ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದರೆ ಸಾಕು ತಗ್ಗು ಪ್ರದೇಶಗಳಿಗೆ ನೀರು ನುಗ್ಗೋದು, ಮನೆಗಳಿಗೆ ಮಳೆ ನೀರಿನೊಂದಿಗೆ ಕೊಳಚೆ ನೀರು ಸೇರಿಕೊಳ್ಳೋದು ಮಾತ್ರವಲ್ಲ ರಸ್ತೆಗಳೆಲ್ಲ ಮಿನಿ ಲೇಕ್ ಗಳಾಗಿ ಬಿಡುತ್ತವೆ. ಮಳೆ ಬಂದಾಗ ವಾಹನ ಸವಾರರು ಮಾತ್ರವಲ್ಲ ಬಸ್ ಪ್ರಯಾಣಿಕರು ಆಶ್ರಯ ಪಡೆಯೋದು ಬಸ್ ತಂಗುದಾಣಗಳಲ್ಲಿ. ಆದರೆ ಆ ತಂಗುದಾಣಗಳು ತೂತುಬಿದ್ದ ಮಡಿಕೆಯಂತಾಗಿದೆ. ನಿಮ್ಮ ಪಬ್ಲಿಕ್ ಟಿವಿ ಇತಂಹ ಬಸ್ ತಂಗುದಾಣಗಳ ರಿಯಾಲಿಟಿ ಚೆಕ್ ಮಾಡಿದೆ.
Advertisement
ಹೌದು. ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ 6 ಸಾವಿರಕ್ಕೂ ಅಧಿಕ ಬಿಎಂಟಿಸಿ ಸಂಚಾರ ಮಾಡುತ್ತೆ. ಬೆಂಗಳೂರಿನ ಮೂಲೆಮೂಲೆಗೂ ಬಿಎಂಟಿಸಿ ಸೇವೆ ನೀಡ್ತಿದೆ. ಹಾಗೆಯೇ ಬಿಬಿಎಂಪಿ ಅವರು ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಶೆಲ್ಟರ್ಸ್ ಗಳನ್ನು ನಿರ್ಮಾಣ ಮಾಡಿದೆ. ಇದಕ್ಕಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಸಹ ಮಾಡಿದೆ. ಬೆಂಗಳೂರಿನಲ್ಲಿ ಸರಿಸುಮಾರು 6 ಸಾವಿರಕ್ಕೂ ಹೆಚ್ಚು ಬಸ್ ಶೇಲ್ಟರ್ಸ್ ಗಳಿವೆ. ಈ ಬಸ್ ತಂಗುದಾಣಗಳನ್ನ ಖಾಸಗಿಯವರ ಸಹಭಾಗಿತ್ವದಲ್ಲೂ ಸಹ ಬಿಬಿಎಂಪಿ ನಿರ್ಮಾಣ ಮಾಡಿದೆ.
Advertisement
Advertisement
ಜನರ ಟ್ಯಾಕ್ಸ್ ದುಡ್ಡಿನಲ್ಲಿ ಹೀಗೆ ಬಿಬಿಎಂಪಿ ಬಸ್ ಶೆಲ್ಟರ್ ಗಳ ನಿರ್ಮಾಣವೇನೋ ಮಾಡಿದೆ. ಅದನ್ನ ನಿರ್ವಹಣೆ ಮಾಡದೇ ಈಗ ಬಸ್ ನಿಲ್ದಾಣಗಳು ಪಳೆಯುಳಿಕೆಗಳಂತೆ ಕಾಣುತ್ತಿದೆ. ಬೆಂಗಳೂರಿನ ಅದೆಷ್ಟೋ ಬಸ್ ತಂಗುದಾಣಗಳು ಪಾಳುಬಿದ್ದ ಸ್ಥಿತಿಯಲ್ಲಿದೆ. ಮಳೆ ಬಂದರೆ ಜನ ಕೂತುಕೊಳ್ಳೋದು ಇರಲಿ ನಿಂತುಕೊಳ್ಳೋದಕ್ಕೂ ಆಗೋಲ್ಲ. ಮೇಲ್ಛಾವಣಿಗಳು ತೂತು ಬಿದ್ದಿದ್ದರೆ ಕೆಲ ಕಡೆ ಮೇಲ್ಛಾವಣಿಯೇ ಇಲ್ಲ. ಇನ್ನೂ ಬಸ್ ಗಾಗಿ ಕಾಯೋ ಜನ ಕೂತುಕೊಳ್ಳೋಕೆ ಇರೋ ಚೇರ್ ಗಳು ಸಹ ಶೆಲ್ಟರ್ ಗಳಲ್ಲಿ ಇಲ್ಲ. ಆದರೆ ಬಿಬಿಎಂಪಿ ಗುತ್ತಿಗೆ ನೀಡಿರೋ ಜಾಹೀರಾತು ಫಲಕಗಳು ಮಾತ್ರ ಸೂಪರ್ ಆಗಿ ಕಾಣುತ್ತೆ.
