Cinema

‘ಪುಕ್ಸಟ್ಟೆ ಲೈಫು’ ಚಿತ್ರದ ಟ್ರೇಲರ್ ಔಟ್ – ಸಂಚಾರಿ ವಿಜಯ್ ಹೊಸ ಅವತಾರ ಕಂಡು ಬೆರಗಾದ ಚಿತ್ರರಸಿಕರು

Published

on

Share this

ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’. ಅರವಿಂದ್ ಕುಪ್ಳಿಕರ್ ನಿರ್ದೇಶನವಿರುವ ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ಇಂದು ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಎಂದಿನಂತೆ ಈ ಚಿತ್ರದಲ್ಲೂ ಹೊಸ ಪಾತ್ರಕ್ಕೆ ಸಂಚಾರಿ ವಿಜಯ್ ಜೀವ ತುಂಬಿದ್ದು, ಬೀಗ ರಿಪೇರಿ ಮಾಡುವ ಮುಸ್ಲಿಂ ಯುವಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಟ್ರೇಲರ್ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ. ಸಂಚಾರಿ ವಿಜಯ್ ಪೊಲೀಸ್ ಜೊತೆ ಸೇರಿ ಕಳ್ಳತನಕ್ಕೆ ಇಳಿಯುವ ದೃಶ್ಯ ಟ್ರೇಲರ್ ನಲ್ಲಿದೆ. ಪೊಲೀಸ್ ಇನ್‍ಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿರುವ ಅಚ್ಯುತ್ ಕುಮಾರ್ ಕೂಡ ಕಳ್ಳತನದ ದಾರಿ ಹಿಡಿಯುವ ದೃಶ್ಯಗಳು ಕ್ಯೂರಿಯಾಸಿಟಿಯನ್ನು ಹೆಚ್ಚಿಸಿದ್ದು, ಚಿತ್ರದಲ್ಲೇನೋ ಹೊಸತನವಿದೆ ಎನ್ನುವುದು ಖಾತ್ರಿಯಾಗಿದೆ. ಸಿಸಿಬಿ ಅಧಿಕಾರಿಯಾಗಿ ರಂಗಾಯಣ ರಘು ಪಾತ್ರವನ್ನು ರಿವೀಲ್ ಮಾಡಲಾಗಿದೆ. ಒಟ್ನಲ್ಲಿ, ಒಂದಿಷ್ಟು ಸಂಗತಿಗಳು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದ್ದು ‘ಪುಕ್ಸಟ್ಟೆ ಲೈಫು’ ಪ್ರಪಂಚದಲ್ಲಿ ನಿರ್ದೇಶಕರು ಏನೇನು ಸೃಷ್ಟಿಸಿದ್ದಾರೆ ಅನ್ನೋದಕ್ಕೆ ಸಿನಿಮಾ ಬಿಡುಗಡೆಯವರೆಗೆ ಕಾಯಲೇಬೇಕು.

ಮಧ್ಯಮ ವರ್ಗದ ವ್ಯಕ್ತಿ ಹಣದ ಹಿಂದೆ ಬಿದ್ದರೆ ಯಾವೆಲ್ಲ ರೀತಿಯ ಸಮಸ್ಯೆಗಳು ಶುರುವಾಗಬಹುದು ಎನ್ನುವುದು ಚಿತ್ರದ ಒನ್ ಲೈನ್ ಕಹಾನಿ. ವಿಜಯ್ ಕೆಳ ಮಧ್ಯಮ ವರ್ಗದ ಮುಸ್ಲಿಂ ಹುಡುಗನಾಗಿ ಬೀಗ ರಿಪೇರಿ ಮಾಡುವ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ವಿಜಯ್ ಹೊಸ ಅವತಾರವನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ರಂಗಭೂಮಿ ಕಲಾವಿದರಾದ ಅರವಿಂದ ಕುಪ್ಳಿಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಸಿನಿಮಾ ಇದು. ಡಾರ್ಕ್ ಹ್ಯೂಮರ್ ಕಥಾಹಂದರ ಒಳಗೊಂಡಿರುವ ಈ ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಮಾತಂಗಿ ಪ್ರಸನಾ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಹಲವು ರಂಗಭೂಮಿ ಕಲಾವಿದರು ತಾರಾಬಳಗದಲ್ಲಿದ್ದಾರೆ. ಅಧ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್, ವಾಸು ದೀಕ್ಷಿತ್ ಸಂಗೀತ ಸಂಯೋಜನೆ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸರ್ವಸ್ವ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಾಗರಾಜ್ ಸೋಮಯಾಜಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್‍ಗೆ ಅಮೆರಿಕದ ಥಿಯೇಟರ್ ನಿಂದ ಗೌರವ

Click to comment

Leave a Reply

Your email address will not be published. Required fields are marked *

Advertisement
Advertisement