ಚಿಕ್ಕಮಗಳೂರು: 25 ವಯಸ್ಸಿಗೆ ವೈದ್ಯರಿಗೆ ತಿಳಿಯಲಾಗದ ಕಾಯಿಲೆ ಬಂದಿದ್ದು, ಇರುವ ತನಕ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ ವೈದ್ಯರು ಕೈಚೆಲ್ಲಿದ್ದಾರೆ. ತಮ್ಮನ ಸ್ಥಿತಿಗೆ ಕಣ್ಣೀರಿಟ್ಟ ಅಣ್ಣ ಸಾಲದ ಸುಳಿಯಿಂದ ಆತ್ಮಹತ್ಯೆಗೆ ಶರಣಾಗಿದ್ದು, ಮಗನಿಗಾಗಿ ಮಾಡಿದ ಸಾಲಕ್ಕೆ ಅಪ್ಪ ಜೀತದಾಳಾಗಿದ್ದಾರೆ. ಆದರೆ ಇಂದೋ-ನಾಳೆಯೋ ಅಂತಿರುವ ಯುವಕನ ಜೀವವನ್ನ ಉಳಿಸೋದಕ್ಕಂತು ಆಗಲ್ಲ. ಆದರೆ ಮಗನ ಜೀವಮಾನದ ಆಸೆ ಈಡೇರಿಸಿ ಎಂದು ಸಹಾಯದ ಹಸ್ತವನ್ನು ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
ನಿಶಕ್ತಿಯಿಂದ ಓಡಾಡಲು ಆಗದೇ ಕುಳಿತಲ್ಲೇ ಕುಳಿತಿರುವ ಮಗ, ಇತ್ತ ಮಗನ ಅವಸ್ಥೆಯನ್ನು ಕಂಡು ಕಣ್ಣೀರಿಡುತ್ತಿತ್ತಾರೆ. ಈ ವ್ಯಕ್ತಿಯ ಹೆಸರು ಜಗದೀಶ್, ವಯಸ್ಸು 35 ವರ್ಷ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಿರೇಗರ್ಜೆ ನಿವಾಸಿಯಾಗಿದ್ದು, 8 ವರ್ಷಗಳಿಂದ ವೈದ್ಯರಿಗೂ ತಿಳಿಯದ ಕಾಯಿಲೆಯಿಂದ ಬಳಲುತ್ತಿದ್ದಾನೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಬರೋಬ್ಬರಿ 84 ಕೆ.ಜಿ. ತೂಕವಿದ್ದ ಈತ ಇಂದು 30 ಕೆ.ಜಿಗೆ ಇಳಿದಿದ್ದಾನೆ.
Advertisement
ಕಾಲು ಸೇದುತ್ತೆಂದು ಪಂಜೆ ಹಾಗೂ ಸೀರೆಯನ್ನ ಹರಿದು ಕಾಲುಗಳಿಗೆ ಬಿಗಿಯಾಗಿ ಬಿಗಿದುಕೊಳ್ಳುತ್ತಾನೆ. ರಾತ್ರಿ ವೇಳೆಯಲ್ಲಿ ಈತನ ಕೂಗಾಟ, ನರಳಾಟ ಹೇಳತೀರದ್ದು. ಕಳೆದೊಂದು ವರ್ಷದಿಂದ ಹಾಸಿಗೆ ಹಿಡಿದಿದ್ದನು. ಈಗ ಅಲ್ಪ ಚೇತರಿಸಿಕೊಂಡಿದ್ದಾನೆ. ಜೀರ್ಣಶಕ್ತಿಯನ್ನ ಕುಂಠಿತಗೊಂಡಿದ್ದು, ತಿಂದ ಆಹಾರ ಕೂಡ ಅಜೀರ್ಣವಾಗುತ್ತಿದೆ. ಇನ್ನೂ ನಿತ್ಯ ಕರ್ಮಗಳನ್ನು ವಯಸ್ಸಾದ ತಾಯಿ ಮಾಡಿಸಿ ಆರೈಕೆ ಮಾಡುತ್ತಿದ್ದಾರೆ. ಕುಟುಂಬಕ್ಕೆ ಆಧಾರವಾಗಬೇಕಿದ್ದ ಮಗನ ಸ್ಥಿತಿಯನ್ನು ಕಂಡು ಕಣ್ಣೀರುಡುತ್ತಿದ್ದಾರೆ.
Advertisement
Advertisement
ತಾಯಿ ಮತ್ತು ಅಣ್ಣ, ಜಗದೀಶ್‍ನ ಆರೋಗ್ಯಕ್ಕಾಗಿ ಸಾಲಮಾಡಿ ಚಿಕಿತ್ಸೆ ಕೊಡಿಸಿದರೂ ಈತನನ್ನು ಪರೀಕ್ಷಿಸಿದ ವೈದ್ಯರು ಇರುವ ತನಕ ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ. ಆದರೆ ಜಗದೀಶ್ ನಾನು ಸಾಯುವ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿಯಾಗಿ ಮಾತಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನ ಕುಮಾರಸ್ವಾಮಿ ಮನೆ ಮುಂದೆ ಕಾದುಕುಳಿತ್ತಿದ್ದಾರೆ. ಆದರೆ ಕುಮಾರಸ್ವಾಮಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಕುಟುಂಬಕ್ಕೆ ಆಧಾರವಾಗಿದ್ದ ಅಣ್ಣ, ತಮ್ಮ ಜಗದೀಶ್ ಪರಿಸ್ಥಿತಿ ಹಾಗೂ ಚಿಕಿತ್ಸೆಗೆ ಮಾಡಿದ ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ.
Advertisement
ದೊಡ್ಡ ಮಗ ತೀರಿಕೊಂಡ ಮೇಲೆ ಅಪ್ಪನ ಮೇಲೆ ಸಾಲದ ಹೊರೆಯಾಗಿದ್ದು ಅಪ್ಪ ಕೂಲಿ ಮಾಡಿ ತೀರಿಸುತ್ತಿದ್ದಾರೆ. ಇತ್ತ ಮನೆಯಲ್ಲಿ ತಾಯಿ ಮಗನನ್ನ ನೋಡಿಕೊಂಡು ಕಣ್ಣೀರಿಡುತ್ತಿದ್ದಾರೆ. ಮಗನ ಕಾಯಿಲೆ ಸಾವಿನ ಹೊಸ್ತಿಲಿಗೆ ಬಂದು ನಿಂತಿದೆ. ಸಾವಿನ ಅಂಚಿನಲ್ಲಿರುವ ಜಗದೀಶನಿಗೆ ಸಿಎಂ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಮಾತನಾಡುವ ಆಸೆ ಇದೆ. ಆದ್ದರಿಂದ ಕುಮಾರಸ್ವಾಮಿಯನ್ನು ಭೇಟಿ ಮಾಡಿಸುವ ಒಂದು ಸಣ್ಣ ಪ್ರಯತ್ನ ನಮ್ಮದು. ಈ ನೊಂದ ಕುಟುಂಬಕ್ಕೆ ದಾನಿಗಳು ನೆರವು ನೀಡಲಿ ಎಂಬುದು ನಮ್ಮ ಆಶಯವಾಗಿದೆ.
https://www.youtube.com/watch?v=CsmgASP6r6s
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews