ಧಾರವಾಡ: ಜಿಲ್ಲೆಯ ಗಡಿ ಭಾಗದ ಅರಣ್ಯದಲ್ಲಿ ಹುಣಶಿಕುಮರಿ ಎಂಬ ಕುಗ್ರಾಮವಿದೆ. ಕಳೆದ 70 ವರ್ಷಗಳಿಂದ ಇಲ್ಲಿ ಮನೆಗಳನ್ನು ಕಟ್ಟಿಕೊಂಡು ಗ್ರಾಮಸ್ಥರು ಜೀವನ ಮಾಡುತ್ತಿದ್ದಾರೆ. 100 ಮನೆ ಇರುವ ಈ ಗ್ರಾಮದ ಜನರ ಕಸುಬು ಹೈನುಗಾರಿಕೆ. ಈ ಗ್ರಾಮಸ್ಥರಿಗೆ ಜಾನುವಾರುಗಳೇ ಸರ್ವಸ್ವ. ಗ್ರಾಮದಲ್ಲಿ ಸುಮಾರು 2,500 ಜಾನುವಾರುಗಳಿದ್ದು ಇವುಗಳಿಂದಲೇ ಜೀವನ ಕಟ್ಟಿಕೊಂಡಿದ್ದಾರೆ.
ಅರಣ್ಯದಲ್ಲಿರುವ ಈ ಕುಗ್ರಾಮದಲ್ಲಿ ಮಳೆಗಾಲದಲ್ಲಿ ಅಲ್ಲಿ ಇಲ್ಲಿ ಕೆರೆಗಳಲ್ಲಿ ನಿಂತ ನೀರು ಕುಡಿದು ಮೂಖ ಜೀವಿಗಳು ಬದುಕುತ್ತಿವೆ. ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಆದಾಗಿ ಇರೋ ಸ್ಥಳವನ್ನು ಬಿಟ್ಟು ಸುಮಾರು 6 ತಿಂಗಳ ಕಾಲ ಅರಣ್ಯದಲ್ಲೇ ದನಗಳನ್ನ ಮೇಯಿಸುತ್ತ ಅಲೆಮಾರಿಗಳಂತೆ ಬದುಕು ಸಾಗಿಸುತ್ತಿದ್ದಾರೆ.
Advertisement
Advertisement
ಈ ಕುಗ್ರಾಮವು ಕಲಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರೋದ್ರಿಂದ ನೀರಿನ ತೊಟ್ಟಿ ಮಾಡಿಸಿ ಕೊಡಲಾಗಿದೆ. ಆದ್ರೆ ಗ್ರಾಮದಲ್ಲಿ 2,500 ದನಗಳಿದ್ದು ಇಷ್ಟು ದನಗಳಿಗೆ ನೀರು ಸಂಗ್ರಹಣೆ ಅಸಾಧ್ಯವಾಗಿದೆ. ಆದಾಗಿ ಜಾನುವಾರುಗಳಿಗೆ ಸುಮಾರು 30 ಅಡಿ ಉದ್ದದ ನೀರಿನ ತೊಟ್ಟಿ ನಿರ್ಮಾಣಗೊಂಡರೆ ಜಾನುವಾರುಗಳ ದಾಹ ತೀರುತ್ತದೆ ಎಂದು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ನೆರವು ಬಯಸುತ್ತಿದ್ದಾರೆ.
Advertisement
https://www.youtube.com/watch?v=LbsjoTuV68Y
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv