ರಾಮನಗರ: ಜೂನಿಯರ್ ವಾರ್ಡನ್ ಆಗಿ 250 ಕೋಟಿ ರೂ. ಮೀರಿದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದ ಜೂನಿಯರ್ ವಾರ್ಡನ್ ಈಗ ಅಮಾನತು ಗೊಂಡಿದ್ದಾನೆ.
ಕನಕಪುರ ತಾಲೂಕಿನ ಹುಣಸನಹಳ್ಳಿ ಸರ್ಕಾರಿ ಹಾಸ್ಟೆಲ್ ವಾರ್ಡನ್ ಬಿ.ನಟರಾಜ್‍ನನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಆಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ನಟರಾಜ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು. ಈ ಸುದ್ದಿ ಬಳಿಕ ಎಚ್ಚೆತ್ತ ಇಲಾಖೆ ಈಗ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಕೆಲಸ ಜ್ಯೂ. ವಾರ್ಡನ್ ಆದ್ರೆ 250 ಕೋಟಿ ರೂ. ಆಸ್ತಿ!
Advertisement
Advertisement
1995 ರಲ್ಲಿ ನಟರಾಜ್ ಚನ್ನಪಟ್ಟಣ ತಾಲೂಕಿನ ವಿದ್ಯಾರ್ಥಿ ನಿಲಯದಲ್ಲಿ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡಿದ್ದಾಗ ಈತನಿಗೆ ಮಾಸಿಕ ವೇತನ 700 ರೂ. ಇತ್ತು. ಪಿತ್ರಾರ್ಜಿತವಾಗಿ ಕನಕಪುರ ತಾಲೂಕಿನ ಏರಂಗೆರೆ ಗ್ರಾಮದಲ್ಲಿ ಸರ್ವೇ ನಂಬರ್ 80 ರಲ್ಲಿ 4 ಎಕರೆ ಜಮೀನಿತ್ತು. ಇದೀಗ 250 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ್ದಾನೆ.
Advertisement
ಈ ಬಗ್ಗೆ ಕನಕಪುರ ಸಿವಿಲ್ ನ್ಯಾಯಾಲಯ ರಾಮನಗರ ಎಸಿಬಿಗೆ ತನಿಖೆ ನಡೆಸುವಂತೆ ಸೂಚಿಸಿದೆ. ರಾಮನಗರ ಎಸಿಬಿ ಯಿಂದ ನಟರಾಜ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಇದೀಗ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ವಿಕಾಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಎಸಿಬಿಯಿಂದ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
Advertisement
ಬಿ.ನಟರಾಜ್ ಆಸ್ತಿಯ ವಿವರ:
* ಕನಕಪುರ ತಾಲೂಕಿನ ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದ ಎಡಮಡು ಗ್ರಾಮದ ವಿವಿದ ಸರ್ವೇ ನಂಬರ್‍ನಲ್ಲಿ 18 ಎಕರೆ
* ಕನಕಪುರ ತಾಲೂಕಿನ ಏರಂಗೆರೆಯ ವಿವಿಧ ಸರ್ವೆ ನಂಬರ್‍ಗಳಲ್ಲಿ 28 ಎಕರೆ
* ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಹನೂರು ಬಳಿಯ ಮಣಹಳ್ಳಿ 15.5 ಎಕರೆ
* ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದ ಏಡುಮಡುನಲ್ಲಿ ಇಟ್ಟಿಗೆ ಫ್ಯಾಕ್ಟರಿ, ಜ್ಯೂಸ್ ಫ್ಯಾಕ್ಟರಿ
* ಜೆ.ಪಿ ನಗರ 17ನೇ ಅಡ್ಡರಸ್ತೆಯಲ್ಲಿನ ಬಿಲ್ಡಿಂಗ್
* ಬೆಂಗಳೂರಿನ ಜೆಪಿ ನಗರದ 6ನೇ ಹಂತದಲ್ಲಿ ಮೂರು ಹಂತಸ್ಥಿನ ಮನೆ
* ಕನಕಪುರ ನಗರದ ಬೃಂದಾವನ ನಗರದಲ್ಲಿ ಮಹಡಿ ಮನೆ
* ಸ್ಕಾರ್ಪಿಯೋ, ಟಾಟಾ ಸುಮೋ ಕಾರು, ಎರಡು ಬೈಕ್
https://www.youtube.com/watch?v=dVtkCf-DdvM
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv