ಗದಗ: ಗೋಬಿಮಂಚೂರಿ ಹಾಗೂ ಪಾನಿಪುರಿ ಐಟಮ್ಸ್, ಈ ಹೆಸರು ಕೇಳಿದರೆ ಎಲ್ಲರಿಗೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಜಂಕ್ ಫುಡ್ ಹೇಗೆ, ಎಲ್ಲಿ ತಯಾರಾಗುತ್ತೆ ಅನ್ನೋ ಹಿಂದಿನ ಅಸಲಿ ಸತ್ಯ ಬಯಲಾಗಿದೆ.
ಇತ್ತೀಚೆಗೆ ಎಲ್ಲೆಂದರಲ್ಲಿ ಚೈನಿಸ್ ಫುಡ್‍ಗಳದ್ದೇ ಹಾವಳಿವಾಗಿದ್ದು, ಅದರಲ್ಲೂ ಗೋಬಿಮಂಚುರಿ, ಪಾನಿಪುರಿ ಐಟಮ್ಸ್ ಅಂದರೆ ಸಾಕು ಜನ ಮುಗಿಬೀಳುತ್ತಾರೆ. ಆದರೆ ಮುದ್ರಣಾ ಕಾಶಿ ಗದಗನಲ್ಲಿ ಲಾಭದಾಸೆಗಾಗಿ ಜಂಕ್‍ಫುಡ್ ಮಾಡುವ ವ್ಯಾಪರಿಗಳು ಅವುಗಳನ್ನ ಅನೇಕ ಕೊಳೆತ ವಸ್ತುಗಳಿಂದ ತಯಾರಿಸುತ್ತಾರೆ. ಬೆಟಗೇರಿಯ ಬಸ್ ನಿಲ್ದಾಣದ ಹಿಂಭಾಗ, ತೆಂಗಿನಕಾಯಿ ಬಜಾರ, ತೋಂಟದಾರ್ಯ ಮಠದ ಮುಂದಿನ ರಸ್ತೆ, ಹಾತಲಗೇರಿ ನಾಕಾ, ಮುಳಗುಂದ ನಾಕಾ ಸೇರಿದಂತೆ ಅನೇಕ ಕಡೆಗಳಲ್ಲಿ ಜಂಕ್ ಫುಡ್ ಹೇಗೆಲ್ಲಾ ತಯಾರುತ್ತವೆ ಎಂಬುದನ್ನು ಪಬ್ಲಿಕ್ ಟಿವಿತಂಡ ರಹಸ್ಯ ಕಾರ್ಯಾಚರಣೆ ಮೂಲಕ ಬಯಲು ಮಾಡಿದೆ.
Advertisement
Advertisement
ಜಂಕ್‍ಫುಡ್‍ಗೆ ಕೆಟ್ಟಿರುವ ಹೂ ಕೋಸು, ಕ್ಯಾಬೇಜ್, ಸ್ಟಾಕ್ ಮೈದಾಹಿಟ್ಟು, ಟೆಸ್ಟಿಂಗ್ ಪೌಡರ್, ಐಸ್ ಹೀಗೆ ಅನೇಕ ವಸ್ತುಗಳನ್ನ ಬಳಸಿ ತಯಾರಿಸಲಾಗುತ್ತದೆ. ಇದನ್ನು ಸೇವಿಸುವುದರಿಂದ ಮನುಷ್ಯ ಮಾರಕ ಕಾಯಿಲೆ ಒಳಗಾಗುತ್ತಾನೆ. ಕೊಬ್ಬಿನಾಂಶ, ಹೆಪಟೈಟಿಸ್-ಬಿ, ಕಾಮಾಲೆ, ಕ್ಯಾನ್ಸರ್, ಟೈಫಾಯಿಡ್ ಸೇರಿದಂತೆ ಗ್ಯಾಸ್ಟ್ರಿಕ್ ನಂತಹ ಮಾರಕ ರೋಗಗಳು ನಿಮಗೆ ಗೊತ್ತಿಲ್ಲದೇ ನಿಮ್ಮನ್ನ ಆವರಿಸಿಕೊಳ್ಳುತ್ತವೆ ಎಂಬುದು ವೈದ್ಯರ ಸಲಹೆಯಾಗಿದೆ.
