ಮುಂಬೈ: ಪುಲ್ವಾಮಾ ದಾಳಿಯ ಬಳಿಕ ದೇಶದೆಲ್ಲೆಡೆ ಭಯೋತ್ಪಾದಕರ ಕೃತ್ಯದ ಬಗ್ಗೆ ಆಕ್ರೋಶ ಹೆಚ್ಚಾಗಿದೆ. ಆದರೆ ಭಾರತದಲ್ಲಿ ದಾಳಿ ಬಗ್ಗೆಯೂ ಈವರೆಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತ್ರ ತುಟಿ ಬಿಚ್ಚಿಲ್ಲ. ಸದ್ಯ ಪುಲ್ವಾಮಾ ದಾಳಿಯನ್ನು ಖಂಡಿಸಿ ಇಂಡಿಯನ್ ಕ್ರಿಕೆಟ್ ಕಬ್ಲ್ ನಲ್ಲಿರಿಸಿದ್ದ ಫೋಟೋವನ್ನು ಎತ್ತಂಗಡಿ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕ್ಲಬ್ ಅಧ್ಯಕ್ಷ, ನಾವು ಇರ್ಮಾನ್ ಖಾನ್‍ರನ್ನು ಒಬ್ಬ ಅತ್ಯುತ್ತಮ ಕ್ರಿಕೆಟ್ ಆಟಗಾರ ಎಂದು ಭಾವಿಸಿ ಫೋಟೋ ಇಟ್ಟಿದ್ದೇವು. ಆದರೆ ಈಗ ಆತ ನಮ್ಮೊಂದಿಗೆ ಯುದ್ಧ ನಡೆಸಲು ಸಿದ್ಧವಾಗಿರುವ ದೇಶದ ಪ್ರಧಾನಿಯಾಗಿದ್ದಾನೆ. ಆದ್ದರಿಂದ ಕ್ಲಬ್ ನಲ್ಲಿ ಫೋಟೋ ಇಡುವ ಆರ್ಹತೆಯನ್ನು ಕಳೆದುಕೊಂಡಿದ್ದಾನೆ. ನಮ್ಮ ದೇಶದ ಯೋಧರಿಗೆ ಸೆಲ್ಯೂಟ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Advertisement
Advertisement
ದಾಳಿ ನಡೆದು 4 ದಿನಗಳು ಕಳೆದರು ಕೂಡ ಪಾಕಿಸ್ತಾನದ ಅಧಿಕಾರಿಗಳು ಮಾತ್ರ ಭಾರತದ ಹೇಳಿಕೆಯನ್ನು ತಿರಸ್ಕರಿದ್ದು, ದೇಶದ ಪ್ರಧಾನಿಯಾಗಿ ಯಾವುದೇ ಮಾತನಾಡದೆ ಇಮ್ರಾನ್ ಖಾನ್ ಮೌನವಾಗಿದ್ದಾರೆ. ವಿಶ್ವದ ವಿವಿಧ ದೇಶಗಳು ಭಯೋತ್ಪಾದನೆ ಕೃತ್ಯದ ವಿರುದ್ಧ ಕಿಡಿಕಾರಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಪಾಕಿಸ್ತಾನ ಮಾತ್ರ ಉಗ್ರರಿಗೆ ಬೆಂಬಲ ನೀಡುವುದನ್ನು ಮಾತ್ರ ನಿಲ್ಲಿಸಿಲ್ಲ.
Advertisement
ಮುಂಬೈನಲ್ಲಿರುವ ಕ್ರಿಕೆಟ್ ಕ್ಲಬ್‍ನಲ್ಲಿ ಮಾಜಿ ಕ್ರಿಕೆಟ್ ಆಟಗಾರರಾದ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ಸೇರಿದಂತೆ ವಿಶ್ವ ಕ್ರಿಕೆಟ್ ದಿಗ್ಗಜರ ಫೋಟೋ ಹಾಕಲಾಗಿತ್ತು. ಈ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿ, ಭಯೋತ್ಪಾದಕರ ತಮ್ಮ ಕೃತ್ಯಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv