ಬೆಂಗಳೂರು: ಕಾಂಗ್ರೆಸ್ (Congress) ಶಾಸಕರ ಫಾರಿನ್ ಟೂರ್ ಸಂಚಲನ ಹುಟ್ಟುಹಾಕಿದ್ದು, `ಪಬ್ಲಿಕ್ ಟಿವಿ’ (Public Tv) ಬ್ರೇಕ್ ಮಾಡಿದ್ದ ಸುದ್ದಿ ನಿಜವಾಗಿದೆ. ಸುರ್ಜೇವಾಲಾ ವಾರ್ನಿಂಗ್‌ಗೆ ಡೋಂಟ್ ಕೇರ್ ಅಂದಿರುವ ಕಾಂಗ್ರೆಸ್ ಶಾಸಕರ ತಂಡ ಫಾರಿನ್ ಟೂರ್ ಫಿಕ್ಸ್ ಮಾಡಿಕೊಂಡಿದೆ.
ಫೆ.18ರಿಂದ ಮಾ.3ರ ತನಕ 20ಕ್ಕೂ ಹೆಚ್ಚು ಶಾಸಕರ ತಂಡ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ತಂಡದ ಉಸ್ತುವಾರಿಯನ್ನ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ವಹಿಸಿದ್ದಾರೆ. ಈ ಬಗ್ಗೆ ಫೆ.5ರಂದು `ಪಬ್ಲಿಕ್ ಟಿವಿ’ಯಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ರಾಜ್ಯ ಉಸ್ತುವಾರಿ ಸುರ್ಜೇವಾಲಾ ವಿದೇಶಕ್ಕೆ ತೆರಳದಂತೆ ವಾರ್ನ್ ಮಾಡಿದ್ರು. ಹಾಗಾಗಿ 10ಕ್ಕೂ ಹೆಚ್ಚು ಶಾಸಕರು ತಮ್ಮ ಫಾರಿನ್ ಟೂರ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸ್ಕೂಟರ್ ಮೇಲೆ ಹರಿದ ಶಾಲಾ ಬಸ್ – ಇಬ್ಬರು ಪುಟ್ಟ ಕಂದಮ್ಮಗಳು ಸಾವು
ಇನ್ನೂ ವಿದೇಶ ಪ್ರವಾಸವನ್ನ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಒಪ್ಪಿಕೊಂಡಿದ್ದು, ಮಿನಿಸ್ಟರ್ ವೆಂಕಟೇಶ್ ಅವರು ಕರೆದುಕೊಂಡು ಹೋಗ್ತಾರೆ. ಪಶುಸಂಗೋಪನಾ ಇಲಾಖೆಯಿಂದ ಅಂತೇಳಿದ್ದರು. ಜೊತೆಗೆ ಬಜೆಟ್ ಒಳಗೆ ವಾಪಸ್ ಬರುತ್ತೇವೆ ಅಂತೇಳಿದ್ರು. ಅದಾದ ಬಳಿಕ ಕೆಲವೇ ಕ್ಷಣಗಳಲ್ಲಿ `ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ನೀಡಿದ ಪುಟ್ಟರಂಗಶೆಟ್ಟಿ, ಯಾರ ದುಡ್ಡು ಅಂತಾ ಗೊತ್ತಿಲ್ಲ ಎಂದು ಉಲ್ಟಾ ಹೊಡೆದ್ದಿದ್ದರು. ಪಶುಸಂಗೋಪನಾ ಇಲಾಖೆ ಟೂರ್ ಅನ್ನೋದು ಗೊತ್ತಿಲ್ಲ. ಆದ್ರೆ ನಾನು ಪ್ರತ್ಯೇಕವಾಗಿ ಬುಕ್ ಮಾಡಿ ಅಂತೇಳಿದ್ದೀನಿ. ಸಚಿವ ವೆಂಕಟೇಶ್ ಕರೆದಿದ್ದಾರೆ, ಅದಕ್ಕೆ ಹೋಗ್ತಿದ್ದೀನಿ. ಸಿಎಂಗೆ ಏಕೆ ಗಮನಕ್ಕೆ ತರಬೇಕು, ತಂದಿಲ್ಲ ಎಂದು ಹೇಳಿದ್ದಾರೆ.