Advertisement
ರಿಯಾಲಿಟಿ ಚೆಕ್- 1
ಒಂದಲ್ಲ ಎರಡಲ್ಲ ಮೂರಲ್ಲ, ಒಟ್ಟು 6 ಬಸ್ ಶೆಲ್ಟರ್ ಇರೋ ಸ್ಟಾಪ್ ಇದು. ಒಂದು ಕಡೆ ಶೆಲ್ಟರ್ ನ ಚೇರ್ ತುಕ್ಕು ಹಿಡಿಯುತ್ತಿದ್ದರೆ ನೆಲಹಸಿಗೆ ಕಿತ್ತು ಬಂದಿದೆ. ಬಸ್ ಬಂತು ಅಂತಾ ಹತ್ತೊಕೆ ಓಡಿದ್ರೇ ಬೀಳೋದು ಪಕ್ಕಾ. ಮುಂದೆ ಆಪೊಸಿಟ್ ಟ್ರಾಕ್‍ನಲ್ಲೂ ಮೂರು ಶೆಲ್ಟರ್ ಇದೆ ಜಾಹೀರಾತು ಫಲಕಗಳು ಸಹ ಡಿಸೈನ್ ಡಿಸೈನ್ ಆಗಿದೆ. ಜೊತೆಗೆ ಕಸದ ರಾಶಿನೂ ಸಹ ಇದೆ.
ರಿಯಾಲಿಟಿ ಚೆಕ್-2
ಅಶೋಕ ಪಿಲ್ಲರ್‍ನಿಂದ ಲಾಲ್ ಬಾಗ್ ಕಡೆ ಬರೋ ರಸ್ತೆಯಲ್ಲಿ ಒಂದೇ ಕಡೆ ಎರಡು ಬಸ್ ತಂಗುದಾಣ ಮಾಡಿದ್ದಾರೆ. ಒಂದರಲ್ಲಿ ಮೇಲ್ಛಾವಣಿ ಕಿತ್ತು ಹೋಗಿದ್ದರೆ, ಮತ್ತೊಂದರಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲ. ಮಳೆ ಬಂದು ಬಂದು ಪಾಚಿಕಟ್ಟಿದೆ ಇಲ್ಲಿನ ನಿಲ್ದಾಣ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಲೀಟರ್ ಪೆಟ್ರೋಲ್‌ಗೆ 420 ರೂ., ಡೀಸೆಲ್‌ಗೆ 400 ರೂ.
ರಿಯಾಲಿಟಿ ಚೆಕ್-3
ಸ್ಥಳ: ಬಾಳೆಮಂಡಿ ಸ್ಟಾಪ್
ಇಲ್ಲೂ ಸಹ ಇದೇ ಪರಿಸ್ಥಿತಿ ಶಾಸಕರ ಫೋಟೋ ಮಾತ್ರ ಸೂಪರ್ ಆಗಿ ಕಾಣುತ್ತೆ. ಆದರೆ ಅಲ್ಲಿ ಕೂತುಕೊಳ್ಳೋ ಚೇರ್ ಅನ್ನ ಯಾವ ಕಳ್ಳ ಯಾವಾಗ ಕದ್ದು ಹೋಗಿದ್ದಾನೋ ಗೊತ್ತಿಲ್ಲ. ಪಕ್ಕದ ಶೆಲ್ಟರ್ ನಲ್ಲಿ ಕರೆಂಟ್ ಕಟ್ ಆಗಿದ್ದು, ಅದನ್ನ ಸರಿ ಮಾಡೋ ಕೆಲಸಕ್ಕೆ ಬೆಸ್ಕಾಂ ಮುಂದಾಗಿದೆ. ಆದರೆ ನಿರ್ವಹಣೆ ಮಾತ್ರ ಶೂನ್ಯ.
