆ ಎಂದು ಪಾಕಿಸ್ತಾನದಲ್ಲಿರುವ ಮಾಧ್ಯಮಗಳೇ ವರದಿ ಮಾಡಿವೆ. ನಾವು ಯಾವುದೇ ಕಾರಣಕ್ಕೂ 2019ರ ಫೆ.14 ಕಹಿ ಘಟನೆಯನ್ನು ಮರೆಯಲು ಸಾಧ್ಯವಿಲ್ಲ, ದೇಶಕ್ಕಾಗಿ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಹ್ಯಾಕ್ ಮಾಡಲಾಗಿದೆ ಹ್ಯಾಕರ್ಸ್ ಬರೆದುಕೊಂಡಿದ್ದಾರೆ. ದೀಪ ಹೊತ್ತಿ ಉರಿಯುತ್ತಿರುವ ಫೋಟೋಗಳು ಮತ್ತು ಹ್ಯಾಕರ್ಸ್ ಹಾಕಿರುವ ಸಂದೇಶಗಳು ಹ್ಯಾಕ್ ಆಗಿರುವ ವೆಬ್‍ಸೈಟ್‍ನ ಮುಖಪುಟದಲ್ಲಿ ಕಾಣುತ್ತಿವೆ.
Advertisement
Advertisement
ವಿಶೇಷವಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಮತ್ತು ಸೇನೆಯ ವೆಬ್‍ಸೈಟ್ ಗಳನ್ನು ಟೀಂ ಐ ಕ್ರೀವ್ ಹ್ಯಾಕ್ ಮಾಡಿದೆ. ಆಸ್ಟ್ರೇಲಿಯಾ, ನೆದರ್‍ಲ್ಯಾಂಡ್, ಸೌದಿ ಆರೇಬಿಯಾ, ಇಂಗ್ಲೆಂಡ್ ದೇಶದ ಬಳಕೆದಾರರಿಗೆ ವಿದೇಶಾಂಗ ಸಚಿವಾಲಯ ವೆಬ್‍ಸೈಟ್ ತೆರೆಯಲು ಆಗುತ್ತಿಲ್ಲ.
Advertisement
16 ರಂದು ಪಾಕ್ ವಿದೇಶಾಂಗ ಸಚಿವಾಲಯದ ವೆಬ್‍ಸೈಟನ್ನು ಹ್ಯಾಕ್ ಮಾಡಿ ಪ್ರಧಾನಿ ಇಮ್ರಾನ್ ಖಾನ್ ಹೆಸರನ್ನು ಅಳಿಸಿ ಹಾಕಿದ್ದಾರೆ. ಈ ಸುದ್ದಿಯನ್ನು ಅಲ್ಲಿನ ಮಾಧ್ಯಮಗಳೇ ಒಪ್ಪಿಕೊಂಡು ವರದಿ ಮಾಡಿವೆ. ದಾಳಿ ನಡೆದ ಮೊದಲ ದಿನವಾದ 14ರಂದು ಪಾಕಿಸ್ತಾನದ 5 ವೆಬ್‍ಸೈಟ್‍ಗಳು ಹ್ಯಾಕ್ ಆಗಿದ್ದರೆ, ಫೆ. 15 ಮತ್ತು 16 ರಂದು 8 ಪಾಕಿಸ್ತಾನ ವೆಬ್‍ಸೈಟ್‍ಗಳು ಹ್ಯಾಕ್ ಆಗಿತ್ತು.
ಹ್ಯಾಕ್ ಆಗಿರುವ ಪಾಕಿಸ್ತಾನದ ಪ್ರಮುಖ ವೆಬ್‍ಸೈಟ್‍ಗಳು
https://sindhforests.gov.pk/op.html
https://mail.sindhforests.gov.pk/op.html,
https://pkha.gov.pk/op.html
https://ebidding.pkha.gov.pk/op.html,
https://mail.pkha.gov.pk/op.html
http://kda.gkp.pk/op.html,
http://blog.kda.gkp.pk/op.html,
http://mail.kda.gkp.pk/op.html,
https://kpsports.gov.pk/op.html,
https://mail.kpsports.gov.pk/op.html,
http://seismic.pmd.gov.pk/op.html
http://namc.pmd.gov.pk/op.html
http://rmcpunjab.pmd.gov.pk/FlightsChartFolder/op.html
http://ffd.pmd.gov.pk/modis/op.html
http://radar.pmd.gov.pk/islamabad/op.html,
http://pjm.pmd.gov.pk/cache/op.html
http://202.163.66.44:811/14-02-2019.html
http://www.urbanunit.gov.pk/upload/14-02-2019.php
https://opf.edu.pk/14-02-2019.php
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv