ಬೆಂಗಳೂರು: ಶಾಲೆ ಆರಂಭವಾದರೂ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಮಾಡದ ಬಗ್ಗೆ ಪಬ್ಲಿಕ್ ಟಿವಿ ಪ್ರಸಾರ ಮಾಡಿದ್ದ ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ಕೊನೆಗೂ ಶಾಲಾ ಮಕ್ಕಳ ಶೂ, ಸಾಕ್ಸ್ಗೆ ಅನುದಾನ ಬಿಡುಗಡೆ ಮಾಡಿದೆ.
ಶೂ, ಸಾಕ್ಸ್ ವಿತರಣೆಗೆ 132 ಕೋಟಿ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ ಶಾಲಾ ಎಸ್‌ಡಿಎಂಸಿಗಳ ಮೂಲಕ ವಿತರಣೆ ಮಾಡಲಿದೆ. ಕಳೆದ ಎರಡು ವರ್ಷಗಳಿಂದ 1 ರಿಂದ 10ನೇ ತರಗರತಿ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಮಾಡಿರಲಿಲ್ಲ. ಕೋವಿಡ್, ಆರ್ಥಿಕ ಹಿಂಜರಿತದ ನೆಪವೊಡ್ಡಿ ಶೂ, ಸಾಕ್ಸ್ ವಿತರಣೆಗೆ ಬ್ರೇಕ್ ಹಾಕಿತ್ತು. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ
ಜುಲೈ 1 ರಂದು `ನ್ಯೂಸ್ ಕೆಫೆ’ ವಿಶೇಷ ಕಾರ್ಯಕ್ರಮದಲ್ಲಿ ಸುದ್ದಿ ಪ್ರಸಾರ ಮಾಡಿದ್ದ ಪಬ್ಲಿಕ್ ಟಿವಿ, ಶೂ, ಸಾಕ್ಸ್ ನೀಡದ ಬಗ್ಗೆ ಸರ್ಕಾರವನ್ನ ತರಾಟೆಗೆ ತೆಗೆದುಕೊಂತ್ತು. ವರದಿಯಿಂದ ಎಚ್ಚೆತ್ತ ಶಿಕ್ಷಣ ಇಲಾಖೆ ಸರ್ಕಾರದ ಗಮನಕ್ಕೆ ತಂದಿದ್ದು, ಅನುದಾನ ಬಿಡುಗಡೆಯಾಗುವಂತೆ ಮಾಡಿದೆ.