ತುಮಕೂರು: ಪಬ್ಲಿಕ್ ಟಿವಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ನಮಗೆ ಎಚ್ಚರಿಕೆ ಗಂಟೆಯಾಗಿದೆ. ಆ ಎಚ್ಚರಿಕೆ ಗಂಟೆಯನ್ನು ಸ್ವೀಕಾರ ಮಾಡಿ, ಸರ್ವೆಯಲ್ಲಿ ನಮಗೆ ಎಲ್ಲಿ ತೊಂದರೆಗಳಿವೆ ಎಂಬುದು ಗೊತ್ತಾಗಿದ್ದು, ಅವುಗಳನ್ನು ಸರಿಪಡಿಸಿಕೊಳ್ಳುತ್ತೆವೆ ಎಂದು ಮಾಜಿ ಸಚಿವ ಬಿಜೆಪಿ ನಾಯಕ ವಿ.ಸೋಮಣ್ಣ ತಿಳಿಸಿದ್ದಾರೆ.
ಚುನಾವಣೆಗೆ ಇನ್ನೂ ಮೂರರಿಂದ ನಾಲ್ಕು ತಿಂಗಳು ಕಾಲಾವಧಿ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜನಾಭಿಪ್ರಾಯ ಬದಲಾಗುವ ಸಾಧ್ಯತೆಗಳಿರುತ್ತವೆ. ಪಬ್ಲಿಕ್ ಟಿವಿ ಸರ್ವೆ ನಡೆಸಿರುವುದು ಸಂತೋಷ. ನಮ್ಮಲ್ಲಿ ಕೂಡ ಕೆಲವು ಸಮೀಕ್ಷೆಗಳ ಫಲಿತಾಂಶಗಳಿವೆ ಅಂತಾ ಅಂದ್ರು. ಇದನ್ನೂ ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!
Advertisement
ಇಂದು ಬೆಳಗ್ಗೆ ತುಮಕೂರು ಜಿಲ್ಲೆಯ ಗುಬ್ಬಿ ನಗರದಲ್ಲಿ ಸೋಮಣ್ಣ ಅವರು ಕೆಲವೊಂದು ವಾರ್ಡ್ ಗಳಿಗೆ ಭೇಟಿ ಕೊಟ್ಟು ಕುಂದುಕೊರತೆ ಆಲಿಸಿದರು. ನಾನು ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಅಂತೆಕಂತೆಗಳಿಗೆ ಕಾರ್ಯಕರ್ತರು ಬೆಲೆ ಕೊಡಬಾರದು. ಫೆಬ್ರವರಿ ಎರಡನೇ ವಾರದಲ್ಲಿ ಟಿಕೆಟ್ ಯಾರಿಗೆಂದು ಹೈಕಮಾಂಡ್ ಅಂತಿಮ ಮಾಡುತ್ತದೆ ಅಂತಾ ಹೇಳಿದರು. ಇದನ್ನೂ ಓದಿ: ಹೈದರಾಬಾದ್ ಕರ್ನಾಟಕದಲ್ಲಿ ಈ ಬಾರಿ ಗೆಲುವು ಯಾರಿಗೆ?
Advertisement
ಇದನ್ನೂ ಓದಿ: ಕರಾವಳಿ/ ಮಧ್ಯ ಕರ್ನಾಟಕದಲ್ಲಿ ಜನರ ಮತ ಯಾವ ಪಕ್ಷಕ್ಕೆ?