Cinema

ಶಿಲ್ಪಾ ಮುಡ್ಬಿ ದನಿಯಲ್ಲಿ ಮ್ಯಾಜಿಕ್ ಕ್ರಿಯೇಟ್ ಮಾಡಿದ ಪುಗ್ಸಟ್ಟೆ ಲೈಫು ಸಾಂಗ್ -‘ಖಾಲಿ ಖಾಲಿ’ ಹಾಡು ವೈರಲ್

Published

on

Share this

ಬೆಂಗಳೂರು: ಬಿಡುಗಡೆಯ ಸನಿಹದಲ್ಲಿರುವ ಸಂಚಾರಿ ವಿಜಯ್ ಅಭಿನಯದ ಚಿತ್ರ ‘ಪುಗ್ಸಟ್ಟೆ ಲೈಫು’ ಒಂದೊಂದೇ ಸ್ಯಾಂಪಲ್ ಗಳ ಮೂಲಕ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ ಚಿತ್ರತಂಡ. ಇಂಟ್ರಸ್ಟಿಂಗ್ ಟ್ರೇಲರ್ ಪ್ರೇಕ್ಷಕರ ಭರಪೂರ ಮೆಚ್ಚುಗೆಗೆ ಪಾತ್ರವಾದ ಬೆನ್ನಲ್ಲೆ ಚಿತ್ರದ ಒಂದೊಂದೇ ಹಾಡುಗಳು ಕೂಡ ಕೇಳುಗರ ಮನಸ್ಸಿಗೆ ಹತ್ತಿರವಾಗುತ್ತಿವೆ. ಇದರ ಬೆನ್ನಲ್ಲೇ ಚಿತ್ರದ ಮತ್ತೊಂದು ಮೀನಿಂಗ್ ಫುಲ್ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಚಿತ್ರದ ‘ಖಾಲಿ ಖಾಲಿಯಾಗಿದೆ’ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ಇಂದು ಬಿಡುಗಡೆಯಾಗಿದೆ. ಕೆ.ಕಲ್ಯಾಣ್ ಅರ್ಥಗರ್ಭಿತ ಮನಮುಟ್ಟುವ ಸಾಹಿತ್ಯ ಈ ಹಾಡಿಗಿದೆ. ವಾಸು ದೀಕ್ಷಿತ್ ಸಂಗೀತ ಸಂಯೋಜನೆ ಕೂಡ ಅಷ್ಟೇ ಸೊಗಸಾಗಿದ್ದು, ಖ್ಯಾತ ಜನಪದ ಗಾಯಕಿ ಶಿಲ್ಪಾ ಮುಡ್ಬಿ ದನಿ ಮ್ಯಾಜಿಕ್ ಕ್ರಿಯೇಟ್ ಮಾಡಿದೆ. ಸದ್ಯಕ್ಕಂತು ಈ ಹಾಡನ್ನು ಎಲ್ಲರೂ ರಿಪೀಟ್ ಮೂಡ್ ನಲ್ಲಿ ಕೇಳೋಕೆ ಶುರುವಿಟ್ಟಿದ್ದಾರೆ. ಇದನ್ನೂ ಓದಿ: ಫೋರ್ ವಾಲ್ಸ್’ ಚಿತ್ರದ ಮೊದಲ ಹಾಡು ರಿಲೀಸ್ – ಪ್ರೀತಿ ನಿವೇದನೆಯಲ್ಲಿ ಬ್ಯುಸಿಯಾದ ಅಚ್ಯುತ್ ಕುಮಾರ್

ಅರವಿಂದ್ ಕುಪ್ಳೀಕರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಡಾರ್ಕ್ ಹ್ಯೂಮರ್ ಕಥಾಹಂದರದ ಚಿತ್ರ ‘ಪುಗ್ಸಟ್ಟೆ ಲೈಫು’. ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತೊಮ್ಮೆ ಹೊಸ ಅವತಾರವೆತ್ತಿದ್ದು, ಮುಸ್ಲಿಂ ಯುವಕನಾಗಿ ಬೀಗ ರಿಪೇರಿ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಳ ಮಧ್ಯಮ ವರ್ಗದ ಯುವಕನೊಬ್ಬ ಹಣದ ಹಿಂದೆ ಬಿದ್ದರೆ ಎದುರಾಗಬಹುದುದಾದ ಸಮಸ್ಯೆಗಳು, ಅಧಿಕಾರದಲ್ಲಿರುವವರು ಅಮಾಯಕರನ್ನು ತಮ್ಮ ಕೆಲಸಕ್ಕಾಗಿ ಬಳಸಿಕೊಳ್ಳುವ ರೀತಿ ಇವೆಲ್ಲವನ್ನು ಸಿನಿಮ್ಯಾಟಿಕ್ ಆಗಿ ಒಂದೊಳ್ಳೆ ಸಂದೇಶವನ್ನಿಟ್ಟಿಕೊಂಡು ಸಿನಿಮಾ ಹೆಣೆದಿದ್ದಾರೆ ನಿರ್ದೇಶಕರು. ಇದನ್ನೂ ಓದಿ: ಕೊನೆಗೂ ತನ್ನ ಆಸೆ ನೆರವೇರಿಸಿಕೊಂಡ ವಿಜಯ್ ದೇವರಕೊಂಡ

ಚಿತ್ರದಲ್ಲಿ ಭರತ ನಾಟ್ಯ ಕಲಾವಿದೆ ಮಾತಂಗಿ ಪ್ರಸನಾ ನಾಯಕನಟಿಯಾಗಿ ಲಾಯರ್ ಪಾತ್ರದಲ್ಲಿ ನಟಿಸಿದ್ದು, ಅಚ್ಯುತ್ ಕುಮಾರ್, ರಂಗಾಯಣ ರಘು ತಾರಾಬಳಗದಲ್ಲಿದ್ದಾರೆ. ಬಹುತೇಕ ಎಲ್ಲಾ ಕಲಾವಿದರು ರಂಗಭೂಮಿ ಹಿನ್ನೆಲೆಯುಳ್ಳವರೇ ನಟಿಸಿರೋದು ಈ ಚಿತ್ರದ ವಿಶೇಷ ಸಂಗತಿ. ಸರ್ವಸ್ವ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ಅಧ್ವೈತ್ ಗುರುಮೂರ್ತಿ ಕ್ಯಾಮೆರಾ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ಚಿತ್ರದ ಟ್ರೇಲರ್, ಹಾಡುಗಳಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರಕ್ಕಿದ್ದು, ಚಿತ್ರರಂಗದ ಗಣ್ಯರು ಕೂಡ ಸಿನಿಮಾ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಸೆಪ್ಟೆಂಬರ್ 24ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದನ್ನೂ ಓದಿ: ಪ್ರಭಾಸ್, ದೀಪಿಕಾ ಪಡುಕೋಣೆಯ ಪ್ರಾಜೆಕ್ಟ್ ಕೆ ಚಿತ್ರೀಕರಣ ಆರಂಭ ಯಾವಾಗ?

Click to comment

Leave a Reply

Your email address will not be published. Required fields are marked *

Advertisement
Advertisement