ಬೆಂಗಳೂರು: ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕರು ತಲೆ ತಗ್ಗಿಸು ಕೆಲಸ ಮಾಡಿದ್ದ ಡಯಟ್ ಪ್ರಾಂಶುಪಾಲ ಎಸ್.ಎಂ.ರಮೇಶ್ ನನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತು ಮಾಡಿದೆ.
ತನ್ನ ಕಾಮಪುರಾಣದ ವಿಡಿಯೋವನ್ನು ಶಿಕ್ಷಕರ ವಾಟ್ಸಾಪ್ ಗ್ರೂಪ್ ಹಾಕಿ ವಿಕೃತಿ ಮೆರೆದಿದ್ದ ಡಯಟ್ ಪ್ರಾಂಶುಪಾಲ ರಮೇಶ್ ಕುರಿತು ನಿಮ್ಮ ಪಬ್ಲಿಕ್ ಟಿವಿ ನಿನ್ನೆ ಸುದ್ದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರದ ನಂತರ ಎಚ್ಚೆತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ರಮೇಶ್‍ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಆದೇಶದ ಪ್ರತಿಯಲ್ಲಿ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿದ್ದನ್ನು ಉಲ್ಲೇಖ ಮಾಡಿದೆ. ಇದನ್ನೂ ಓದಿ: ಬೆಂಗ್ಳೂರು ಪ್ರಾಂಶುಪಾಲನ ಕಾಮ ಪುರಾಣ – ತನ್ನದೇ ಸೆಕ್ಸ್ ವಿಡಿಯೋವನ್ನು ವಾಟ್ಸಪ್ ಗ್ರೂಪಿಗೆ ಹಾಕ್ದ!
ಏನಿದು ಪ್ರಕರಣ?
ಬೆಂಗಳೂರು ಉತ್ತರ ವಿಭಾಗದ ಡಯಟ್ ಪ್ರಾಂಶುಪಾಲ ರಮೇಶ್ ಶಿಕ್ಷಕರ ದಿನಾಚರಣೆಯಂದು ತನ್ನದೇ ಸೆಕ್ಸ್ ವಿಡಿಯೋವನ್ನು ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದನು. ಕ್ಯಾಮೆರಾ ಮುಂದೆ ರಮೇಶ್ ಸಂಪೂರ್ಣ ಬೆತ್ತಲಾಗಿ ವಿಡಿಯೋ ಮಾಡಿ ಅದನ್ನು ಗ್ರೂಪಿನಲ್ಲಿ ಹಾಕಿದ್ದನು. ಈ ವಿಡಿಯೋ ನೋಡಿ ಗ್ರೂಪಿನಲ್ಲಿದ್ದ ಮಹಿಳೆಯರು ಎಕ್ಸಿಟ್ ಆಗಿದ್ದರು.
ಇಲಾಖೆಯಲ್ಲಿ ಯಾವುದೇ ಕೆಲಸ ಆಗಬೇಕಾದರೆ ಮಹಿಳೆಯರು ಇವನ ಜೊತೆ ಮಲಗಬೇಕು. ಅಲ್ಲದೇ ರಮೇಶ್‍ಗೆ ಅಧಿಕಾರಿಗಳ ಬೆಂಬಲವಿದ್ದು, ಶಿಕ್ಷಣ ಇಲಾಖೆಯಲ್ಲಿ ಈತನ ದರ್ಬಾರ್ ನಡೆಯುತ್ತಿತ್ತು. ರಮೇಶ್ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿಗೆ ಟಾರ್ಚರ್ ನೀಡುತ್ತಾನೆ ಎನ್ನುವ ಆರೋಪ ಈಗ ಕೇಳಿ ಬಂದಿತ್ತು. ಅಲ್ಲದೇ ತನ್ನ ಸೆಕ್ಸ್ ವಿಡಿಯೋವನ್ನು ಗ್ರೂಪಿನಲ್ಲಿ ಹಾಕಿದ್ದಕ್ಕೆ ಸದಸ್ಯರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.
https://www.youtube.com/watch?v=ywnBhZyn8N8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv