ಬೆಂಗಳೂರು: ನೀವು ಈ ವರ್ಷ ಸೆಕೆಂಡ್ ಪಿಯುಸಿ (Second PUC) ಪಾಸ್ ಆಗಿದ್ದೀರಾ..? ಮುಂದೇನು ಮಾಡೋದು ಅನ್ನೋ ಗೊಂದಲದಲ್ಲಿದ್ದೀರಾ..? ನಿಮ್ಮ ಮುಂದಿನ ಕಲಿಕೆ ಹೇಗೆ..? ಯಾವ ಕಾಲೇಜಿಗೆ ಸೇರಿದರೆ ಒಳ್ಳೆಯದು ಅನ್ನೋ ಯೋಚನೆ ಮಾಡ್ತಿದ್ದರೆ ನಿಮ್ಮ ಪೋಷಕರು, ಫ್ರೆಂಡ್ಸ್ ಅಥವಾ ಆಪ್ತರ ಜೊತೆ ಪಬ್ಲಿಕ್ ಟಿವಿ ಪ್ರಸ್ತುತಪಡಿಸುವ ವಿದ್ಯಾಪೀಠ (Vidyapeeta) ಶೈಕ್ಷಣಿಕ ಮೇಳಕ್ಕೆ ಬನ್ನಿ. ಹಾಗೆ ಬರುವಾಗ ನಿಮ್ಮ ಪಿಯುಸಿ ಅಂಕ ಪಟ್ಟಿಯನ್ನೂ ತೆಗೆದುಕೊಂಡು ಬನ್ನಿ.
Ad6 ಸಹಯೋಗದಲ್ಲಿ ಪಬ್ಲಿಕ್ ಟಿವಿ (PUBLiC TV) ಯು ‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಘೋಷವಾಕ್ಯದೊಂದಿಗೆ ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ‘ವಿದ್ಯಾಪೀಠ’ವನ್ನು ಆಯೋಜಿಸಿದೆ. ಜೂನ್ 3 ಮತ್ತು 4ರಂದು ಬೆಂಗಳೂರು ಅರಮನೆ ಮೈದಾನ (Palace Ground) ದ ಗೇಟ್ ನಂಬರ್ 4ರ ಗಾಯತ್ರಿ ವಿಹಾರದಲ್ಲಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ವಿದ್ಯಾಪೀಠ ಶೈಕ್ಷಣಿಕ ಮೇಳ ನಡೆಯಲಿದೆ. ಇದು ವಿದ್ಯಾ ಪೀಠದ 6ನೇ ಆವೃತ್ತಿ ಎನ್ನುವುದೂ ವಿಶೇಷ.
Advertisement
Advertisement
ಗಿಫ್ಟ್ ತಗೊಳ್ಳಿ ಗಿಫ್ಟ್..!: 2023ರಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದರೆ ನಿಮ್ಮ ಅಂಕಪಟ್ಟಿ ಅಥವಾ ನಕಲು ಪ್ರತಿ (Xerox) ತೋರಿಸಿ ನೀವು ಗಿಫ್ಟ್ ಪಡೆದುಕೊಳ್ಳಬಹುದು. ಆದರೆ ನೀವು ಪಡೆದ ಅಂಕ 60% ಅಥವಾ ಅದಕ್ಕಿಂತ ಮೇಲಿರಬೇಕು.
Advertisement
ಮಾನದಂಡವೇನು?: ಸೆಕೆಂಡ್ ಪಿಯುಸಿಯಲ್ಲಿ 60-80% ಪಡೆದವರು, 80-95%, 95-100% ಪಡೆದವರು ಎಂದು ಗುರುತಿಸಿ ನಿಮ್ಮ ಅಂಕಗಳ ಆಧಾರದಲ್ಲಿ On Spot ಗಿಫ್ಟ್ ನೀಡಲಾಗುವುದು. ಇದನ್ನೂ ಓದಿ: ಪಬ್ಲಿಕ್ ಟಿವಿಯ ‘ವಿದ್ಯಾಪೀಠ’ – ಜೂನ್ 3, 4ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ
Advertisement
ಶೈಕ್ಷಣಿಕ ಮೇಳಕ್ಕೆ ಬರುವ ಪ್ರತಿಯೊಬ್ಬರೂ ನಗರದ ಅರಮನೆ ಮೈದಾನದ ಗೇಟ್ ಬಳಿ ನೋಂದಣಿ ಕೇಂದ್ರ (Registration Counter) ದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರತಿ ಗಂಟೆಗೊಮ್ಮೆ ನಡೆಯುವ ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಗುವುದು.
