Connect with us

Cinema

ಸಂಚಾರಿ ವಿಜಯ್‍ಗೆ ಅಮೆರಿಕದ ಥಿಯೇಟರ್ ನಿಂದ ಗೌರವ

Published

on

Share this

ವಾಷಿಂಗ್ಟನ್: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರಿಗೆ ಅಮೆರಿಕಾದ ಫ್ರಾಂಕ್ಲಿನ್ ಥಿಯೇಟರ್ ವತಿಯಿಂದ ವಿಭಿನ್ನವಾಗಿ ಗೌರವ ಸಲ್ಲಿಸಲಾಗಿದೆ.

ನಾನು ಅವನಲ್ಲ ಅವಳು, ಹರಿವು, ನಾತಿಚರಾಮಿ ಖ್ಯಾತಿಯ ನಟ ಸಂಚಾರಿ ವಿಜಯ್ ಅವರು ಜೂನ್ 15ರಂದು ಕೊನೆಯುಸಿರೆಳೆದಿದ್ದರು. ಅವರಿಗೆ ಗೌರವ ಸಲ್ಲಿಸಲು ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್ ವತಿಯಿಂದ ಒಂದು ಸಂದೇಶವನ್ನು ಬಿತ್ತರಿಸಲಾಗಿದೆ.

‘Always in our Heart, Sanchari Vijay, Gone Yet Not Forgotten’ ಇದು ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್‌ನಲ್ಲಿ ಪ್ರಸಾರವಾಗುತ್ತಿರುವ ಸಂದೇಶ. ಈ ಸಂದೇಶ 24 ಗಂಟೆಗಳ ಕಾಲ ಥಿಯೇಟರ್ ಬೋರ್ಡ್ ಮೇಲೆ ಡಿಸ್‍ಪ್ಲೇ ಆಗಿದೆ. ಅತ್ಯದ್ಭುತ ಕಲಾವಿದ ಸಂಚಾರಿ ವಿಜಯ್‍ಗೆ ಫ್ಲಾಂಕ್ಲಿನ್ ಥಿಯೇಟರ್‍ನವರು ಸಲ್ಲಿಸಿದ ಗೌರವ ಇದಾಗಿದೆ. ಅಂದಹಾಗೆ,  ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡಿಗ, ಸಿನಿಮಾ ನಿರ್ಮಾಪಕ ರವಿ ಕಶ್ಯಪ್ ಅವರಿಂದ ಈ ಒಂದು ಗೌರವ ಸಲ್ಲಿಕೆ ಸಾಧ್ಯವಾಗಿದೆ.

ವಿಜಯ್‍ಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಬಿ.ಎಸ್. ಲಿಂಗದೇವರು ನಿರ್ದೇಶನ ಮಾಡಿದ್ದ ನಾನು ಅವನಲ್ಲ ಅವಳು ಸಿನಿಮಾದಿಂದ. ಇದೀಗ ಲಿಂಗದೇವರು ಅವರು ಫ್ರಾಂಕ್ಲಿನ್ ಚಿತ್ರಮಂದಿರದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಮೆರಿಕದ ಫ್ರಾಂಕ್ಲಿನ್ ಥಿಯೇಟರ್‍ನವರು ವಿಜಯ್ ನೆನಪಲ್ಲಿ ಇಂದು ಮೆಸೇಜ್ ಪ್ರದರ್ಶನ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ. ಅಗಲಿದ ಕನ್ನಡದ ಕಲಾವಿದನನ್ನು ಗುರುತಿಸಿದ ಫ್ರಾಂಕ್ಲಿನ್ ಥಿಯೇಟರ್ ಮತ್ತು ಕಾರಣಕರ್ತರಾದ ರವಿ ಕಶ್ಯಪ್ ರವರಿಗೆ ವಂದನೆಗಳು ಎಂದಿದ್ದಾರೆ ಅವರು.

ಜೂನ್ 12ರ ತಡರಾತ್ರಿ ಬೈಕ್‍ನಲ್ಲಿ ಬರುವಾಗ ವಿಜಯ್‍ಗೆ ಅಪಘಾತವಾಗಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅವರು ಕೋಮಗೆ ಜಾರಿದ್ದರು. ನಂತರ ವೈದ್ಯರು ಎಷ್ಟೇ ಪ್ರಯತ್ನಪಟ್ಟರು ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೂನ್ 14ರ ವೇಳೆಗೆ ಅವರ ಮೆದುಳು ನಿಷ್ಕ್ರೀಯಗೊಂಡಿದ್ದರಿಂದ ಅವರ ಅಂಗಾಂಗ ದಾನಕ್ಕೆ ಕುಟುಂಬದವರು ನಿರ್ಧಾರ ಮಾಡಿದ್ದರು. ನಂತರ ಅವರ ಅಂಗಾಂಗಗಳನ್ನು ಅವಶ್ಯಕವಿರುವ ರೋಗಿಗಳಿಗೆ ನೀಡಲಾಗಿತ್ತು. ಸಾವಿನಲ್ಲೂ ವಿಜಯ್ ಸಾರ್ಥಕತೆಯನ್ನು ಮರೆದಿದ್ದಾರೆ. ಅತ್ಯದ್ಭುತ ಕಲಾವಿದನಿಗೆ ಅಮೆರಿಕಾರದಲ್ಲಿ ಹೀಗೆ ವಿಭಿನ್ನವಾಗಿ ಗೌರವ ಸಲ್ಲಿಸಿರುವುದು ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ.

Click to comment

Leave a Reply

Your email address will not be published. Required fields are marked *

Advertisement