ರಿಯಾಲಿಟಿ ಚೆಕ್-4
ಸ್ಥಳ: ಇಟಾ ಮಾಲ್
ಇಲ್ಲಿರೋ ಬಸ್ ನಿಲ್ದಾಣ ಅನೈತಿಕ ಚಟುವಟಿಕೆಗಳ ತಾಣದಂತೆ ಕಾಣುತ್ತೆ. ಬಸ್ ನಿಲ್ದಾಣವಿದ್ದರೂ ಜನ ರಸ್ತೆಯಲ್ಲೇ ಬಸ್‍ಗೆ ಕಾಯುತ್ತಾರೆ. ಅಲ್ಲಿನ ಸ್ಥಿತಿ ಆ ರೀತಿ ಇದೆ. ಇದನ್ನೂ ಓದಿ: 75 ಲಕ್ಷ ಲಂಚ ಕೊಟ್ಟಿದ್ದೇನೆ, ಬ್ಲೂಟೂತ್‍ನಲ್ಲಿ ಪರೀಕ್ಷೆ ಬರೆದಿದ್ದೇನೆ – ತನಿಖೆಗೆ ಡಿಜಿಗೆ ಪತ್ರ ಬರೆದ ಅಭ್ಯರ್ಥಿ
ರಿಯಾಲಿಟಿ ಚೆಕ್-5
ಸ್ಥಳ: ಹೆಬ್ಬಾಳ ಕೆಂಪಾಪುರ
ಇಲ್ಲಿ ಬಸ್ ಬರೋದೇ ಅಪರೂಪ. ಯಾಕಂದರೆ ಬಸ್ ಶೆಲ್ಟರ್ ಇರೋದು ಸರ್ವಿಸ್ ರೋಡ್ ನಲ್ಲಿ, ಅದರೂ ಬಿಬಿಎಂಪಿ ಎರಡೆರಡು ಶೆಲ್ಟರ್ ನಿರ್ಮಾಣ ಮಾಡಿದೆ. ಒಂದು ಶೆಲ್ಟರ್ ಅಂತೂ ಪಕ್ಕಾ ಪುರಾತನ ಕಾಲದ ಪಳೆಯುಳಿಕೆಯಂತೆಯೇ ಇದೆ.
ರಿಯಾಲಿಟಿ ಚೆಕ್-6
ಸ್ಥಳ: ಚಾಮರಾಜಪೇಟೆ ರಾಯನ್ ಸರ್ಕಲ್
ಇದು ಬಸ್ ನಿಲ್ದಾಣವೋ ಕೊಳಚೆ ಗುಂಡಿಯೋ ಗೊತ್ತಿಲ್ಲ. ಅಲ್ಲಿ ಕೂರಲು ಚೇರ್ ಇದೆ. ಆದರೆ ಟಾಪ್ ಮಾತ್ರ ಮಾಯವಾಗಿದೆ. ಮೂಗು ಮುಚ್ಚಿಕೊಂಡೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ. ಇದೆಲ್ಲ ಜೆಸ್ಟ್ ಸ್ಯಾಂಪಲ್ಸ್ ಅಷ್ಟೇ, ಕೋಟ್ಯಂತರ ರೂಪಾಯಿ ಜನರ ದುಡ್ಡು ಹೇಗೆ ಬಸ್ ನಿಲ್ದಾಣ ಹಸಿರಿನಲ್ಲಿ ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯುತ್ತಿದೆ.