ಬೆಂಗಳೂರು: ಓಡಾಡಲು ಕಷ್ಟ ಪಡುವ ಮಲ್ಟಿ ಟ್ಯಾಲೆಂಟೆಡ್, ಗುಣಪಡಿಸಲಾಗದ ಕಾಯಿಲೆ. ಅವಮಾನ ಪಟ್ಟು ವಿದ್ಯಾಭ್ಯಾಸ ಮುಗಿಸಿದ ಸ್ನಾತಕೊತ್ತರ ಪದವಿ ಪಡೆದ ಸ್ವಾಭಿಮಾನಿ. ಇತನ ಬಾಳಿನಲ್ಲಿ ಬಿರುಗಾಳಿಯಂತೆ ಬೀಸಿದೆ ಮಾನಸಿಕ ಕಿನ್ನತೆ. ಕಿನ್ನತೆ ನಿವಾರಣೆಯಾದ್ರೆ ಇತನ ಬಾಳು ಸುಂದರವಾಗುತ್ತೆ ಅನ್ನೋದು ಪೋಷಕರ ಆಳಲು.
ಸ್ವತಃ ಊಟ ಮಾಡಲಾಗದೇ, ಓಡಾಡಲು ಕಷ್ಟ ಪಡುತ್ತಿರುವ 30 ವರ್ಷದ ನಿತ್ಯಾನಂದ ಮಾತು ಬಾರದ ಮಹಾ ಛಲಗಾರ. ಕೇಳಿದ್ದನ್ನು ಆಲಿಸಿ ಬರೆಯುವ ನಿಪುಣ. ಈತ ಬೆಂಗಳೂರಿನ ಜೆಪಿನಗರದ ನಿವಾಸಿಯಾಗಿದ್ದು, ದಿನಮಣಿ ಹಾಗೂ ಪರಿಮಳ ದಂಪತಿಯ ಪುತ್ರ.
ನಿತ್ಯಾನಂದ ಎರಡೂವರೆ ವರ್ಷ ವಯಸ್ಸಿನಲ್ಲಿರುವಾಗಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆಗೆ ಒಳಗಾಗಿದ್ದು, ಇದೀಗ ಬದುಕು ನಶ್ವರವಾಗಿದೆ. ತೀಕ್ಷ್ಣ ಬುದ್ಧಿಮತಿಯಾಗಿರುವ ನಿತ್ಯಾನಂದನನ್ನು ಕಂಡು ಹಲವರು ಅಣಕಿಸಿದ್ದುಂಟು. ತಾಯಿಗೆ ಮಗನ ಅಸಹಾಯಕತೆಯನ್ನ ಕಂಡು ಎಲ್ಲಾ ಮಕ್ಕಳಂತೆ ನನ್ನ ಮಗನಿಲ್ಲವಲ್ಲ ಎಂಬ ಕೊರಗು. ಆದರೆ ಧೃತಿಗೆಡದ ತಾಯಿ ನನ್ನ ಮಗ ಎಲ್ಲರಂತೆ ಸಮಾಜದಲ್ಲಿ ಬದುಕಬೇಕೆಂದು ಮಗನ ನಿತ್ಯದ ಕರ್ಮಗಳನ್ನು ಸ್ವತಃ ತಾವೇ ಮಾಡಿಸಿ ಶಾಲೆಗೆ ಸೇರಿಸಿ ಉನ್ನತ ಶಿಕ್ಷಣ ಕೊಡಿಸಿದ್ದಾರೆ.
ದೈಹಿಕವಾಗಿ ಅಶಕ್ತನಾಗಿರುವ ಈ ತೀಕ್ಷ್ಣ ಬುದ್ಧಿಮತಿ ನಿತ್ಯಾನಂದ ಅಮ್ಮನ ಆಸೆಯಂತೆ ತನ್ನ ನ್ಯೂನತೆಯನ್ನು ಬದಿಗಿರಿಸಿ ಛಲದಿಂದ ಓದಿ ಎಸ್‍ಎಸ್‍ಎಲ್‍ಸಿಯಲ್ಲಿ 78%, ಬಿಎ ಪದವಿಯಲ್ಲಿ 67%, ಎಂಎ ಇನ್ ಸೋಷಿಯಲಾಜಿಯಲ್ಲಿ 66% ಪಡೆದು ಮಾದರಿಯಾಗಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಈ ಛಲಗಾರ ಪಿಎಚ್‍ಡಿ ಮಾಡುವ ಹುಮ್ಮಸಿನಲ್ಲಿದ್ದಾರೆ.
ದೈಹಿಕ ನ್ಯೂನತೆಯ ನಡುವೆಯೂ ನಿತ್ಯಾನಂದ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಅಷ್ಟೇ ಅಲ್ಲದೇ ಮನೆಯಿಂದಲೇ ಕಂಪ್ಯೂಟರ್‍ನಲ್ಲಿ ಕೆಲಸ ಮಾಡಿ ಅಷ್ಟೋ ಇಷ್ಟೋ ಸಂಪಾದಿಸಿ ಸ್ವಾಭಿಮಾನಿಯಾಗಿದ್ದಾರೆ. ಜೊತೆಗೆ ಕೀ ಬೋರ್ಡ್ ನುಡಿಸಲು ಕಲಿಯುತ್ತಿರುವ ನಿತ್ಯಾನಂದ ಸರಾಗವಾಗಿ ಕೀ ಬೋರ್ಡ್ ನುಡಿಸುತ್ತಾರೆ.
ಓದಿನಲ್ಲಿ ಸದಾ ಮುಂದು, ಲವಲವಿಕೆಯಿಂದ ಇರುವ ಪ್ರತಿಭಾವಂತ ಯುವಕ ನಿತ್ಯಾನಂದ ಮಾನಸಿಕ ಖಿನ್ನತೆ ಬಳಲುತ್ತಿದ್ದು, ಬೆಳಕು ಕಾರ್ಯಕ್ರಮ ಮೂಲಕವಾದರೂ ತನ್ನ ಮಗ ಖಂಡಿತವಾಗಲು ಖಿನ್ನತೆಯಿಂದ ಹೊರಬರುತ್ತಾನೆಂಬ ಈ ತಾಯಿಯ ನಂಬಿಕೆ ಇಟ್ಟಿದ್ದಾರೆ.
https://www.youtube.com/watch?v=esiRyA8mrHE