ಬೆಂಗಳೂರು: ಕಳೆದ 15 ದಿನಗಳಿಂದ ಬೆಂಗಳೂರು (Bengaluru) ದಕ್ಷಿಣ ಭಾಗದಲ್ಲಿ ಬಂದ್ ಆಗಿದ್ದ, 10ಕ್ಕೂ ಹೆಚ್ಚಿನ ಇಂದಿರಾ ಕ್ಯಾಂಟೀನ್‌ಗಳು (Indira Canteen) ಮತ್ತೆ ಓಪನ್ ಆಗಿವೆ.
ಈ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆ ಟೆಂಡರ್ ಪಡೆದಿದ್ದ, ಶೆಫ್ ಟೆಕ್ ಸಂಸ್ಥೆಗೆ ಬಿಬಿಎಂಪಿಯಿಂದ ಬಾಕಿ ಹಣ ಬಿಡುಗಡೆಯಾಗಿಲ್ಲ. ಜೊತೆಗೆ ನೀರು, ವಿದ್ಯುತ್ ಬಿಲ್ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಕ್ಯಾಂಟೀನ್‌ಗಳು ಬಂದ್ ಆಗಿದ್ದವು. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲೇ ಇಂದಿರಾ ಕ್ಯಾಂಟೀನ್ ಬಂದ್ – ಬೆಂಗಳೂರಲ್ಲಿ 15ಕ್ಕೂ ಹೆಚ್ಚು ಕ್ಯಾಂಟೀನ್‌ಗಳಿಗೆ ಬೀಗ
Advertisement
Advertisement
ಈ ಬಗ್ಗೆ ‘ಪಬ್ಲಿಕ್ ಟಿವಿ’ ಕಳೆದ ಮೂರು ದಿನದ ಹಿಂದೆ ಸವಿಸ್ತಾರ ಸುದ್ದಿ ಪ್ರಸಾರ ಮಾಡಿತ್ತು. ವರದಿ ಬಳಿಕ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದು, ಕ್ಯಾಂಟೀನ್‌ಗಳನ್ನ ಪುನರಾರಂಭ ಮಾಡಲಾಗಿದೆ.
Advertisement
ಜಯನಗರ 153 ರ ವಾರ್ಡ್ ಸೇರಿದಂತೆ ಬಸವನಗುಡಿ, ವಿವಿ ಪುರಂ, ಆಡುಗೋಡಿ, ಪದ್ಮನಾಭನಗರ ಸೇರಿದಂತೆ 10 ಇಂದಿರಾ ಕ್ಯಾಂಟೀನ್‌ಗಳು ತೆರೆದಿವೆ. ನಿಮಾನ್ಸ್ ಆಸ್ಪತ್ರೆ ಬಳಿಯ ಕ್ಯಾಂಟೀನ್ ಒಂದನ್ನ ಹೊರತುಪಡಿಸಿ ಉಳಿದೆಲ್ಲ ಕಡೆ ಓಪನ್ ಆಗಿವೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನ ಶಿಕಾರಿ ಮಾಡಿ, ಒಬ್ಬ ಮುಖಂಡ ಕನಿಷ್ಠ 10 ಮಂದಿಯನ್ನ ಪಕ್ಷಕ್ಕೆ ಕರೆತನ್ನಿ: ಡಿಕೆಶಿ
Advertisement
ರಾಹುಲ್ ಗಾಂಧಿ ಉದ್ಘಾಟನೆ ಮಾಡಿದ್ದ ಜಯನಗರ 153 ವಾರ್ಡ್ ಕ್ಯಾಂಟೀನ್ ಕೂಡ ಬಂದ್ ಆಗಿತ್ತು. ಸದ್ಯ ನಿನ್ನೆಯಿಂದ ಕ್ಯಾಂಟೀನ್ ತೆರೆದಿದೆ. ಕೆಲವರಿಗೆ ಕ್ಯಾಂಟೀನ್ ಓಪನ್ ಆಗಿರುವ ಬಗ್ಗೆ ಮಾಹಿತಿ ಇಲ್ಲದ ಹಿನ್ನೆಲೆ ಕಡಿಮೆ ಸಂಖ್ಯೆಯಲ್ಲಿ ಜನ ಊಟಕ್ಕೆ ಬರ್ತಿದ್ದಾರೆ.