ಶಿಕ್ಷಣದ ಜೊತೆ ಆಟವೂ ಇದೆ..!: ಶೈಕ್ಷಣಿಕ ಮೇಳ ನಡೆಯುವ ಅರಮನೆ ಮೈದಾನ ಗಾಯತ್ರಿ ವಿಹಾರದ ಆವರಣದಲ್ಲಿಯೇ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನಿಧಾನಗತಿಯ ಸೈಕಲ್ ಪಂದ್ಯ (Slow Cycle Race), ವಿಷಯ ಆರಿಸಿಕೊಳ್ಳಿ, ಮಾತನಾಡಿ (Pick & Speak) ಮೊದಲಾದ ಆಕರ್ಷಕ ಸ್ಪರ್ಧೆಗಳು ವಿದ್ಯಾಪೀಠದಲ್ಲಿ ನಡೆಯಲಿದೆ.
15 ಸೈಕಲ್, 4 ಲ್ಯಾಪ್‍ಟಾಪ್ ಬಹುಮಾನ!: ಸ್ಲೋ ಸೈಕಲ್ ರೇಸ್‍ನಲ್ಲಿ ಭಾಗಿಯಾಗಿ ಗೆದ್ದವರು ಸೈಕಲ್‍ಗಳನ್ನು ಬಹುಮಾನವಾಗಿ ಪಡೆಯಬಹುದು. ಪಿಕ್ & ಸ್ಪೀಕ್‍ನಲ್ಲಿ ವಿಜೇತರಾದವರಿಗೆ ಲ್ಯಾಪ್‍ಟಾಪ್‍ಗಳು ಬಹುಮಾನವಾಗಿ ಸಿಗಲಿದೆ. 2 ದಿನಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ 15 ಸೈಕಲ್‍ಗಳು ಹಾಗೂ 4 ಲ್ಯಾಪ್‍ಟಾಪ್‍ಗಳನ್ನು ಪ್ರಶಸ್ತಿ ರೂಪದಲ್ಲಿ ವಿಜೇತರಿಗೆ ನೀಡಲಾಗುವುದು.
ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ವಿದ್ಯಾಪೀಠಕ್ಕೆ ನೀವೆಲ್ಲರೂ ಆಗಮಿಸಿ, ಮುಂದಿನ ಶೈಕ್ಷಣಿಕ ಜೀವನದ ಹಾದಿಯ ಬಗ್ಗೆ ತಜ್ಞರಿಂದ ಅಪಾರ ಅನುಭವ ಪಡೆಯಿರಿ. ನಿಮಗಾಗಿ ಆಯೋಜಿಸುತ್ತಿರುವ ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ನಿಮ್ಮಲ್ಲಿರುವ ಪಠ್ಯೇತರ ಚಟುವಟಿಕೆಗಳ ಆಸಕ್ತಿಯನ್ನು ಎಲ್ಲರ ಮುಂದಿರಿಸಿ ಎಂದು ಪಬ್ಲಿಕ್ ಟಿವಿಯು ನಿಮ್ಮನ್ನು ಈ ಶೈಕ್ಷಣಿಕ ಮೇಳಕ್ಕೆ ಆಹ್ವಾನಿಸುತ್ತಿದೆ. ಮರೆಯಬೇಡಿ, ಇದೇ ಜೂನ್ 3 ಮತ್ತು 4ರಂದು ಬೆಳಗ್ಗೆ 10.00ರಿಂದ ಸಂಜೆ 7.00 ಗಂಟೆಯವರೆಗೆ, ಬೆಂಗಳೂರು ಅರಮನೆ ಮೈದಾನದ ಗೇಟ್ ನಂಬರ್ 4ರ ಗಾಯತ್ರಿ ವಿಹಾರದಲ್ಲಿ ಭೇಟಿಯಾಗೋಣ.