Advertisement
ಗಬ್ಬೆದ್ದು ನಾರುವ ಜಾಗದಲ್ಲಿ, ಶೌಚಾಲಯ ಪಕ್ಕದಲ್ಲಿ ಇದನ್ನೆಲ್ಲಾ ತಯಾರಿಸುತ್ತಾರೆ. ಜೊತೆಗೆ ಪೇಂಟಿಂಗ್ ಪ್ಲಾಸ್ಟಿಕ್ ಡಬ್ಬಗಳಲ್ಲಿ ಸಾಸ್ ತಯಾರಿಸುತ್ತಾರೆ. ಕೆಟ್ಟು, ಹುಳುಹತ್ತಿದ ಕ್ಯಾಬೇಜ್ ಹಾಗೂ ಹೂ ಕೋಸು ಬಳಸಿ ಗೋಬಿ ತಯಾರಿಸುತ್ತಾರೆ. ಹೋಟೆಲ್‍ಗಳಲ್ಲಿ ಪುರಿ, ಮಿರ್ಚಿ-ಬಜ್ಜಿ, ಕಾಂದಾ ಬಜ್ಜಿ, ಸೇವ್ ತಯಾರಿಸಿ ಉಳಿದ ವೆಸ್ಟ್ ಆಗಿರುವ ಎಣ್ಣೆ ತಂದು ಪಾನಿಪುರಿ ತೆಗೆಯುತ್ತಾರೆ. ಅಷ್ಟೇ ಅಲ್ಲದೇ ಬೇರೆ ಬೇರೆ ಎಣ್ಣೆ, ಬಹಳ ದಿನದ ಸ್ಟಾಕ್ ಮೈದಾಹಿಟ್ಟು, ಟೆಸ್ಟಿಂಗ್ ಪೌಡರ್, ಹೀಗೆ ಅನುಪಯುಕ್ತ ವಸ್ತುಗಳು, ಕಲುಷಿತ ನೀರಲ್ಲಿ ಕೆಟ್ಟುಹೋದ ಐಸ್ ಹಾಕುತ್ತಾರೆ ಎಂದು ತಿಳಿದು ಬಂದಿದೆ.
Advertisement
ಇವತ್ತು ನಾಯಿ ಕೊಡೆಗಳ ರೀತಿ ಪಾನಿಪೂರಿ ಸ್ಟಾಲ್‍ಗಳು, ಗೋಬಿ ಮಂಚೂರಿ ಸ್ಟಾಲ್‍ಗಳು ತಲೆ ಎತ್ತಿವೆ. ದಾರಿಲೀ ಹೋಗುತ್ತಿದ್ದರೆ ಘಮ ಘಮ ಅನ್ನೋ ವಾಸನೆ ಮೂಗಿಗೆ ರಪ್ ಅಂತಾ ಹೊಡೆಯುತ್ತದೆ. ಇವುಗಳ ನಡುವೆ ಗೋಲ್‍ಗಪ್ಪಾ ಮಾರೋರ ಹಾವಳಿ ಬೇರೆ ಹೆಚ್ಚಾಗಿದೆ ಎಂದು ಪಾನಿಪುರಿ ಪ್ರಿಯರಾದ ಕವಿತಾ ಹೇಳಿದ್ದಾರೆ.
ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಆಹಾರ ಮತ್ತು ನಾಗರಿಕ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಸುಮ್ಮನ್ನಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳದೇ ಹೋದರೆ ಆರೋಗ್ಯ ಇಲಾಖೆ ಹಾಗೂ ಆಹಾರ ಇಲಾಖೆ ಇದ್ದೂ ಇಲ್ಲದಂತಾಗುತ್ತವೆ. ಹೀಗಾಗಿ ಈ ಬಗ್ಗೆ ಗದಗನ ಜಿಲ್ಲಾ ಮಟ್ಟದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಕಳಪೆಮಟ್ಟದ ಪದಾರ್ಥಗಳನ್ನ ಬಳಸಿ ಸಿದ್ಧಗೊಳ್ಳುವ ಆಹಾರಕ್ಕೆ ಕಡಿವಾಣ ಹಾಕಬೇಕಿದೆ. ಈ ಮೂಲಕ ಅಮಾಯಕ ಜನರ ಆರೋಗ್ಯವನ್ನ ಉಳಿಸಬೇಕು ಎಂಬುದು ಜನರ ಉತ್ತಾಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv