ಬೆಂಗಳೂರು: ಎಸ್‍ಎಸ್‍ಎಲ್‍ಸಿ, ಪಿಯುಸಿ ನಂತರ ಮುಂದೇನು? ಯಾವ ಕಾಲೇಜಿನಲ್ಲಿ ಯಾವೆಲ್ಲ ಕೋರ್ಸ್ ಗಳಿವೆ? ಈಗಿನ ಎಜ್ಯುಕೇಶನ್ ಟ್ರೆಂಡ್ ಏನು? ಇತ್ಯಾದಿ ಪ್ರಶ್ನೆ, ಗೊಂದಲ ನಿಮ್ಮಲ್ಲಿದ್ಯಾ? ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಎಲ್ಲ ಗೊಂದಲ, ಪ್ರಶ್ನೆಗಳಿಗೆ ಪಬ್ಲಿಕ್ ಟಿವಿಯ ವಿದ್ಯಾಪೀಠದಲ್ಲಿ ಪರಿಹಾರ ಸಿಗಲಿದೆ.
ಹೌದು. ಪಬ್ಲಿಕ್ ಟಿವಿ ಆಯೋಜಿಸುತ್ತಿರುವ ವಿದ್ಯಾಪೀಠ ಕಾರ್ಯಕ್ರಮ ಯಶಸ್ವಿ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ಕಳೆದ ಬಾರಿ ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಪ್ರತಿಷ್ಠಿತ ಕಾಲೇಜುಗಳಿಂದ ಕೋರ್ಸ್‍ಗಳ ಬಗ್ಗೆ ಮಾರ್ಗದರ್ಶನವನ್ನು ಪಡೆದಿದ್ದರು. ಈ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಿದ್ಯಾಪೀಠ ಕಾರ್ಯಕ್ರಮ ಈ ವರ್ಷವೂ ಎಪ್ರಿಲ್‍ನಲ್ಲಿ ನಡೆಯಲಿದೆ.
Advertisement
Advertisement
ಏಪ್ರಿಲ್ 14, 15 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರ್‍ನಲ್ಲಿ ವಿದ್ಯಾಪೀಠ ಕಾರ್ಯಕ್ರಮ ಆಯೋಜನೆಯಾಗಿದೆ. ಬೆಳಗ್ಗೆ 9.30ರಿಂದ ಆರಂಭಗೊಂಡು ಸಂಜೆ 6 ಗಂಟೆಯವರೆಗೂ ಈ ಕಾರ್ಯಕ್ರಮ ನಡೆಯಲಿದೆ. ವಿವಿಧ ಕೋರ್ಸ್ ಬಗ್ಗೆ ಅತಿಥಿಗಳ ಉಪನ್ಯಾಸ ಅಲ್ಲದೇ ಶಿಕ್ಷಣ ಸಂಸ್ಥೆಗಳ ಮಾಹಿತಿ ಕೇಂದ್ರಗಳು ಇಲ್ಲಿ ಇರಲಿವೆ. ಹೀಗಾಗಿ ನಿಮಗೆ ಯಾವುದೇ ಕೋರ್ಸ್ ಬಗ್ಗೆ ಸಂದೇಹ ಇದ್ದರೆ ಅಲ್ಲೇ ಪರಿಹಾರ ಮಾಡಿಕೊಳ್ಳಬಹುದು.
Advertisement
ಅನಿಮೇಶನ್,ಮೀಡಿಯಾ, ಗೇಮಿಂಗ್, ಕೋಚಿಂಗ್ ಇನ್ಸಿಟ್ಯೂಷನ್, ಕಾಮರ್ಸ್ ಮತ್ತು ಬ್ಯಾಂಕಿಂಗ್, ಎಂಜಿನಿಯರಿಂಗ್,ಮೆಡಿಕಲ್, ಫ್ಯಾಶನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ಮಾಸ್ ಕಮ್ಯೂನಿಕೇಶನ್, ಎಂಬಿಎ ಅಷ್ಟೇ ಅಲ್ಲದೆ ವಿದೇಶಿ ಶಿಕ್ಷಣ ಸಂಸ್ಥೆಗಳ ಬಗ್ಗೆಯೂ ಇಲ್ಲಿ ಮಾಹಿತಿ ಸಿಗಲಿದೆ.
Advertisement
ಕರ್ನಾಟಕ ಸಿಇಟಿ, ನೀಟ್ ಪರೀಕ್ಷೆ, ಕಾಮೆಡ್ ಕೆ ಕೌನ್ಸಿಲಿಂಗ್ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಇದರಲ್ಲಿ ಭಾಗವವಹಿಸುತ್ತಿದ್ದು, ವಿವಿಧ ಸ್ಕಾಲರ್ ಶಿಪ್ ಬಗ್ಗೆಯೂ ಮಾಹಿತಿ ಸಿಗಲಿದೆ.
ಉಚಿತ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಬಹುದು. ಇನ್ಯಾಕೆ ತಡ ಈಗಲೇ ಏಪ್ರಿಲ್ 14, 15 ಶನಿವಾರ, ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರ್ ನಲ್ಲಿ ನಡೆಯಲಿರುವ ವಿದ್ಯಾಪೀಠ ಕಾರ್ಯಕ್ರಮಕ್ಕೆ ಬನ್ನಿ ಉಜ್ವಲ ಭವಿಷ್ಯದ ಕನಸನ್ನ ನನಸು ಮಾಡಿಕೊಳ್ಳಿ.