ಬೆಂಗಳೂರು: ಶಿಕ್ಷಣಕ್ಕಾಗಿ ಸಹಾಯ ಮಾಡಿ ಅಂತಾ 13 ವರ್ಷದ ಬಾಲಕಿ ಇಂದು ‘ಬೆಳಕು’ ಕಾರ್ಯಕ್ರಮಕ್ಕೆ ಬಂದಿರುವ ವಿದ್ಯಾರ್ಥಿನಿ ಹೆಸರು ಭವ್ಯಶ್ರೀ.
ಬೆಂಗಳೂರು ಹೊರವಲಯದ ಅನೇಕಲ್ ತಾಲೂಕಿನ ನೆರಳೂರಿನಲ್ಲಿ ವಾಸಿಸುತ್ತಿದ್ದಾಳೆ. ತಂದೆ 8 ವರ್ಷಗಳ ಹಿಂದೆ ತೀರಿ ಹೋಗಿದ್ದು ತಾಯಿ ಯಲ್ಲಮ್ಮ ಮಗಳ ಶಿಕ್ಷಣಕ್ಕಾಗಿ ಕೂಲಿ ಕೆಲಸ ಮಾಡಿ ಆನೇಕಲ್‍ನ ಸ್ವಾಮಿ ವಿವೇಕಾನಂದ ಶಾಲೆಗೆ ಸೇರಿಸಿದ್ದಾರೆ.
Advertisement
Advertisement
ಆಟ ಪಾಠದಲ್ಲಿ ತುಂಬಾ ಚೂಟಿಯಾಗಿರುವ ಭವ್ಯಶ್ರೀ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ತಾಯಿ ಯಲ್ಲಮ್ಮಗೆ ಕಣ್ಣಿನ ಕ್ಯಾನ್ಸರ್ ಕೊನೆ ಹಂತ ತಲುಪಿದ್ದು ತನ್ನ ಕೆಲಸ ತಾನು ಮಾಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ತಾಯಿ ಯಲ್ಲಮ್ಮಗೆ ಚಿಕಿತ್ಸೆ ಪಡೆಯಲು ಆಗದೇ, ಮಗಳ ವಿದ್ಯಾಭ್ಯಾಸಕ್ಕೆ ಶುಲ್ಕ ಪಾವತಿಸಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭವ್ಯಶ್ರೀ ತಾಯಿಯನ್ನು ನೋಡಿಕೊಳ್ಳೋದ್ರ ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಬೇಕಾಗಿದೆ.
Advertisement
ಕಡು ಬಡತನದಲ್ಲಿರುವ ಈ ಕುಟುಂಬಕ್ಕೆ ಸೋದರಮಾವ ಆಸರೆಯಾಗಿದ್ದಾರೆ. ವಿದ್ಯಾರ್ಥಿನಿ ಭವ್ಯಶ್ರೀ ವಿದ್ಯಾಭ್ಯಾಸಕ್ಕೆ ಹಾಗೂ ತಾಯಿಯ ಆರೈಕೆಗೆ ಹಣವಿಲ್ಲದೆ ಪರದಾಡುತ್ತ ನೆರವಿಗಾಗಿ ಅಂಗಲಾಚುತ್ತಿದ್ದಾಳೆ. ಯಾರಾದ್ರೂ ದಾನಿಗಳು ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಮೂಲಕ ನೆರವು ಬಯಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=CJKaHx7Sw0A