ಬೆಂಗಳೂರು: ಪಬ್ಲಿಕ್ ಟಿವಿಯ ವಿದ್ಯಾಪೀಠ ಶೈಕ್ಷಣಿಕ ಮೇಳ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಮೇಳಕ್ಕೆ ನಿನ್ನೆ ಚಾಲನೆ ಸಿಕ್ಕಿದ್ದು ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಳಗ್ಗೆ 9:30 ರಿಂದ ಸಂಜೆ 6.00 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ.
Advertisement
Advertisement
ಯಾರೆಲ್ಲ ಭಾಗವಹಿಸಿದ್ದಾರೆ?
ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್, ಆರ್ಕಿಟೆಕ್ಚರ್, ಕಾಮರ್ಸ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು, ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ಸಮೂಹ ಸಂವಹನ, ಎಂಬಿಎ ಇನ್‍ಸ್ಟಿಟ್ಯೂಷನ್, ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು. ಇದನ್ನೂ ಓದಿ: ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಚಾಲನೆ
Advertisement
ಯಾರೆಲ್ಲ ಆಗಮಿಸಬಹುದು?
ಕೌನ್ಸೆಲರ್‌ಗಳು, ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪಿಯುಸಿ ವಿದ್ಯಾರ್ಥಿಗಳು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವ ಉದ್ಯೋಗಿಗಳು.
Advertisement
ಭಾನುವಾರದ ಕಾರ್ಯಕ್ರಮಗಳು ಏನು?
ಬೆಳಗ್ಗೆ 10:30 ರಿಂದ 11:30ರವರೆಗೆ ಪ್ರಯೋಗ ಶಿಕ್ಷಣ ಸಂಶೋಧನೆ ಸಂಸ್ಥೆಯ ನಿರ್ದೇಶಕ – ಸಂಶೋಧಕ ಡಾ..ಕೆ.ಎಸ್.ನಾಗಭೂಷಣ್ ಮತ್ತು ಶಿಕ್ಷಣ ತಜ್ಞ ಡಾ.ಎಚ್.ಎಸ್.ನಾಗರಾಜ ಅವರು “ಶುದ್ಧ ವಿಜ್ಞಾನ ಮತ್ತು ಸಂಶೋಧನಾ ಅವಕಾಶಗಳು” ವಿಚಾರದ ಬಗ್ಗೆ ಮಾತನಾಡಲಿದ್ದಾರೆ.
ಬೆಳಗ್ಗೆ 11:45ರಿಂದ 12:45 ರವರೆಗೆ ಈಸ್ಟ್ ಪಾಯಿಂಟ್ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಆರ್.ಶಂಖಪಾಲ್ ಅವರು “ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಕೈಬರಹ ಮತ್ತು ಜ್ಞಾಪಕ ತಜ್ಞ ಡಾ.ರಫಿ ಉಲ್ಲಾ ಬೇಗ್ ಅವರು “ಕೈಬರಹದ ಮೂಲಕ ನಿಮ್ಮ ವೃತ್ತಿಯನ್ನು ಅನ್ವೇಷಿಸಿ” ವಿಷಯದ ಬಗ್ಗೆ ಮಾತನಾಡಲಿದ್ದಾರೆ.