ಚಿಕ್ಕೋಡಿ: ಪಬ್ಲಿಕ್ ಟಿವಿಯ (Public Tv) ‘ಬೆಳಕು’ (Belaku) ಕಾರ್ಯಕ್ರಮದ ಪ್ರೇರಣೆಯಿಂದ ಬೆನ್ನುಹುರಿ ಇಲ್ಲದ ಇಬ್ಬರು ವಿಕಲಚೇತನರಿಗೆ (Disabled Persons) ಬ್ಯಾಟರಿ ಚಾಲಿತ ಗಾಲಿ ಕುರ್ಚಿ (Wheelchair) ಬೈಕ್‌ಗಳನ್ನು ಅಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi) ನೀಡಿದ್ದಾರೆ.
ದೀಪಾವಳಿ (Deepavali) ಹಬ್ಬದ ನಿಮಿತ್ತ ವಿಶೇಷ ಚೇತನರಿಗೆ ವಿಶೇಷ ಕೊಡುಗೆ ನೀಡಿದ ಶಾಸಕ ಸವದಿ, ನಡೆಯಲಾಗದೇ ಹಾಸಿಗೆ ಮೇಲಿದ್ದ ಇಬ್ಬರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ಕೊಡುಗೆಯಾಗಿ ನೀಡಿದ್ದಾರೆ. ಅಥಣಿ ಪಟ್ಟಣದ ಅವರ ಸ್ವಗೃಹದಲ್ಲಿ ಹಬ್ಬದ ನಿಮಿತ್ತ ನಿಯೋ ಮೋಶನ್ ಕಂಪನಿಯ 1,05,000 ರೂ. ಬೆಲೆಯ 2 ಬ್ಯಾಟರಿ ಚಾಲಿತ ವಾಹನ ಕೊಡುಗೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಬಲಿಪಾಡ್ಯಮಿ; ಮಂತ್ರಾಲಯ ಮಠದಲ್ಲಿ ಶ್ರೀಗಳಿಂದ ವಿಶೇಷ ಮಹಾಭಿಷೇಕ
Advertisement
Advertisement
ವಿದ್ಯುತ್ ಕಂಬದಿಂದ ಬಿದ್ದು ಬೆನ್ನುಹುರಿ ಅಪಘಾತಕ್ಕೆ ಒಳಗಾಗಿದ್ದ ಬಡಚಿ ಗ್ರಾಮದ ಬಸಪ್ಪ ಪೂಜಾರಿ ಹಾಗೂ ಹುಟ್ಟಿನಿಂದ ಪೋಲಿಯೋ ಪೀಡಿತ ದೇಸಾರಟ್ಟಿ ಗ್ರಾಮದ ಸಚ್ಚಿನ ಗಾಂವಕರ ಎಂಬವರಿಗೆ ಸವದಿ ಗಾಲಿ ಕುರ್ಚಿ ಹಸ್ತಾಂತರ ಮಾಡಿದರು. ಕಳೆದ ವರ್ಷ ದೀಪಾವಳಿ ಹಬ್ಬದ ನಿಮಿತ್ತ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಡಿ ಬೆನ್ನುಹುರಿ ಅಪಘಾತಕ್ಕೆ ಒಳಗಾಗಿದ್ದ ಹನುಮಂತ ಕುರುಬರ ಎಂಬ ಯುವಕನಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಯನ್ನು ನೀಡಿದ್ದರು. ಇದನ್ನೂ ಓದಿ: ವಿದ್ಯುತ್ ಕಳ್ಳತನ ಆರೋಪ – ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲು
Advertisement
Advertisement
ಈ ಬಾರಿ ಬೆಳಕು ಕಾರ್ಯಕ್ರಮವನ್ನು ಪ್ರೇರಣೆಯಾಗಿಸಿಕೊಂಡು ಮತ್ತಿಬ್ಬರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ಬೈಕ್ ನೀಡಿದ್ದಾರೆ. ವಿಶೇಷ ಚೇತನರಿಗೆ ಬೈಕ್ ನೀಡಿದ ಬಳಿಕ ಪಬ್ಲಿಕ್ ಟಿವಿ ಕಾರ್ಯವನ್ನು ಶಾಸಕ ಲಕ್ಷ್ಮಣ ಸವದಿ ಶ್ಲಾಘಿಸಿದ್ದು, ಅನೇಕ ನಿರ್ಗತಿಕರಿಗೆ ಬಡವರಿಗೆ ಪಬ್ಲಿಕ್ ಟಿವಿಯ ‘ಬೆಳಕು’ ಕಾರ್ಯಕ್ರಮ ನವಚೈತನ್ಯ ನೀಡುವ ಕಾರ್ಯ ಮಾಡುತ್ತಿದೆ ಎಂದರು. ಇದನ್ನೂ ಓದಿ: ಬಿಜೆಪಿಗೆ ವಿಜಯೇಂದ್ರ ಹಿಟ್ ಮ್ಯಾನ್: ಶ್ರೀರಾಮುಲು