ಕಲಬುರಗಿ: ಯಾವುದೇ ವಾಹನ ಚಲಾಯಿಸುವಾಗ ಚಾಲಕರು ಮೊಬೈಲ್ (Bus Driver Mobile) ಬಳಕೆ ಮಾಡಬಾರದು ಎಂಬ ನಿಯಮವಿದೆ. ಆದರೆ ಇಲ್ಲೊಬ್ಬ ಬಸ್ ಚಾಲಕ ಮೊಬೈಲ್‍ನಲ್ಲಿ ಮಾತನಾಡುತ್ತಾ ಒಂದೇ ಕೈಯಿಂದ ಬಸ್ ಓಡಿಸಿ ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಈ ಘಟನೆ ಪ್ರತನಿತ್ಯ ಅಫಜಲಪುರದಿಂದ ಕಲಬುರಗಿ ಮಧ್ಯೆ ಸಂಚರಿಸುವ ಸರ್ಕಾರಿ ಬಸ್ಸಿನಲ್ಲಿ ನಡೆದಿದೆ. ಅಫಜಲಪುರ ಘಟಕದ ಕೆಎ-32 ಎಫ್ 2169 ಬಸ್ ಚಾಲಕ ನಾಗೇಂದ್ರಪ್ಪ ಇಂದು ಒಂದೇ ಕೈಯಲ್ಲಿ ಬಸ್ ಓಡಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದವರು.
- Advertisement -
ನಾಗೇಂದ್ರಪ್ಪ ಗಂಟೆಗಟ್ಟಲೇ ಫೋನಿನಲ್ಲಿ ಮಾತನಾಡುತ್ತಾ ಒಂದೇ ಕೈಯಲ್ಲಿ ಬಸ್ ಓಡಿಸುತ್ತಿದ್ದರು. ಇದನ್ನು ಕಂಡು ಗಾಬರಿಗೊಂಡ ಪ್ರಯಾಣಿಕನೋರ್ವ ತನ್ನ ಮೊಬೈಲ್‍ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದಾನೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಚಾಲಕನ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಪಾಕಿಸ್ತಾನದ ಅಣ್ವಸ್ತ್ರಗಳು ಎಲ್ಲಾ ಮುಸ್ಲಿಮರಿಗೆ ಸೇರಿದ್ದು: ಷರಿಫ್ ಅಳಿಯ
ಹೀಗೆ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗಿ ಚಾಲಕ ಸ್ವಲ್ಪ ಯಾಮಾರಿದರೆ ಪ್ರಯಾಣಿಕರ ಕಥೆ ಏನು ಎಂದು ಪ್ರಶ್ನಿಸಿದರುವ ಸಾರ್ವಜನಿಕರು, ಚಾಲಕ ನಾಗೇಂದ್ರಪ್ಪನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
Web Stories