ಎಲ್ಲರಿಗೂ ಎಐ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಅನ್ನೋ ಆಲೋಚನೆ ಬೇಡ: ಹೆಚ್‌.ಆರ್.ರಂಗನಾಥ್‌

Public TV
1 Min Read
h.r.ranganath vidhya peeta

 – ಮಕ್ಕಳು ಭವಿಷ್ಯವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ

ಬೆಂಗಳೂರು: ಎಲ್ಲರಿಗೂ ಎಐ (ಕೃತಕ ಬುದ್ಧಿಮತ್ತೆ), ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಅನ್ನೋ ಆಲೋಚನೆ ಬೇಡ. ಮಕ್ಕಳು ಭವಿಷ್ಯವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು ಎಂದು ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್‌.ಆರ್.‌ ರಂಗನಾಥ್‌ (HR Ranganath) ಸಲಹೆ ನೀಡಿದರು.

public tv vidhya peeta education expo 3

Ad6 ಸಹಯೋಗದಲ್ಲಿ ‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್‌ ಟಿವಿ (Public TV) ಆಯೋಜಿಸಿರುವ ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ‌’ವಿದ್ಯಾಪೀಠ’ (Vidhaya Peeta Education Expo) 6ನೇ ಆವೃತ್ತಿ ಉದ್ಘಾಟನಾ ಸಮಾರಂಭದಲ್ಲಿ ಹೆಚ್‌.ಆರ್‌. ರಂಗನಾಥ್‌ ಅವರು ಮಾತನಾಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ಚಾಲನೆ

vidhya peeta education

ಕೃತಕ ಬುದ್ಧಿಮತ್ತೆ ಹೊರಹೊಮ್ಮುವಿಕೆ ಸಂದರ್ಭದಲ್ಲಿ ಶಿಕ್ಷಣದ ಮಾರ್ಗ ಮತ್ತು ಆಯ್ಕೆಗಳು ಮುಂದೆ ಸಾಗಿದಂತೆ ಜಟಿಲವಾಗುತ್ತಿದೆ. ಶಿಕ್ಷಣ ಕ್ಷೇತ್ರ ಮತ್ತು ಉದ್ಯೋಗ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯಿಂದ ಅನುಕೂಲ ಹಾಗೂ ಅನಾನುಕೂಲ ಎರಡೂ ಇದೆ. ಹೀಗಾಗಿ ಮಕ್ಕಳು ಭವಿಷ್ಯವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಲ್ಲರಿಗೂ ಎಐ (ಕೃತಕ ಬುದ್ಧಿಮತ್ತೆ ಕ್ಷೇತ್ರ), ಎಲ್ಲರಿಗೂ ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಎನ್ನುವ ಆಲೋಚನೆ ಬೇಡ. ಸಿವಿಲ್‌, ಮೆಕ್ಯಾನಿಕಲ್‌ ಸೇರಿದಂತೆ ನಾಗರಿಕ ಸೇವಾ ಉದ್ಯೋಗಗಳು ಈ ಸಮಾಜಕ್ಕೆ ಮುಖ್ಯ. ಈ ಕ್ಷೇತ್ರಗಳಿಗೆ ಸಾವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ಇಂದು ಚಾಲನೆ

ಕಂಪ್ಯೂಟರ್‌, ಎಲೆಕ್ಟ್ರಾನಿಕ್ಸ್‌ ಒಳ್ಳೆಯದು ಅಥವಾ ಕೆಟ್ಟದ್ದು ಅಂತ ನಾನು ವಿಮರ್ಶೆ ಮಾಡುತ್ತಿಲ್ಲ. ಮರ ಮತ್ತು ಬಳ್ಳಿ ಎಂಬಂತೆ ಒಂದಕ್ಕೊಂದು ಸಂಬಂಧ ಇರುತ್ತದೆ. ಮಕ್ಕಳು ಆಯ್ಕೆಗಳನ್ನು ಎಚ್ಚರಿಕೆಯಿಂದ ಮಾಡಿಕೊಳ್ಳಿ ಎಂದು ತಿಳಿಸಿದರು.

ಈ ಬಾರಿಯ ವಿದ್ಯಾಪೀಠ ಕಳೆದ ಬಾರಿಗಿಂತ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸಂಸ್ಥೆಗಳು ಹೆಚ್ಚಾಗಿ ಭಾಗವಹಿಸಿವೆ. ಎಲ್ಲರಿಗೂ ಶುಭವಾಗಲಿ ಎಂದು ಶೈಕ್ಷಣಿಕ ಮೇಳಕ್ಕೆ ಶುಭ ಹಾರೈಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ, On Spot ಗಿಫ್ಟ್ ಪಡ್ಕೊಳ್ಳಿ..!

Share This Article