– ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಬೆಂಗಳೂರು: ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿರುವ ಮಾಜಿ ವಿಂಗ್ ಕಮಾಂಡರ್ ಅಮರ್ಜಿತ್ ಸಿಂಗ್ ಮೇಲೆ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.
ಮಂಗಳವಾರ ಬೆಳಗ್ಗೆ ಅಮರ್ಜಿತ್ ಸಿಂಗ್ ಕಾಮಕಾಂಡದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬಳಿಕ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಚ್ಚೆತ್ತುಗೊಂಡು ಜಂಟಿ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದೆ.
ಅಮರ್ಜಿತ್ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿದ್ದು, ಪೈಲೆಟ್ ಆಗುವ ಕನಸು ಹೊತ್ತ ಹೆಣ್ಣುಮಕ್ಕಳ ಬಾಳುಹಾಳು ಮಾಡುತ್ತಿದ್ದಾರೆ ಎಂದ ನೊಂದ ವಿದ್ಯಾರ್ಥಿಗಳು ಆರೋಪಿಸಿದ್ದರು. ವಿದ್ಯಾರ್ಥಿನಿಯರಿಗೆ ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ ಎಂದು ಹೇಳಿ ಬೆಡ್ ರೂಂ ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಅಮರ್ಜಿತ್ ಸಿಂಗ್ ಮೇಲೆ ಕೇಳಿ ಬಂದಿತ್ತು. ಇದನ್ನೂ ಓದಿ: ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ – ವಿದ್ಯಾರ್ಥಿಗಳಿಗೆ ವಿಂಗ್ ಕಮಾಂಡರ್ನಿಂದ ಪೋಲಿ ಮೆಸೇಜ್
ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಮಾತನಾಡಿ, “ದೂರುಗಳು ಬಂದಿದೆ. ಆದರೆ ನಮಗೆ ವಿಡಿಯೋ ದಾಖಲೆ ಹಾಗೂ ಮೆಸೇಜ್ ದಾಖಲೆಗಳು ಇರಲಿಲ್ಲ. ಪಬ್ಲಿಕ್ ಟಿವಿ ವರದಿ ಬಳಿಕ ಈ ದಾಖಲೆ ಪರಿಶೀಲಿಸಿ ಕ್ರಮಗೊಳ್ಳುತ್ತೇವೆ. ಈಗಾಗಲೇ ಬೇರೆ ತರಬೇತುದಾರರಿಗೆ ಟೆಂಡರ್ ಕರೆಯಲಿದ್ದೇವೆ. ಏಕಾಏಕಿ ಅಮರ್ಜಿತ್ ನನ್ನು ವಜಾಗೊಳಿಸಿದರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ಹಾಗಾಗಿ ಪರ್ಯಾಯ ಫ್ಲೈಯಿಂಗ್ ಟ್ರೈನರ್ ಸಿಕ್ಕ ತಕ್ಷಣ ಈತನನ್ನು ಅಮಾನತು ಮಾಡಲಿದ್ದೇವೆ. ಈ ವರದಿಯ ಬಗ್ಗೆ ಉಪಮುಖ್ಯಮಂತ್ರಿ, ಇಲಾಖಾ ಸಚಿವ ಪರಮೇಶ್ವರ್ ಅವರ ಗಮನಕ್ಕೂ ತಂದಿದ್ದೇನೆ” ಎಂದು ತಿಳಿಸಿದ್ದಾರೆ.
ಅಮರ್ಜಿತ್ ವಿದ್ಯಾರ್ಥಿನಿಯರಿಗೆ ಮಂಚಕ್ಕೆ ಬಾರೇ ಎಂದು ಕರೆದು ಬೆಡ್ ರೂಂ ಫೋಟೋ ಕಳುಹಿಸಿದ್ದರು. ಅಲ್ಲದೇ ವಿದ್ಯಾರ್ಥಿನಿಗೆ ಐದು ತಿಂಗಳಲ್ಲಿ ಬರೋಬ್ಬರಿ 900 ಮೆಸೇಜ್ ಮಾಡಿದ್ದಾರೆ. ಅಮರ್ಜಿತ್ ವಿದ್ಯಾರ್ಥಿನಿಯರಿಗೆ ಕಳುಹಿಸಿರುವ ಪೋಲಿ ವಾಟ್ಸಪ್ ಮಸೇಜ್ ಗಳ ಸ್ಕ್ರೀನ್ ಶಾಟ್ಸ್ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv